ಮಾಡ್ಬಾರದ್ದನ್ನ ಮಾಡಿದ್ರೆ.. ಆಗ್ಬಾರದ್ದು ಆಗತ್ತೆ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ-ಗುಂಡಿಗೆ ಗಟ್ಟಿ ಇರೋರು ಮಾತ್ರ ನೋಡಿ
ಸಾಮಾನ್ಯವಾಗಿ ರೈಲು ಬರುವ 10-15 ನಿಮಿಷದ ಮೊದಲೇ ಗೇಟ್‌ಗಳಲ್ಲಿ ರೈಲ್ವೆ ಸಿಬ್ಬಂದಿ ಯಾವುದೇ ವಾಹನಗಳು ಹೋಗದಂತೆ ಕ್ಲೋಸ್ ಮಾಡಿರುತ್ತಾರೆ. ಆದರೆ ಬೇರೆ ಭಾಗಗಳಲ್ಲಿ ರೈಲು ಹಳಿಗಳ ಮೇಲೆ ಕೆಲ ಸೆಲ್ಪೀ ಪ್ರೇಮಿಗಳು ಹುಚ್ಚಾಟ ಮೆರೆದು ಕೊನೆಗೆ ಆಪತ್ತಿಗೊಳಗಾದ ಘಟನೆಗಳು ನಡೆದಿವೆ. ಹಾಗೆಯೇ ಇದೀಗ ಯುವತಿಯೊಬ್ಬಳು ಮಾಡ್ಬಾರದ್ದನ್ನ ಮಾಡಿ ತನ್ನ ಪ್ರಾಣ ಕಳೆದುಕೊಂಡ ಘಟನೆ ಜರುಗಿದ್ದು, ಈ ವಿಡಿಯೋ ನೋಡುವವರ ಗುಂಡಿಗೆ ಗಟ್ಟಿಯಾಗಿರಬೇಕಾಗುತ್ತದೆ. ಹಾಗಾದರೆ ಈ ಘಟನೆಯಲ್ಲಿ ಆಗಿದ್ದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಲಿಸುತ್ತಿದ್ದ ರೈಲಿನ ಮುಂದೆ ನಿಂತು ಸೆಲ್ಪೀ ತೆಗೆದುಕೊಳ್ಳುತ್ತಿದ್ದ ವೇಳೆ ರೈಲು ತಲೆಗೆ ಡಿಕ್ಕಿ ಹೊಡೆದು ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮೆಕ್ಸಿಕೋದ ಹಿಡಾಲ್ಗೋದಲ್ಲಿ ನಡೆದಿದೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಯುವತಿ ಹಾರಿಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕನ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಡುಲ್ಸೆ ಅಲೊಂಡ್ರಾ (28) ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಮಹಿಳೆಯಾಗಿದ್ದಾರೆ.

ರೈಲು ನೋಡಲು ನೆರೆದಿದ್ದ ಜನಸಾಗರ: ಕೆನಡಾದಿಂದ ಮೆಕ್ಸಿಕೋ ನಗರಕ್ಕೆ ಪ್ರಯಾಣಿಸುವ ಸ್ಟೀಮ್ ಇಂಜಿನ್ ರೈಲಿನಲ್ಲಿ ಪ್ರತಿನಿತ್ವೂ ನೂರಾರು ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಹಿಡಾಲ್ಗೊದಲ್ಲಿ ಸಂಚರಿಸುವ ವೇಳೆ ಕೆನಡಿಯನ್ Pacific 2816 ಎಂದೇ ಪ್ರಖ್ಯಾತಿ ಆಗಿರುವ ಲೋಕೋಮೋಟಿವ್ ಎಂಪ್ರೆಸ್ 2816ಅನ್ನು ನೋಡಲು ಜನಸಾಗರವೇ ನೆರೆದಿತ್ತು. ಇನ್ನು ಈ ವೇಳೆ ಡುಲ್ಸೆ ಅಲೊಂಡ್ರಾ (28) ಎಂಬ ಯುವತಿ ಚಲಿಸುತ್ತಿರುವ ರೈಲಿನ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಸಾವನ್ನಪ್ಪಿದ ಮಹಿಳೆ ಹಿನ್ನೆಲೆ ಏನು?: ರೈಲು ಹತ್ತಿರ ಬರುವುದನ್ನು ಕಾಯುತ್ತಿದ್ದ ಆಕೆ ಮೊಣಕಾಲೂರಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ರೈಲು ಎಂಜಿನ್‌ನ ಮುಂಭಾಗದ ಭಾಗವು ಆಕೆಯ ತಲೆಗೆ ಹೊಡೆದಿದೆ. ಈ ರಭಸಕ್ಕೆ ತಕ್ಷಣವೇ ನೆಲಕ್ಕೆ ಬಿದ್ದು ಆಕೆ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಡುಲ್ಸೆ ಅಲೊಂಡ್ರಾ ಶಿಕ್ಷಕಿಯಾಗಿದ್ದು, ಆಕೆಗೆ ಒಂದು ಪುಟ್ಟ ಮಗು ಇದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
MEXICO - In Hidalgo, a famous train that comes from Canada and travels all the way to Mexico City, attracting locals, struck a woman who was trying to take a selfie as the train approached. She passed at the scene. Article in comments. pic.twitter.com/32XdsCehEB
— The Many Faces of Death (@ManyFaces_Death) June 5, 2024
ಅದ್ಕೆ ದೊಡ್ಡೋರು ಹೇಳೋದು ಮಾಡ್ಬಾರದ್ದನ್ನ ಮಾಡಿದರೆ ಆಗ್ಬಾರದ್ದು ಆಗತ್ತೆ ಅಂತಾ. ಈ ಘಟನೆಯೂ ಅದೇ ರೀತಿ ನಡೆದಿದೆ. ಅದರಲ್ಲೂ ಸೂಕ್ತವಲ್ಲದ ಪ್ರದೇಶಗಳಲ್ಲಿ ಸೆಲ್ಪೀ ಕ್ಲಿಕ್ಕಿಸಿಕೊಳ್ಳುವವರು ಇದನ್ನು ಗಮನಿಸಲೇಬೇಕು.












Click it and Unblock the Notifications