ಇಶಾ ಅಂಬಾನಿಯ ಒಂದು ಫೇಲ್ಡ್‌ ಅಸೈನ್‌ಮೆಂಟ್, 10.3 ಲಕ್ಷ ಕೋಟಿ ರೂ. ಮೌಲ್ಯದ JIO ಹುಟ್ಟಿಗೆ ಕಾರಣವಾಗಿದ್ದು ಹೇಗೆ ಗೊತ್ತಾ?

ಭಾರತದ ಟೆಲಿಕಾಂ ಹಾಗೂ ಡಿಜಿಟಲ್ ವಲಯದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ ರಿಲಯನ್ಸ್ ಜಿಯೋ, ಇದೀಗ ದೇಶದ ಅತಿದೊಡ್ಡ ಜಿಯೋ ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಲು ಸಜ್ಜಾಗಿದೆ. ಅಂದಾಜು 30,213 ಕೋಟಿ ರೂಪಾಯಿ ಮೊತ್ತದ ಈ ಬೃಹತ್ ಸಾರ್ವಜನಿಕ ಷೇರು ವಿತರಣೆಯು ಅಕ್ಟೋಬರ್ 21 ರಿಂದ 23ರವರೆಗೆ ನಡೆಯಲಿದೆ.

ಆದರೆ, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿರುವ ರಿಲಯನ್ಸ್ ಜಿಯೋ ಐಡಿಯಾ ಹುಟ್ಟಿಕೊಂಡಿದ್ದು ಒಂದು ಸಣ್ಣ ಹಾಗೂ ತಮಾಷೆಯೆನಿಸುವ ಘಟನೆಯಿಂದ ಎಂಬುದು ಅನೇಕರಿಗೆ ತಿಳಿದಿಲ್ಲ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಇಶಾ ಅಂಬಾನಿ ಈ ಕುರಿತು ಅಚ್ಚರಿಯ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

A Missed College Assignment to Rs 10 3 Lakh Crore Valuation The Untold Origin Story of Jio IPO

ಆಕಾಶ್ ಮತ್ತು ಇಶಾ ಅಂಬಾನಿಯವರಿಗೆ ಈ ಜಿಯೋ ಐಡಿಯಾ ಹುಟ್ಟಿದು ಹೇಗೆ ಗೊತ್ತಾ?

ಅದು 2009-10ರ ಸಮಯ. ಇಶಾ ಅಂಬಾನಿ ಮತ್ತು ಅವರ ಸಹೋದರ ಆಕಾಶ್ ಅಂಬಾನಿ ಅಮೆರಿಕದಲ್ಲಿ ತಮ್ಮ ಉನ್ನತ ಶಿಕ್ಷಣವನ್ನ ಪಡೆಯುತ್ತಿದ್ದರು. ರಜೆಯ ದಿನಗಳಲ್ಲಿ ಅವರು ಅಮೆರಿಕದಿಂದ ಮುಂಬೈಗೆ ಹಿಂದಿರುಗಿದ್ದರು. ಆ ಸಮಯದಲ್ಲಿ ಇಶಾ ಅವರು ತಮ್ಮ ಕಾಲೇಜಿನಲ್ಲಿ ನೀಡಿರುವ ಪ್ರಮುಖ ಅಸೈನ್‌ಮೆಂಟ್ ಒಂದನ್ನ ಆನ್‌ಲೈನ್ ಮೂಲಕ ಕಳುಹಿಸಬೇಕಿತ್ತು. ಆದರೆ, ಇಂಟರ್ನೆಟ್ ಸಂಪರ್ಕ ತುಂಬಾ ನಿಧಾನವಾಗಿದ್ದ ಕಾರಣ, ಅವರು ಆ ಅಸೈನ್‌ಮೆಂಟ್ ಅನ್ನ ಸಬ್ಮಿಟ್ ಮಾಡಲು ಸಾಧ್ಯವಾಗಲಿಲ್ಲ.

ಪಾಶ್ಚಿಮಾತ್ಯ ದೇಶಗಳಲ್ಲಿನ ವೇಗದ ಇಂಟರ್ನೆಟ್ ವ್ಯವಸ್ಥೆಯನ್ನ ನೋಡಿದ್ದ ಈ ಅಣ್ಣ-ತಂಗಿ, ಭಾರತದಲ್ಲಿ ಇಂಟರ್ನೆಟ್ ಸಂಪರ್ಕದ ಕೊರತೆ ಬಗ್ಗೆ ಗಂಭೀರವಾಗಿ ಚರ್ಚೆ ಆರಂಭಿಸಿದರು. "ಭಾರತವೇಕೆ ಡಿಜಿಟಲ್ ತಂತ್ರಜ್ಞಾನದಲ್ಲಿ ಹಿಂದೆ ಉಳಿಯಬೇಕು?" ಎಂಬ ಪ್ರಶ್ನೆ ಅವರಲ್ಲಿ ಮೂಡಿತು.

ಆ ಸಮಯದಲ್ಲಿ ಆಕಾಶ್ ಅಂಬಾನಿ, ಭಾರತದ ಮೂಲೆ ಮೂಲೆಗೂ ಉತ್ತಮ ಇಂಟರ್ನೆಟ್ ಸೌಲಭ್ಯವನ್ನ ಒದಗಿಸಲು ಹಾಗೂ ಜನರನ್ನ ಡಿಜಿಟಲ್ ಆರ್ಥಿಕತೆಗೆ ಸೇರಿಸಲು ಒಂದು ಬಲಿಷ್ಠ ಡಿಜಿಟಲ್ ಪ್ಲಾಟ್‌ಫಾರ್ಮ್ ಸ್ಥಾಪಿಸುವ ಪರಿಕಲ್ಪನೆಯನ್ನ ಮುಂದಿಟ್ಟರು. ಈ ಒಂದು ಸಣ್ಣ ಚರ್ಚೆಯೇ 2016ರಲ್ಲಿ ಜಿಯೋ ಆರಂಭವಾಗಲು ಅಡಿಪಾಯವಾಯಿತು.

ರಿಲಯನ್ಸ್ ಜಿಯೋ ಐಪಿಒ

ಅಂದು ಹುಟ್ಟಿದ ಈ ಆಲೋಚನೆಯು, ಇಂದು ದೇಶದ ಷೇರುಮಾರುಕಟ್ಟೆಯ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಆಗಿ ಹೊರಹೊಮ್ಮುತ್ತಿದೆ. ಇಶಾ ಅಂಬಾನಿ ಅವರ ಆ ಕಾಲೇಜು ಅಸೈನ್‌ಮೆಂಟ್ ಘಟನೆಯೇ ಇಂದು 27 ಕೋಟಿ ಹೊಸ ಈಕ್ವಿಟಿ ಷೇರುಗಳನ್ನ ಬಿಡುಗಡೆ ಮಾಡಲು ಕಾರಣವಾಗಿದೆ.

ರಿಲಯನ್ಸ್ ಜಿಯೋ ಐಪಿಒ ಪ್ರತಿ ಷೇರಿಗೆ 1,065 ರಿಂದ 1,119 ರೂಪಾಯಿ ಬೆಲೆಯನ್ನ ನಿಗದಿಪಡಿಸಿದೆ. ಈ ಐಪಿಒ ಮೂಲಕ ಸಂಗ್ರಹವಾಗುವ ಹಣವನ್ನ ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಸಾಲ ತೀರಿಸಲು ಹಾಗೂ ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸಲಾಗುವುದು ಎಂದು ಕಂಪನಿ ತಿಳಿಸಿದೆ.

ಜಿಯೋ ಪ್ಲಾಟ್‌ಫಾರ್ಮ್ಸ್ ಮೌಲ್ಯ

ಕೇವಲ ಫ್ರೀ ಕರೆಗಳು ಮತ್ತು ಕಡಿಮೆ ಬೆಲೆಯ ಡೇಟಾ ನೀಡುವುದರೊಂದಿಗೆ ಆರಂಭವಾದ ಜಿಯೋ, ಈಗ ಕೇವಲ ಟೆಲಿಕಾಂ ಕಂಪನಿಯಾಗಿ ಉಳಿದಿಲ್ಲ. ಇದು ಬ್ರಾಡ್‌ಬ್ಯಾಂಡ್, ಎಂಟರ್‌ಪ್ರೈಸ್ ಸೇವೆಗಳು, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಅಪ್ಲಿಕೇಶನ್‌ಗಳನ್ನ ಒಳಗೊಂಡಿರುವ ದೊಡ್ಡ ಡಿಜಿಟಲ್ ವೇದಿಕೆಯಾಗಿ ಬೆಳೆದಿದೆ. ಪ್ರಸ್ತುತ ಮುಂಬರುವ ಈ ಜಿಯೋ ಐಪಿಒ ಮೂಲಕ ಜಿಯೋ ಪ್ಲಾಟ್‌ಫಾರ್ಮ್ಸ್ ಮೌಲ್ಯ ಸುಮಾರು 10.3 ಲಕ್ಷ ಕೋಟಿ ರೂಪಾಯಿ ಅಂದರೆ 108 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ.

ಜಿಯೋ ಆರಂಭಕ್ಕೂ ಮುನ್ನ ಭಾರತದಲ್ಲಿ 1ಜಿಬಿ ಡೇಟಾ ಪಡೆಯಲು ನೂರಾರು ರೂಪಾಯಿ ಖರ್ಚು ಮಾಡಬೇಕಿತ್ತು. ಆದರೆ ಜಿಯೋ ಮಾರುಕಟ್ಟೆಗೆ ಕಾಲಿಡುತ್ತಲೇ ಅಗ್ಗದ ಡೇಟಾ ಹಾಗೂ ಉಚಿತ ವಾಯ್ಸ್ ಕರೆಗಳ ಮೂಲಕ ಟೆಲಿಕಾಂ ವಲಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿತು.

ಅಂದು, ಆ ಒಂದು ಕಾಲೇಜು ಅಸೈನ್‌ಮೆಂಟ್ ಸಮಸ್ಯೆಯು ಇಷ್ಟು ದೊಡ್ಡ ಮಟ್ಟದ ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡುತ್ತದೆ ಎಂದು ಸ್ವತಃ ಅಂಬಾನಿ ಕುಟುಂಬವೂ ಊಹಿಸಿರಲಿಲ್ಲ. ಇಂದು ದೇಶದ ಮೂಲೆ ಮೂಲೆಗೂ ತಡೆರಹಿತ ನೆಟ್‌ವರ್ಕ್‌ಗಳನ್ನ ತಲುಪಿಸುವಲ್ಲಿ ಈ ಕಂಪನಿ ಯಶಸ್ವಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+