ಒಂದೇ ವರ್ಷದಲ್ಲಿ 9,940 ‘ಕಾಂಡೋಮ್’ ಆರ್ಡರ್ ಮಾಡಿದ ಮಹಾಶಯ!

ಭಾರತದಲ್ಲಿ 'ಕಾಂಡೋಮ್' ಅಗತ್ಯತೆ ತುಂಬಾ ಇದೆ. ಯಾಕಂದ್ರೆ ಒಂದು ಕಡೆ ಜನಸಂಖ್ಯೆ ನಿಯಂತ್ರಣಕ್ಕೆ ಕಾಂಡೋಮ್ ಬಳಸಬೇಕಿದೆ. ಹಾಗೇ ಇನ್ನೊಂದು ಕಡೆ ಕಾಂಡೋಮ್ ಬಳಕೆ ಮಾಡುವುದರಿಂದ ಲೈಂಗಿಕ ರೋಗಗಳು ಹರಡುವುದನ್ನು ಕೂಡ ತಪ್ಪಿಸಬಹುದು. ಹೀಗಾಗಿ ಪದೇ ಪದೇ 'ಕಾಂಡೋಮ್' ವಿಚಾರ ಚರ್ಚೆಗೆ ಬರುತ್ತಿದೆ. ಆದರೆ ಇಲ್ಲೊಬ್ಬ ಮಹಾಶಯ, ಒಂದೇ ವರ್ಷದಲ್ಲಿ ಬರೋಬ್ಬರಿ 9,940 'ಕಾಂಡೋಮ್' ಆರ್ಡರ್ ಮಾಡಿದ್ದಾನಂತೆ!

ಆನ್‌ಲೈನ್ ಡೆಲಿವರಿ ಆ್ಯಪ್‌ ಆಗಿರುವ 'ಬ್ಲಿಂಕಿಟ್‌' ಹಲವು ವಸ್ತುಗಳನ್ನ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಅದ್ರಲ್ಲೂ 'ಬ್ಲಿಂಕಿಟ್‌' ಮೂಲಕ ಜನ ಏನನ್ನ ಹೆಚ್ಚಾಗಿ ಆರ್ಡರ್ ಮಾಡ್ತಾ ಇದ್ದಾರೆ ಗೊತ್ತಾ? ಈ ಬಗ್ಗೆ ಆಶ್ಚರ್ಯಕರ ಸಂಗತಿಯನ್ನ ಇದೀಗ 'ಬ್ಲಿಂಕಿಟ್‌' ಹೊರಹಾಕಿದೆ. ದಿನದ 24 ಗಂಟೆ ಕಾಲ ಯಾವಾಗ ಬೇಕಾದ್ರೂ ಯಾವುದೇ ವಸ್ತುವನ್ನ ತಲುಪಿಸುವ ಸೇವೆಯನ್ನು ನೀಡುತ್ತಿದೆ 'ಬ್ಲಿಂಕಿಟ್‌'. ಹಾಗೇ ಸುರಕ್ಷಿತ ಲೈಂಗಿಕ ಕ್ರಿಯೆಗೆ ಅಗತ್ಯ ಎನಿಸುವ 'ಕಾಂಡೋಮ್' ಡೆಲಿವರಿ ಕೂಡ ಮಾಡುತ್ತಿದೆ ಬ್ಲಿಂಕಿಟ್. ಇಲ್ಲೊಬ್ಬ ಗ್ರಾಹಕ 365 ದಿನದಲ್ಲಿ ಭರ್ಜರಿ 9,940 ಕಾಂಡೋಮ್ ಆರ್ಡರ್ ಮಾಡಿದ್ದಾನಂತೆ. ಹಾಗಾದ್ರೆ ಇದು ನಡೆದಿದ್ದು ಯಾವ ರಾಜ್ಯದಲ್ಲಿ?

A Man Ordered 9,940 Condoms In 365 Days On Blinkit

ಯಾರು ಈ ಮಹಾಶಯ ಗೊತ್ತೆ?

ಈಗ ಹೊಸ ಟ್ರೆಂಡ್ ಶುರುವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ಆರ್ಡರ್ ಮಾಡುವ ಪದ್ಧತಿ ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ ಯಾವುದೇ ವಸ್ತು ಬೇಕೆಂದರೂ ಆನ್‌ಲೈನ್ ಮಾರಾಟದ ಆ್ಯಪ್‌ಗೆ ಜನರು ಮುಗಿಬೀಳುತ್ತಾರೆ. ಹೀಗಿದ್ದಾಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಬ್ಬ ಗ್ರಾಹಕ, 'ಬ್ಲಿಂಕಿಟ್‌' ಅಪ್ಲಿಕೇಷನ್ ಮೂಲಕ ಕಳೆದ ವರ್ಷದಲ್ಲಿ 9,940 ಕಾಂಡೋಮ್‌ ಆರ್ಡರ್ ಮಾಡಿದ್ದಾರಂತೆ. ದಕ್ಷಿಣ ದೆಹಲಿಯ ಗ್ರಾಹಕ ಈ ಸಾಧನೆ ಮಾಡಿದ್ದು, ಈ ಸುದ್ದಿ ಇದೀಗ ಫುಲ್ ವೈರಲ್ ಆಗುತ್ತಿದೆ. ಇದಿಷ್ಟೇ ಅಲ್ಲ ಇನ್ನೂ ಅನೇಕ ಆಶ್ಚರ್ಯಕರ ಮಾಹಿತಿ ಇದೆ ಮುಂದೆ ಓದಿ.

ದಿನಕ್ಕೆ ಭರ್ಜರಿ 27 'ಕಾಂಡೋಮ್'!

ಹೌದು ಈಗ 'ಬ್ಲಿಂಕಿಟ್‌' ನೀಡಿರುವ ಮಾಹಿತಿ ಪ್ರಕಾರ ದಕ್ಷಿಣ ದೆಹಲಿಯ ಗ್ರಾಹಕರೊಬ್ಬರು ಭರ್ಜರಿ 9,940 ಕಾಂಡೋಮ್‌ ಆರ್ಡರ್ ಮಾಡಿ ವರ್ಷದ ವ್ಯಕ್ತಿಯಾಗಿದ್ದಾರೆ. ಅಂದರೆ ಪ್ರತಿ ದಿನಕ್ಕೆ ಸುಮಾರು 27 ಹಾಗೂ ಪ್ರತಿ ಗಂಟೆಗೆ 1ಕ್ಕೂ ಹೆಚ್ಚು ಕಾಂಡೋಮ್ ಲೆಕ್ಕ ಬರುತ್ತದೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸಂಚಲನ ಸೃಷ್ಟಿಸಿದೆ. ಕಾಂಡೋಮ್ ಜೊತೆಗೆ, ಒಬ್ಬ ಗ್ರಾಹಕ 1 ತಿಂಗಳಿಗೆ 38 ಒಳ ಉಡುಪು ಆರ್ಡರ್ ಮಾಡಿದ್ದಾರೆ. ಮತ್ತೊಬ್ಬರು, 2023ರಲ್ಲಿ 4,832 ಸಾಬೂನು ಖರೀದಿಸಿದ್ದು ದಿನಕ್ಕೆ ಸುಮಾರು 13ರ ಲೆಕ್ಕ ಬಂದಿದೆ.

ಇದರ ಜೊತೆಗೆ ಮತ್ತೊಬ್ಬ ಗ್ರಾಹಕ ವರ್ಷಕ್ಕೆ 2,670 ಟೂತ್ ಬ್ರಷ್ ಖರೀದಿಸಿದ್ದಾರೆ. ಅಂದರೆ, ಪ್ರತಿ ದಿನಕ್ಕೆ ಹತ್ತಿರ ಹತ್ತಿರ 7 ಟೂತ್ ಬ್ರಷ್ ಲೆಕ್ಕ ಬಂದಿದೆ. ಹೈದರಾಬಾದ್‌ ಗ್ರಾಹಕರೊಬ್ರು 17,000 ಕೆ.ಜಿ ಅಕ್ಕಿ ಆರ್ಡರ್ ಮಾಡಿದ್ದೆ ಹೊಸ ಸಾಧನೆ ಆಗಿದೆ. ಇನ್ನು ಬ್ಲಿಂಕಿಟ್‌ ಮಧ್ಯರಾತ್ರಿ ನಂತರ ಬರೋಬ್ಬರಿ 3.20 ಲಕ್ಷಕ್ಕೂ ಹೆಚ್ಚು ಮ್ಯಾಗಿ ಪ್ಯಾಕೆಟ್‌ನ ಡೆಲಿವರಿ ಮಾಡಿದೆಯಂತೆ. ಈ ಮಾಹಿತಿ ಈಗ ಸಿಕ್ಕಾಪಟ್ಟೆ ಚರ್ಚೆಗೆ ಕೂಡ ವೇದಿಕೆ ಒದಗಿಸಿದೆ. ಒಟ್ನಲ್ಲಿ ಹೊಸ ವರ್ಷದಲ್ಲಿ ಈ ಸುದ್ದಿ ಭಾರಿ ಚರ್ಚೆಗೆ ವೇದಿಕೆ ಒದಗಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಜನರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗೇ ಇನ್ನೂ ಕೆಲವರು ಆ ಗ್ರಾಹಕನ ಐಡೆಂಟಿಟಿ ಬಗ್ಗೆ ಈಗ ಕುತೂಹಲ ಭರಿತರಾಗಿದ್ದಾರೆ. ಯಾರು ಅದು ಎಂಬ ಪ್ರಶ್ನೆಯನ್ನ ಕೂಡ ಮಾಡುತ್ತಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+