ಐಎಎಸ್ ಅಧಿಕಾರಿಯ ಜತೆ ಕೇರಳ ಕಾಂಗ್ರೆಸ್ ಶಾಸಕನ ಲವ್ವಿ ಡವ್ವಿ

ಅರುವಿಕ್ಕಾರದ ಕಾಂಗ್ರೆಸ್ ಶಾಸಕ ಕೆ ಎಸ್ ಶಬರಿನಾಥನ್ ತಿರುವನಂತಪುರಂ ಉಪ ಜಿಲ್ಲಾಧಿಕಾರಿ ದಿವ್ಯಾ ಎಸ್ ಐಯ್ಯರ್ ರನ್ನು ವರಿಸಲಿದ್ದಾರೆ. ಹೀಗಂಥ ಮಂಗಳವಾರ ಅವರೇ ತಮ್ಮ ಫೇಸ್ಬುಕ್ಕಿ ನ ಲ್ಲಿ ಬರೆದುಕೊಂಡಿದ್ದಾರೆ

ತಿರುವನಂತಪುರಂ, ಮೇ 3: ಕೇರಳದ ಕಾಂಗ್ರೆಸ್ ಶಾಸಕರೊಬ್ಬರು ಐಎಎಸ್ ಅಧಿಕಾರಿಯೊಬ್ಬರನ್ನು ಸದ್ಯದಲ್ಲೇ ವರಿಸಲಿದ್ದಾರೆ. ಅಂದ ಹಾಗೆ ಇವರದ್ದು ಲವ್ ಮ್ಯಾರೇಜ್.

ಅರುವಿಕ್ಕಾರದ ಕಾಂಗ್ರೆಸ್ ಶಾಸಕ ಕೆ ಎಸ್ ಶಬರಿನಾಥನ್ ತಿರುವನಂತಪುರಂ ಉಪ ಜಿಲ್ಲಾಧಿಕಾರಿ ದಿವ್ಯಾ ಎಸ್ ಐಯ್ಯರ್ ರನ್ನು ವರಿಸಲಿದ್ದಾರೆ. ಹೀಗಂಥ ಮಂಗಳವಾರ ಅವರೇ ತಮ್ಮ ಫೇಸ್ಬುಕ್ಕಿ ನ ಲ್ಲಿ ಬರೆದುಕೊಂಡಿದ್ದಾರೆ. ಹೀಗೆ ರಾಜಕಾರಣಿ ಮತ್ತು ಆಡಳಿತಾಧಿಕಾರಿಯ ನಡುವಿನ ಮದುವೆಯೊಂದು ಕೇರಳದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

A love story like none other: Kerala politician to marry IAS officer

ಇವರಿಬ್ಬರ ಲವ್ವಿ ಡವ್ವಿಗೆ ಸಂಬಂಧಿಸಿದಂತೆ ಗಾಳಿ ಸುದ್ದಿಗಳು ಓಡಾಡುತ್ತಿದ್ದವು. ಆದರೆ ಇದಕ್ಕೆಲ್ಲಾ ಪೂರ್ಣ ವಿರಾಮ ಹಾಕಿರುವ ಶಬರಿನಾಥನ್ 'ತಾನು ಡಾ. ದಿವ್ಯಾ ಎಸ್ ಐಯ್ಯರ್ ರನ್ನು ವರಿಸಲಿದ್ದೇನೆ. ಎರಡೂ ಕುಟುಂಬಗಳು ಈ ಮದುವೆಗ ಒಪ್ಪಿವೆ. ನಿಮ್ಮ ಆಶೀರ್ವಾದ ನಮ್ಮ ಮದುವೆಗೆ ಇದೆ ಎಂದು ಭಾವಿಸಿದ್ದೇನೆ," ಎನ್ನುವ ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ.

ಹೀಗೆ ರಾಜಕಾರಣಿಯೊಬ್ಬರು ಅಧಿಕಾರಿಯನ್ನು ಮದುವೆಯಾಗುತ್ತಿರುವ ಅಪರೂಪದ ನಿದರ್ಶನ ಕೇರಳದಲ್ಲಿ ವಿಚಿತ್ರ ಆಕರ್ಷಣೆಗೆ ಕಾರಣವಾಗಿದೆ. ಜೂನಿನಲ್ಲಿ ಈ ಜೋಡಿ ಹಸೆಮಣೆ ಏರಲಿದೆ.

ವಿಶೇಷ ಎಂದರೆ ಶಬರಿನಾಥನ್ ತಂದೆಯೂ ರಾಜಕಾರಣಿಯಾಗಿದ್ದು ಪ್ರೀತಿಸಿ ಉಪನ್ಯಾಸಕಿಯೊಬ್ಬರನ್ನು ವಿವಾಹವಾಗಿದ್ದಾರೆ. ಈ ಲವ್ ಸ್ಟೋರಿಯನ್ನೇ ಆಧರಿಸಿ ಮಮ್ಮೂಟಿ ನಾಯಕ ನಟರಾಗಿ ಮಲಯಾಳಂ ಭಾಷೆಯಲ್ಲಿ ಸಿನಿಮಾವೂ ಬಂದಿದೆ.

ಇದೀಗ ಅವರ ಮಗ ಹಾಗೂ ರಾಜಕಾರಣಿ 33 ವರ್ಷದ ಶಬರಿನಾಥನ್ 32 ವರ್ಷದ ಐಎಎಸ್ ಅಧಿಕಾರಿಯನ್ನು ಮದುವೆಯಾಗಲಿದ್ದಾರೆ. (ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+