ಪತ್ರಕರ್ತನಿಗೂ ಅಂಟಿಕೊಂಡಿತು ಕೊರೊನಾ ಸೋಂಕು

ಶಿಮ್ಲಾ, ಏಪ್ರಿಲ್ 15: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಪೊಲೀಸರಿಗೂ ಸೋಂಕು ಕಾಣಿಸಿಕೊಂಡಿರುವ ಸುದ್ದಿಗಳು ವರದಿಯಾಗಿತ್ತು. ಇದೀಗ, ಪತ್ರಕರ್ತರಲ್ಲಿಯೂ ಕೊವಿಡ್ ಸೋಂಕು ಪತ್ತೆಯಾಗುತ್ತಿದೆ.

ಹಿಮಾಚಲ ಪ್ರದೇಶದಲ್ಲಿ ಮುದ್ರಣ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರೊಬ್ಬರಿಗೆ ಸೋಂಕು ತಗುಲಿದ್ದು, ಕ್ವಾರೆಂಟೈನ್‌ಗೆ ಒಳಪಟ್ಟಿದ್ದಾರೆ.

ಇದಕ್ಕೂ ಮುಂಚೆ ಮುಂಬೈನಲ್ಲಿ ಮೂವರು ಪತ್ರಕರ್ತರಿಗೆ ಕೊರೊನಾ ಸೋಂಕು ದಢೃವಾಗಿತ್ತು. ಬಾಂದ್ರಾದ ಹೋಟೆಲ್‌ವೊಂದರಲ್ಲಿ ಉಳಿದು, ಅಲ್ಲಿಂದ ಇತರೆ ಕೆಲಸಗಳಿಗೆ ಹೋಗುತ್ತಿದ್ದರು. ಈ ವೇಳೆ ಮತ್ತಷ್ಟು ಪತ್ರಕರ್ತರು ಇವರ ಸಂಪರ್ಕದಲ್ಲಿದ್ದರು. ಹಾಗಾಗಿ, ಅವರ ಸ್ನೇಹಿತರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

A Journalist Tested Positive For COVID19

ಮುಂಬೈ ಮತ್ತು ಹಿಮಾಚಲ ಪ್ರದೇಶದಲ್ಲಿ ಮಾತ್ರವಲ್ಲ, ಇತರೆ ರಾಜ್ಯಗಳಲ್ಲಿಯೂ ಪತ್ರಕರ್ತರಿಗೆ ಸೋಂಕು ತಗುಲಿದೆ ಎಂದು ಸುದ್ದಿಗಳು ವರದಿಯಾಗಿದೆ.

ಇನ್ನು ಹಿಮಾಚಲ ಪ್ರದೇಶದಲ್ಲಿ ಇದುವರೆಗೂ 33 ಕೊರೊನಾ ಕೇಸ್ ಖಚಿತವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಅದರಲ್ಲಿ 13 ಜನರು ಚೇತರಿಸಿಕೊಂಡಿದ್ದಾರೆ. 18 ಜನರು ಐಸೋಲೇಶನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+