Video: ಮದುವೆ ಮಂಟಪದಲ್ಲಿ ಲ್ಯಾಪ್ ಟಾಪ್ ಹಿಡಿದು ಕುಳಿತ ಮದುಮಗ!

ನವದೆಹಲಿ, ಜುಲೈ 25: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಶುರು ಆಗಿದ್ದೇ ಆಗಿದ್ದು ಒಂದು ಕಡೆ ಸಾವು-ನೋವು ಕಥೆಯನ್ನೇ ಕೇಳುವಂತಾಗಿದೆ. ಇದರ ಮಧ್ಯೆ ಸಾಕಷ್ಟು ವಿಚಿತ್ರ ಹಾಗೂ ವಿಭಿನ್ನ ಘಟನೆಗಳು ನಮ್ಮ ನಡುವೆಯೇ ನಡೆದು ಹೋಗಿರುತ್ತವೆ.

Recommended Video

      ವರ್ಕ್‌ ಫ್ರಾಂ ಮದುವೆ ಮಂಟಪ..! ಸಾಮಾಜಿಕ ಜಾಲತಾಣದಲ್ಲಿ ನಗೆ ಬಾಂಬ್‌ ಸಿಡಿಸಿದ ವೈರಲ್ ವಿಡಿಯೋ

      ದೇಶದಲ್ಲಿ ವಿಚಿತ್ರ ಹಾಗೂ ವಿಭಿನ್ನ ಎನ್ನಿಸುವ ಅಂಥದ್ದೇ ಒಂದು ಘಟನೆಗೆ ಸಂಬಂಧಿಸಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಕೊವಿಡ್-19 ಕಾಲದಲ್ಲೇ ಹಲವು ಜೋಡಿಗಳು ಚೀಪ್ ಆಂಡ್ ಬೆಸ್ಟ್ ಅಂತಾ ಹಸೆಮಣೆ ಏರಿದ್ದಾರೆ. ಆದರೆ ಇಲ್ಲೊಬ್ಬ ಭೂಪ ಹಸೆಮಣೆ ಮೇಲೂ ಲ್ಯಾಪ್ ಟಾಪ್ ಹಿಡಿದು ಕೂತಿದ್ದಾನೆ.

      ಅಚ್ಚರಿ ಎನ್ನಿಸಿದರೂ ಇದು ಸತ್ಯ ಘಟನೆ. ವರ್ಕ್ ಫ್ರಾಮ್ ಆಫೀಸ್ ಎನ್ನುವ ಪದ್ಧತಿ ಕೊರೊನಾವೈರಸ್ ಕಾಲದಲ್ಲಿ ವರ್ಕ್ ಫ್ರಾಮ್ ಹೋಮ್ ಎಂದು ಬದಲಾಗಿದೆ. ಮಲ್ಟಿ ನ್ಯಾಷನಲ್ ಕಂಪನಿಗಳ ಜೊತೆಗೆ ಹಲವು ದೇಶೀಯ ಕಂಪನಿಗಳು ಈ ವರ್ಕ್ ಫ್ರಾಮ್ ಹೋಮ್ ಪದ್ಧತಿಯನ್ನು ಅಳವಡಿಸಿಕೊಂಡಿವೆ. ತಮ್ಮ ಉದ್ಯೋಗಿಗಳಿಗೆ ಮನೆಗಳಿಂದಲೇ ಕೆಲಸ ನಿರ್ವಹಿಸುವಲ್ಲಿ ಅವಕಾಶ ನೀಡಿವೆ.

      A Groom is Working in Marriage Hall; This Video is Viral

      ಮದುವೆ ಮಂಟಪದಲ್ಲೂ ಕೆಲಸ!

      ಸಾಮಾನ್ಯವಾಗಿ ಮನೆಗಳಲ್ಲಿ ಕುಳಿತು ವರ್ಕ್ ಫ್ರಾಮ್ ಹೋಮ್ ಮಾಡುವವರನ್ನು ನೋಡಿರುತ್ತೀರ. ಇಂಥವರ ಮಧ್ಯೆ ಇಲ್ಲೊಬ್ಬ ಭೂಪ ಮದುವೆ ಮಂಟಪದಲ್ಲಿಯೂ ಲ್ಯಾಪ್ ಟಾಪ್ ಹಿಡಿದು ಕೆಲಸ ಮಾಡುತ್ತಿರುವುದು ಸಖತ್ ಸುದ್ದಿಯಾಗಿದೆ. ಅದ್ಧೂರಿ ಮಂಟಪದಲ್ಲಿ ಮದುವೆಗೆ ಎಲ್ಲ ಸಿದ್ಧತೆಗಳಾಗಿದ್ದರೂ, ಮದುಮಗ ಮಾತ್ರ ಅದಕ್ಕೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ತನ್ನ ಪಾಡಿಗೆ ತಾನು ಕೆಲಸದಲ್ಲಿ ಬ್ಯುಸಿ ಆಗಿದ್ದನು. ಮಾಂಗಲ್ಯಧಾರಣೆ ಸಮಯದಲ್ಲಿ ಲ್ಯಾಪ್ ಟಾಪ್ ಹಿಡಿದು ಕುಳಿತ ಮದುಮಗನನ್ನು ಪುರೋಹಿತರು ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+