ಡಾ.ರಾಜ್‌ಕುಮಾರ್, ಇಂದಿರಾ ಗಾಂಧಿ ಜೊತೆ ಮೋದಿ! ಇದು ಸತ್ಯವೇ?
ನವದೆಹಲಿ, ಮೇ 14: ರಾ.ರಾಜ್‌ಕುಮಾರ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಪಾರ್ವತಮ್ಮ ರಾಜ್ ಕುಮಾರ್ ಅವರ ಜೊತೆಯಲ್ಲಿ ನರೇಂದ್ರ ಮೋದಿ ಅವರು ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹೌದು, ನಿಜ ಕಪ್ಪು ಬಿಳುಪಿನ ಈ ಚಿತ್ರದಲ್ಲಿ ಜನರ ಜೊತೆ ಹಿಂದೆ ನರೇಂದ್ರ ಮೋದಿ ಅವರು ಇಣುಕಿ ಇಂದಿರಾ ಗಾಂಧಿ ಅವರನ್ನು ನೋಡುತ್ತಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆದರೆ ಈ ಚಿತ್ರ ನಕಲಿ ಆಗಿದೆ.

ಸಂಗೀತ ಮ್ಯೂಸಿಕ್‌ನ ಕಾರ್ಯಕ್ರಮವೊಂದರಲ್ಲಿ ರಾಜ್ ಕುಮಾರ್ ಅವರನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಭೇಟಿ ಆಗಿದ್ದರು, ಆಗ ಈ ಚಿತ್ರವನ್ನು ತೆಗೆಯಲಾಗಿತ್ತು, ಇದರಲ್ಲಿ ನರೇಂದ್ರ ಮೋದಿ ಇಲ್ಲ ಆದರೆ ಯಾರೋ ಕಿಡಿಗೇಡಿಗಳು ಚಿತ್ರದಲ್ಲಿ ಇರುವ ಬೇರೆಯೊಬ್ಬರಿಗೆ ನರೇಂದ್ರ ಮೋದಿ ಅವರ ಹಳೆಯ ಚಿತ್ರದ ತಲೆ ಅಂಟಿಸಿ ವೈರಲ್ ಮಾಡಿದ್ದಾರೆ.
ಈ ಚಿತ್ರವನ್ನು ಹಂಚಿಕೊಂಡಿರುವ ಹಲವರು, ಮೋದಿ ಸಹ ಒಮ್ಮೆ ಕಾಂಗ್ರೆಸ್ ಪಕ್ಷದ ಸದಸ್ಯರೇ ಆಗಿದ್ದರು, ಭಕ್ತರೇ ಇದಕ್ಕೇನು ಹೇಳುತ್ತೀರಿ ಎಂದು ವ್ಯಂಗ್ಯ ಮಾಡಿದ್ದಾರೆ. ಆದರೆ ಇದು ನಕಲಿ ಚಿತ್ರವಾಗಿದ್ದು, ನಿಜವಾದ ಚಿತ್ರದಲ್ಲಿ ಮೋದಿ ಅವರು ಇಲ್ಲ. ಬದಲಿಗೆ ಬೇರೆಯಾರದ್ದೋ ಚಿತ್ರಕ್ಕೆ ಮೋದಿ ಅವರ ಹಳೆಯ ಚಿತ್ರವನ್ನು ಅಂಟಿಸಲಾಗಿದೆ.

ಇತ್ತೀಚೆಗೆ ಈ ರೀತಿಯ ನಕಲಿ ಚಿತ್ರಗಳ ಹಾವಳಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗುತ್ತಿದೆ. ಪ್ರಿಯಾಂಕಾ ಗಾಂಧಿ ಶಿಲುಬೆ ಧರಿಸಿದ್ದಾರೆ ಎಂಬ ಸುಳ್ಳು ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಯೋಗಿ ಆದಿತ್ಯನಾಥ ಅವರು ಹಸುವಿನ ಮೂತ್ರಿ ಕುಡಿಯುತ್ತಿರುವ ನಕಲಿ ಚಿತ್ರವೂ ಭಾರಿ ಸದ್ದು ಮಾಡಿತ್ತು.












Click it and Unblock the Notifications