ವಾಟ್ಸ್‌ಆಪ್ ಕುರಿತು ವಾಟ್ಸ್‌ ಆಫ್‌ನಲ್ಲಿ ಹರಿದಾಡುತ್ತಿದೆ ಸುಳ್ಳು ಸುದ್ದಿ

ನವದೆಹಲಿ, ಜುಲೈ 04: ಸುಳ್ಳು ಸುದ್ದಿಗಳ ಆಗರವೆಂದೇ ಕರೆಯಲಾಗುವ ವಾಟ್ಸ್‌ ಆಪ್‌ ಕುರಿತಾಗಿ ವಾಟ್ಸ್‌ ಆಪ್‌ನಲ್ಲಿಯೇ ಸುಳ್ಳು ಸುದ್ದಿಯೊಂದು ಕೆಲವು ದಿನಗಳಿಂದ ಹರಿದಾಡುತ್ತಿದೆ.

ಹೌದು, ವಾಟ್ಸ್‌ಆಪ್‌ ಅನ್ನು ಶೀಘ್ರವೇ ನಿಷೇಧಿಸಲಾಗುತ್ತದೆ, ಅದರ ಬದಲಿಗೆ ಕೇಂದ್ರ ಸರ್ಕಾರವೇ ಹೊಸದೊಂದು ಆಪ್ ಅನ್ನು ಬಿಡುಗಡೆ ಮಾಡಲಿದ್ದು, ಎಲ್ಲರೂ ಅದನ್ನೇ ಬಳಸಬೇಕು ಎಂದು ಹೇಳುತ್ತಿರುವ ಸಂದೇಶಗಳು ಹಲವು ವಾಟ್ಸ್‌ ಆಪ್ ಬಳಕೆದಾರರಿಗೆ ರವಾನೆ ಆಗುತ್ತಿವೆ.

ಆದರೆ ಇದೊಂದು ಸುಳ್ಳು ಸುದ್ದಿಯಾಗಿದ್ದು, ಭಾರತದಲ್ಲಿ ವಾಟ್ಸ್‌ ಆಪ್ ನಿಷೇಧ ಆಗುತ್ತಿಲ್ಲ, ಅಷ್ಟೆ ಅಲ್ಲ ಮೋದಿ ಅವರು ಯಾವುದೇ ಹೊಸ ಮೆಸೆಂಜರ್ ಆಪ್ ಅನ್ನೂ ಪರಿಚಯಿಸುತ್ತಿಲ್ಲ. ವಾಟ್ಸ್‌ ಆಪ್‌ ಗಳಲ್ಲಿ ವಾಟ್ಸ್‌ ಆಪ್ ಬಗ್ಗೆಯೇ ಹರಿದಾಡುತ್ತಿರುವ ಸುಳ್ಳು ಸುದ್ದಿ ಇದಾಗಿದೆ.

A fake news cerculating about whats app ban

ಇನ್ನು ಕೆಲವು ಸಂದೇಶಗಳಲ್ಲಿ ವಾಟ್ಸ್‌ ಆಪ್ ಇನ್ನು ಮುಂದೆ ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ವಾಟ್ಸ್‌ ಆಪ್ ಬಂದ್ ಮಾಡಲಾಗುತ್ತದೆ ಎಂಬ ಸಂದೇಶವೂ ಹರಿದಾಡುತ್ತಿದೆ. ಆದರೆ ಇದಾವುದು ಸತ್ಯವಲ್ಲ, ನಿನ್ನೆ ರಾತ್ರಿ ತಾಂತ್ರಿಕ ಕಾರಣದಿಂದ ವಾಟ್ಸ್‌ ಆಪ್ ಸರಿಯಾಗಿ ಕಾರ್ಯನಿರ್ವಹಿಸಿಲ್ಲವಷ್ಟೆ, ಅದು ಬಿಟ್ಟು ಇನ್ನಾವುದೇ ಸಮಸ್ಯೆ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+