Condom News: ಕಚೇರಿಗೆ ಕಾಂಡೋಮ್‌ ತರಿಸಿದ ಉದ್ಯೋಗಿ; ಮುಂದೇನಾಯ್ತು ಗೊತ್ತಾ?

Condom News: ಇತ್ತೀಚಿನ ದಿನಗಳಲ್ಲಿ ಕಾಂಡೋಮ್‌ ಅಂದರೆ ಕಾಮನ್‌ ಆಗಿಬಿಟ್ಟಿದೆ. ಅನೇಕರು ಇದರ ಹೆಸರು ಕೇಳಿದ್ರೆ ಸಾಕು ನಾಚಿ ನೀರಾಗಿಬಿಡುತ್ತಾರೆ. ಕದ್ದುಮುಚ್ಚಿ ಮೆಡಿಕಲ್‌ ಶಾಪ್‌ಗೆ ಹೋಗಿ ಖರೀದಿ ಮಾಡುತ್ತಾರೆ. ಇನ್ನು ಇದೀಗ ಆನ್‌ಲೈನ್‌ನಲ್ಲಿಯೇ ಲಭ್ಯವಿರುವುದರಿಂದ ಇದರಲ್ಲಿಯೇ ಖರೀದಿ ಮಾಡುತ್ತಾರೆ. ಹೀಗೆ ಕಂಪನಿಯೊಂದ ಉದ್ಯೋಗಿ ಇದೇ ದಾರಿ ಹಿಡಿದು ತಗ್ಲಾಕೊಂಡ ಘಟನೆ ನಡೆದಿದೆ.

ಹೀಗೆ ಬೇರೆಯವರಿಗೆ ಗೊತ್ತಾಗದ ರೀತಿಯಲ್ಲಿ ಕದ್ದು ಮುಚ್ಚಿ ಕಾಂಡೋಮ್ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಬಹುತೇಕ ಮಂದಿ ಯಾರಿಗೂ ಗೊತ್ತಾಗಬಾರದೆಂದು ಆನ್‌ಲೈನ್‌ನಲ್ಲಿಯೇ ಕಾಂಡೋಮ್ ಖರೀದಿ ಮಾಡಲು ಮುಂದಾಗಿದ್ದಾರೆ.

A Employee bring condom to office viral

ಹೀಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಕಾಂಡೋಮ್ ಖರೀದಿ ಮಾಡಿದ ವ್ಯಕ್ತಿ ಎಲ್ಲರ ಮುಂದೆ ಮುಜುಗರಕ್ಕೆ ಒಳಗಾಗಿದ್ದಾನೆ. ರೆಡ್ಡಿಟ್ ಪೋಸ್ಟ್ ಮೂಲಕ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಮನನ್ ಸಿಂಗ್ ಎಂಬಾತ ಪೋಸ್ಟ್ ಹಂಚಿಕೊಂಡಿದ್ದಾನೆ. ಮನನ್ ಸಿಂಗ್ ನವದೆಹಲಿಯಲ್ಲಿ ಕೆಲಸ ಮಾಡುತ್ತಿದ್ದು, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನನ್ನನ್ನು ಹಾಳು ಮಾಡಿದೆ ಎಂದು ಆತ ರೆಡ್ಡಿಟ್‌ನ ದೆಹಲಿ ಕಮ್ಯೂನಿಟಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾನೆ.

ಮನನ್ ಸ್ವಿಗ್ಗಿ ಇನ್‌ಸ್ಟಾ ಮಾರ್ಟ್‌ನಿಂದ ಕಾಂಡೋಮ್‌ ಪ್ಯಾಕ್ ಅನ್ನು ಆರ್ಡರ್ ಮಾಡಿದ್ದಾನೆ. ಡೆಲಿವರಿ ಬಾಯ್ ಬಂದು ಫೋನ್ ಮಾಡುತ್ತಿದ್ದಂತೆ, ಅದನ್ನು ರಿಸೆಪ್ಶನ್‌ನಲ್ಲಿ ನೀಡುವಂತೆ ಮನನ್ ಹೇಳಿದ್ದಾನೆ. ಸ್ವಲ್ಪ ಸಮಯದ ನಂತರ ರಿಸೆಪ್ಶನ್‌ಗೆ ಹೋದ ಮನನ್, ಪ್ಯಾಕ್ ನೋಡಿ ಬೆಚ್ಚಿ ಬಿದ್ದಿದ್ದಾನೆ.

ಸ್ವಿಗ್ಗಿ ಇನ್ಸ್ಟಾಮಾರರ್ಟ್‌ನಿಂದ ಬಂದ ಕಾಂಡೋಂ ಅನ್ನು ಸರಿಯಾಗಿ ಪ್ಯಾಕ್ ಮಾಡಿರಲಿಲ್ಲ. ಪಾಸ್ಟಿಕ್‌ನ ಪಾರದರ್ಶಕ ಕವರ್‌ನಲ್ಲಿ ಅದನ್ನು ನೀಡಲಾಗಿತ್ತು. ಬ್ಯಾಗ್‌ನೊಳಗೆ ಕಾಂಡೋಮ್ ಇದೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಾಗುವಂತೆ ಪ್ಯಾಕ್ ಮಾಡಲಾಗಿತ್ತು. ಇದನ್ನು ನೋಡಿದ ಮನನ್ ಎಲ್ಲರ ಎದುರು ಮುಜುಗರಕ್ಕೊಳಗಾಗಿದ್ದಾನೆ.

ಕಾಂಡೋಮ್ ಖರೀದಿ ಮಾಡುವುದು ದೊಡ್ಡ ವಿಚಾರವಲ್ಲ. ನಾನು ಪ್ರತಿ ಬಾರಿ ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡುತ್ತಿದ್ದೆ. ಅವರು ಬ್ರೌನ್ ಪ್ಯಾಕೆಟ್‌ನಲ್ಲಿ ಕಾಂಡೋಮ್ ನೀಡುತ್ತಿದ್ದರು. ಸ್ವಿಗ್ಗಿ ಕೂಡ ಅದೇ ರೀತಿ ಪ್ಯಾಕಿಂಗ್ ಮಾಡಲಿದೆ ಎಂದು ನಾನು ಭಾವಿಸಿದ್ದೆ. ಇದರ ಜೊತೆ ನಾನು ಮತ್ತೊಂದು ಮೂರ್ಖ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.

ರಿಸೆಪ್ಶನ್‌ನಲ್ಲಿಟ್ಟು ಹೋಗುವಂತೆ ಹೇಳಿದ್ದೇನೆ. ರಿಸೆಪ್ಶನ್ ಟೇಬಲ್ ಮೇಲೆ ಈ ಪ್ಯಾಕೆಟ್ ಓಪನ್ ಆಗಿ ಬಿದ್ದಿತ್ತು ಎಂದು ಮನನ್ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾನೆ. ಮನನ್ ಕಾಂಡೋಂ ಫೋಟೋವನ್ನೂ ರೆಡ್ಡಿಡ್‌ನಲ್ಲಿ ಪೋಸ್ಟ್ ಮಾಡಿದ್ದ. ಗುಲಾಬಿ ಬಣ್ಣದ ಕವರ್‌ನಳಗೆ ಕಾಂಡೋಮ್ ಇರುವುದನ್ನು ನೀವು ಕಾಣಬಹುದು. ಈಗ ಮನನ್ ತನ್ನ ಪೋಸ್ಟ್ ಡಿಲೀಟ್ ಮಾಡಿದ್ದಾನೆ. ಆದರೆ ಈಗಲೂ ಪೋಸ್ಟ್‌ಗೆ ಬಂದ ಕಮೆಂಟ್ ನೋಡಬಹುದಾಗಿದೆ.

"ಬುದ್ದಿ ಇರುವ ಯಾರು ಆಫೀಸ್‌ನಲ್ಲಿ ಕಾಂಡೋಂ ಆರ್ಡರ್ ಮಾಡುವುದಿಲ್ಲ," ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+