ಎಕೆ-47 ಜೊತೆ ನಾಪತ್ತೆಯಾದ ಕಾನ್ಸ್ಟೇಬಲ್ ಉಗ್ರರ ಜೊತೆಗೂಡಿದನಾ?
ಶ್ರೀನಗರ, ಜೂನ್ 27: ಎಕೆ-47 ಬಂದೂಕಿನೊಂದಿಗೆ ಕಾನ್ಸ್ಟೇಬಲ್ ಒಬ್ಬ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ.
ಎಕೆ-47 ರೈಫಲ್‌ನೊಂದಿಗೆ ಕಾಣೆಯಾಗಿರುವ ಕಾನ್ಸ್ಟೇಬಲ್ ಇರ್ಫಾನ್ ಅಹಮದ್ ದರ್ ಉಗ್ರರ ಜೊತೆ ಸೇರಿದ್ದಾನೆ ಎನ್ನಲಾಗಿದೆ. ಆತನ ಚಲನವಲನದ ಮೇಲೆ ಕೆಲವು ದಿನಗಳಿಂದಲೂ ಅನುಮಾನ ಇತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅನುಮಾನಕ್ಕೆ ಪುಷ್ಠಿ ನೀಡುವಂತೆ ಹಿಜ್ಬುಲ್ ಸಂಘಟನೆಯ ವಕ್ತಾರನೊಬ್ಬ ಸ್ಥಳೀಯ ಸುದ್ದಿವಾಹಿನಿಗೆ ರೈಫಲ್‌ನೊಂದಿಗೆ ನಾಪತ್ತೆಯಾಗಿರುವ ಎಸ್‌ಪಿಓ ಇರ್ಫಾನ್‌ನನ್ನು ತಮ್ಮ ಸಂಘಟನೆಗೆ ಸೇರಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಎಲ್ಲಾ ಪೊಲೀಸರು ನೌಕರಿ ಬಿಟ್ಟು ಹಿಜ್ಬುಲ್ ಸಂಘಟನೆ ಸೇರಿಕೊಳ್ಳಿ ಎಂದು ಕರೆಯನ್ನೂ ಹಿಜ್ಬುಲ್ ಸಂಘಟನೆ ಮುಖ್ಯಸ್ಥ ನಿಡಿದ್ದಾನೆ. ಇತ್ತೀಚೆಗಷ್ಟೆ ಒಬ್ಬ ಸೈನಿಕನನ್ನು ಅಪಹರಿಸಿದ್ದ ಉಗ್ರರು ಆತನ ಹತ್ಯೆ ಮಾಡಿದ್ದರು. ಇಂದು ಬೆಳಿಗ್ಗೆ ಕೂಡ ಇಬ್ಬರು ಎಸ್‌ಪಿಓಗಳನ್ನು ಅಪಹರಿಸಿ ಹಲ್ಲೆ ಮಾಡಿ ಬಿಡುಗಡೆ ಮಾಡಿದ್ದಾರೆ.











Click it and Unblock the Notifications