ಉಗ್ರರನ್ನು ಓಡಿಸಿದ ಸೈನಿಕರಿಗೆ ಸಿಕ್ಕಿತು ವಿಶಿಷ್ಟ ಏಣಿ

ಶ್ರೀನಗರ, ಮೇ 25: ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ಉಗ್ರರ ಉಪಟಳ ಮುಂದುವರಿದಿದೆ.

ಇಲ್ಲಿನ ಕೆರನ್ ಪ್ರದೇಶದಿಂದ ದೇಶದ ಗಡಿಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ ಉಗ್ರರನ್ನು ಗಡಿಯಲ್ಲಿನ ಯೋಧರು ಹಿಮ್ಮೆಟ್ಟಿಸಿದ್ದಾರೆ.

ಒಳನುಗ್ಗಲು ಹೊಂಚು ಹಾಕಿದ್ದ ಉಗ್ರರ ಮೇಲೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿವೆ. ಇದರಿಂದ ಬೆಚ್ಚಿದ ಉಗ್ರರು ತಮ್ಮ ಬಳಿಯಿದ್ದ ಕೆಲವು ಶಸ್ತ್ರಾಸ್ತ್ರ ಮತ್ತು ಸಾಧನಗಳನ್ನು ಸ್ಥಳದಲ್ಲಿಯೇ ಬಿಟ್ಟು ಪೇರಿಕಿತ್ತಿದ್ದಾರೆ.

a collapsible ladder recovered from terrorists after foiling infiltration attempt

ಉಗ್ರರು ಪರಾರಿಯಾದ ಸ್ಥಳದಲ್ಲಿ ವಿಶಿಷ್ಟ ಏಣಿಯೊಂದು ಸಿಕ್ಕಿದ್ದು, ಉಗ್ರರು ಬಗೆಬಗೆಯ ತಂತ್ರಜ್ಞಾನಗಳನ್ನು ಬಳಸಿ ದೇಶದ ಮೇಲೆ ದಾಳಿ ನಡೆಸಲು ಮುಂದಾಗುತ್ತಿರುವುದು ಆತಂಕ ಮೂಡಿಸಿದೆ.

ಈ ಏಣಿಯನ್ನು ಮಡಚಿಕೊಂಡು ಚೀಲದಲ್ಲಿ ಇರಿಸಿ ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯಬಹುದು. ಇವುಗಳ ತೂಕ ಬಹಳ ಕಡಿಮೆ. ಆದರೆ ಅಷ್ಟೇ ಗಟ್ಟಿಮುಟ್ಟಾಗಿರುತ್ತವೆ. ಮಡಚಿದಾಗ ಪುಟ್ಟದಾಗಿ ಕಾಣಿಸುವ ಈ ಏಣಿಗಳನ್ನು 15-20 ಅಡಿಗಳವರೆಗೂ ವಿಸ್ತರಿಸಬಹುದು.

ಇವುಗಳನ್ನು ಉಗ್ರರು ಗಡಿಭಾಗದಲ್ಲಿ ಒಳನುಗ್ಗಲು ಬಳಕೆ ಮಾಡುತ್ತಿದ್ದಾರೆ. ಸಣ್ಣ ಹಳ್ಳಕೊಳ್ಳಗಳು, ಗೋಡೆ, ಬೆಟ್ಟಗಳನ್ನು ಹತ್ತಿ ಸಾಗಲು ಇದು ನೆರವಾಗುತ್ತವೆ. ಇವುಗಳನ್ನು ಬಳಸಿ ಹತ್ತಿ ಬರುವ ಉಗ್ರರು ದಾಳಿ ನಡೆಸಿ ತ್ವರಿತವಾಗಿ ತಪ್ಪಿಸಿಕೊಳ್ಳಲು ಈ ಏಣಿಗಳು ಸಹಾಯ ಮಾಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+