ಮಣಿಪುರದಲ್ಲಿ ಸತತ ಭೂಕಂಪ: ಆತಂಕದಲ್ಲಿ ಜನತೆ
ಸೆನಾಪಟಿ(ಮಣಿಪುರ), ಜುಲೈ 19: ಪ್ರವಾಹದಿಂದ ತತ್ತರಿಸಿರುವ ಈಶಾನ್ಯ ರಾಜ್ಯಗಳಿಗೆ ಮತ್ತೊಂದು ಆತಂಕ ಶುರುವಾಗಿದೆ. ನಿನ್ನೆ(ಜುಲೈ 18 ) ರಾತ್ರಿ 10:35ರ ಸುಮಾರಿಗೆ ಮಣಿಪುರದ ಸೆನಾಪಟಿಯಲ್ಲಿ ಭೂಕಂಪದ ಅನುಭವವಾಗಿದ್ದು, ರಿಕ್ಟರ್ ಮಾಪನದಲ್ಲಿ 3.4 ತೀವ್ರತೆ ದಾಖಲಾಗಿದೆ.
ರಸ್ತೆಯಲ್ಲಿ ಬಿರುಕು, ಮನೆ ಗೋಡೆಗಳಲ್ಲಿ ಬಿರುಕು ಉಂಟಾಗಿದ್ದು ಬಿಟ್ಟರೆ ಯಾವುದೇ ರೀತಿಯ ಪ್ರಾಣಾಪಾಯದ ಕುರಿತು ವರದಿಯಾಗಿಲ್ಲ.

ಮಣಿಪುರದಲ್ಲಿ ಇತ್ತೀಚೆಗೆ ಹಲವು ಭಾರಿ ಭೂಕಂಪ ಸಂಭವಿಸಿದ್ದು ಈ ಭಾಗದ ಜನರ ನಿದ್ದೆಗೆಡಿಸಿದೆ.
ಜುಲೈ 5ರಂದು, ಜೂನ್ 25, ಜೂನ್ 19, ಜೂನ್ 1ರಂದು ಸಹ ಮಣಿಪುರದಲ್ಲಿ ಭೂಕಂಪದ ಅನುಭವವಾಗಿತ್ತು.












Click it and Unblock the Notifications