ಯುಕೆಗೆ ಕಳ್ಳಸಾಗಣೆಯಾಗಿದ್ದ ಪುರಾತನ ಶಿವನ ಮೂರ್ತಿ ಭಾರತಕ್ಕೆ ವಾಪಸ್

ಲಂಡನ್, ಜುಲೈ 30: ರಾಜಸ್ಥಾನದ ದೇವಾಲಯದಿಂದ ಯುಕೆಗೆ ಕಳ್ಳ ಸಾಗಣೆಯಾಗಿದ್ದ 9ನೇ ಶತಮಾನದ ಶಿವನ ಮೂರ್ತಿ ಭಾರತಕ್ಕೆ ವಾಪಸ್ ಆಗುತ್ತಿದೆ.

'ಪ್ರತಿಹರ' ಶೈಲಿಯಲ್ಲಿ ರಚಿಸಲಾದ 4 ಅಡಿ ಎತ್ತರದ ಶಿವನ ಪ್ರತಿಮೆಯನ್ನು 1998ರಲ್ಲಿ ರಾಜಸ್ಥಾನದ ಬರೋಲಿಯ ಗೇಟೇಶ್ವರ ದೇವಸ್ಥಾನದಿಂದ ಕಳವು ಮಾಡಲಾಗಿತ್ತು. 2003ರಲ್ಲಿ ಈ ಪ್ರತಿಮೆಯನ್ನು ಯುಕೆಗೆ ಕಳ್ಳ ಸಾಗಣೆ ಮಾಡಲಾಗಿದೆ ಎಂದು ತಿಳಿದು ಬಂತು.

ಇಂಗ್ಲೆಂಡ್‌ನ ಆಗರ್ಭ ಶ್ರೀಮಂತರು ಈ ವಿಗ್ರಹವನ್ನು ಖರೀದಿಸಿದ್ದರು. ಬಳಿಕ, ಭಾರತದ ಧಾರ್ಮಿಕ ಸಂಬಂಧದ ಬಗ್ಗೆ ತಿಳಿದ ಆ ವ್ಯಕ್ತಿ ಲಂಡನ್‌ನಲ್ಲಿರುವ ಭಾರತೀಯ ಹೈ ಕಮಿಷನ್ ಗೆ ಮೂರ್ತಿಯನ್ನು ಹಸ್ತಾಂತರಿಸಿದ್ದರು ಎಂದು ತಿಳಿದು ಬಂದಿದೆ. 2005ರಲ್ಲಿ ಭಾರತೀಯ ಹೈ ಕಮಿಷನ್ ಈ ಮೂರ್ತಿಯನ್ನು ಪಡೆದುಕೊಂಡಿತ್ತು.

9th century Lord Shiva statue to be returned to India

2017ರಲ್ಲಿ, ಪುರಾತತ್ವ ಸಮೀಕ್ಷೆ (ಎಎಸ್‌ಐ)ಯ ಅಧಿಕಾರಿಗಳನ್ನು ಪ್ರತಿಮೆಯನ್ನು ಪರೀಕ್ಷಿಸಲು ಲಂಡನ್‌ಗೆ ಆಹ್ವಾನಿಸಲಾಯಿತು. ಯುಕೆಗೆ ತೆರಳಿದ್ದ ಪುರಾತತ್ವ ಅಧಿಕಾರಿಗಳು ಇದು ರಾಜಸ್ಥಾನದ ಬರೋಲಿಯ ದೇವಾಲಯದಿಂದ ಕಳವು ಮಾಡಿದ ಪ್ರತಿಮೆ ಎಂದು ದೃಢಿಪಡಿಸಿದ್ದರು. ಇದೀಗ, ಈ ಶಿವನ ವಿಗ್ರಹವನ್ನು ಭಾರತಕ್ಕೆ ತೆಗೆದುಕೊಂಡು ಬರಲಾಗುತ್ತಿದೆ.

2018ರಲ್ಲಿ, 12ನೇ ಶತಮಾನದ ಭಗವಾನ್ ಬುದ್ಧನ ಕಂಚಿನ ಪ್ರತಿಮೆಯನ್ನು ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಹೈಕಮಿಷನರ್‌ಗೆ ಹಿಂದಿರುಗಿಸಿದರು. ಇದನ್ನು 2019ರಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+