ಭಾರತದಲ್ಲಿ 45 ಲಕ್ಷದ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ

ನವದೆಹಲಿ, ಸೆಪ್ಟೆಂಬರ್ 11: ಭಾರತದಲ್ಲಿ 24 ಗಂಟೆಯಲ್ಲಿ 96,551 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಈ ಮೂಲಕ ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 45 ಲಕ್ಷದ ಗಟಿ ದಾಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ 24 ಗಂಟೆಯಲ್ಲಿ 96, 551 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 1,209 ಜನರು ದೇಶದಲ್ಲಿ ಮೃತಪಟ್ಟಿದ್ದಾರೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ 45,62,415ಕ್ಕೆ ಏರಿಕೆಯಾಗಿದೆ.

96,551 New Cases & 1,209 Deaths Reported In India In The Last 24 Hours

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 9,43,480. ಇದುವರೆಗೂ ಗುಣಮುಖರಾದವರ ಸಂಖ್ಯೆ 35,42,664 ಮತ್ತು ಮೃತಪಟ್ಟವರ ಸಂಖ್ಯೆ 76,271.

ಇದುವರೆಗೂ ದೇಶದಲ್ಲಿ 5,40,97,975 ಕೋವಿಡ್ ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ. ಸೆಪ್ಟೆಂಬರ್ 10ರಂದು 11,63,542 ಮಾದರಿಗಳ ಪರೀಕ್ಷೆ ನಡೆದಿದೆ ಎಂದು ಐಸಿಎಂಆರ್ ಹೇಳಿದೆ.

ಭಾರತದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 9,90,795, ಸಕ್ರಿಯ ಪ್ರಕರಣಗಳು 2,61,432.

ಆಂಧ್ರ ಪ್ರದೇಶ ರಾಜ್ಯ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರು 5,37,687. ಸಕ್ರಿಯ ಪ್ರಕರಣಗಳ ಸಂಖ್ಯೆ 97,338 ಮತ್ತು ಇದುವರೆಗೂ ಮೃತಪಟ್ಟವರು 4,702.

ಭಾರತಕ್ಕೆ 2ನೇ ಸ್ಥಾನ : ವಿಶ್ವದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ದೇಶ ಅಮೆರಿಕ. ದೇಶದಲ್ಲಿ 6,588,163 ಕೋವಿಡ್ ಪ್ರಕರಣಗಳಿವೆ. ಭಾರತದಲ್ಲಿ 4,562,415 ಪ್ರಕರಣವಿದೆ. ಬ್ರೆಜಿಲ್ 3ನೇ ಸ್ಥಾನದಲ್ಲಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 4,239,763.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+