ಪುಟ್ಟ ಬಾಲಕಿ ದಿಶಾ ಬೆನ್ನುಹುರಿ ಸಮಸ್ಯೆ ನಿಮ್ಮ ನೆರವಿನಿಂದ ಗುಣವಾಗಬಹುದು
ದಿಶಾ ಒಂಬತ್ತು ವರ್ಷದ ಪುಟ್ಟ ಹುಡುಗಿ. ಓದಿನಲ್ಲೂ ಚುರುಕು. ಆದರೆ ಜನ್ಮಜಾತವಾಗಿ ಆಕೆಯಲ್ಲಿ ಕಾಣಿಸಿಕೊಂಡಿರುವ ಆರೋಗ್ಯ ಸಮಸ್ಯೆ ಆಕೆಯ ದಿನನಿತ್ಯದ ಬದುಕಿಗೂ ಅಡ್ಡಿಯಾಗುತ್ತಿದೆ. ಪುಟ್ಟ ವಯಸ್ಸಿನಲ್ಲಿಯೇ ಬೆನ್ನು ಹುರಿ ಸಮಸ್ಯೆ ಹೊಂದಿರುವ ದಿಶಾಗೆ ಈಗ ಚಿಕಿತ್ಸೆಯ ಅವಶ್ಯಕತೆ ಇದೆ.
ದಿಶಾ ಪಶ್ಚಿಮ ಬಂಗಾಳದ ಬಕುರಾದ ಕೃಷ್ಣಾನಗರ ನಿವಾಸಿಯಾಗಿದ್ದು, ಅಲ್ಲಿನ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಬೆನ್ನುಹುರಿಯಲ್ಲಿ ಸಮಸ್ಯೆಯಿದ್ದರೂ ಓದಿನಲ್ಲಿ ಮುಂದಿದ್ದಾಳೆ. ಇದನ್ನು ಗಮನಿಸಿದ್ದ ಆಕೆಯ ಮುಖ್ಯ ಶಿಕ್ಷಕರು, ದಿಶಾಗೆ ಚಿಕಿತ್ಸೆ ಕೊಡಿಸುವಂತೆ ಪೋಷಕರಿಗೆ ಸಲಹೆ ನೀಡಿದ್ದಾರೆ. ಚೆನ್ನೈನಲ್ಲಿನ MIOT ಆಸ್ಪತ್ರೆಯಲ್ಲಿ ಈಕೆಗೆ ಚಿಕಿತ್ಸೆ ನೀಡಿದರೆ ಗುಣವಾಗುವುದು ಖಂಡಿತ ಎಂದು ಭರವಸೆ ನೀಡಿದ್ದಾರೆ.
ಆದರೆ ಈ ಪುಟ್ಟ ಬಾಲಕಿ ತಂದೆ ಉತ್ತಮ್ ರೈ ತರಕಾರಿ ಮಾರಿ ಜೀವನ ಸಾಗಿಸುವವರು. ಚೆನ್ನೈಗೆ ಪ್ರಯಾಣ ವೆಚ್ಚ ಭರಿಸಲೂ ಸಾಧ್ಯವಾಗದಂಥ ಸ್ಥಿತಿ ಅವರದ್ದು. ಆದರೂ ಒಮ್ಮೆ ಆಸ್ಪತ್ರೆಗೆ ಹೋಗಿ ಬರುವಂತೆ ತಿಳಿಸಿ ಮುಖ್ಯಶಿಕ್ಷಕರೇ ಪ್ರಯಾಣ ವೆಚ್ಚ ಭರಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

MIOT ಆಸ್ಪತ್ರೆ ವೈದ್ಯರು ದಿಶಾಳನ್ನು ಪರೀಕ್ಷೆ ಮಾಡಿದ್ದು, ಆಕೆಗೆ ಕಡ್ಡಾಯವಾಗಿ ಚಿಕಿತ್ಸೆ ನೀಡಬೇಕು. ಕನಿಷ್ಠ ನಾಲ್ಕು ಹಂತಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ಪೋಷಕರಿಗೆ ತಿಳಿಸಿದ್ದಾರೆ. ಮಕ್ಕಳ ತಜ್ಞರ ಪರಿಶೀಲನೆಯೂ ಅವಶ್ಯಕ ಎಂದಿದ್ದಾರೆ.

ದಿಶಾಗೆ ಜನ್ಮಜಾತ ಸ್ಕೋಲಿಯಾಸಿಸ್ ಬೆನ್ನುಹುರಿ ತೊಂದರೆ ಇದ್ದು, ಬೆನ್ನುಹುರಿಯ ವಿರೂಪತೆ ಸರಿಪಡಿಸಲು ರಾಡ್‌ಗಳ ಬಳಕೆ ಮಾಡಿ ಚಿಕಿತ್ಸೆ ನಡೆಸಬೇಕೆಂದು ಹೇಳಿದ್ದಾರೆ. ಶಸ್ತ್ರಚಿಕಿತ್ಸೆ, ಐಸಿಯು, ಆಸ್ಪತ್ರೆವಾಸ, ವೈದ್ಯರ ಭೇಟಿ ಹಾಗೂ ಔಷಧಿಗಳು ಒಳಗೊಂಡಂತೆ 4,50,000ರೂ ವೆಚ್ಚವಾಗಬಹುದು ಎಂದು ಅಂದಾಜಿಸಿದ್ದಾರೆ.

ತರಕಾರಿ ಮಾರಿ ಜೀವನ ಸಾಗಿಸುತ್ತಿರುವ ಪೋಷಕರ ಬಳಿ ಅಷ್ಟು ಹಣ ಹೊಂದಿಸಲು ಸಾಧ್ಯವೇ ಇಲ್ಲ. ಹೀಗಾಗಿ ಚಿಕಿತ್ಸೆಗೆ ದಾರಿ ಕಾಣದೇ ತಮ್ಮ ಹಳ್ಳಿಗೆ ಹಿಂದಿರುಗಿದ್ದಾರೆ. ಆದರೆ ಈ ಪೋಷಕರಿಗೆ ನಿಮ್ಮ ನೆರವೇ ಆಶಾಕಿರಣವಾಗಬಹುದು. ಈ ಪುಟ್ಟ ಹುಡುಗಿಯ ಸಮಸ್ಯೆ ನಿಮ್ಮ ಸಹಾಯದಿಂದ ಕೊನೆಯಾಗಬಹುದು...
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications