8th Pay Commission: 8ನೇ ವೇತನ ಆಯೋಗ: ಫಿಟ್ ಮೆಂಟ್ ಬಳಿಕವೂ ವೇತನ ಏರಿಕೆ ಇಲ್ಲ, ಕಾರಣ
ನವದೆಹಲಿ, ಜುಲೈ 29: ಕೇಂದ್ರ ಸರ್ಕಾರಿ ಜಾರಿಗೆ ತಂದ 7ನೇ ವೇತನ ಆಯೋಗದ ಅವಧಿ ಇನ್ನೇನು ಪೂರ್ಣಗೊಳ್ಳುತ್ತಿದೆ. ಈ ಕಾರಣದಿಂದ ಕೋಟ್ಯಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಬಹುನಿರೀಕ್ಷೆಯ 8 ನೇ ವೇತನ ಆಯೋಗ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಜನವರಿ 16ರಂದು ಅನುಮೋದನೆ ನೀಡಿ ಸುಮಾರು 50 ಲಕ್ಷ ನೌಕರರು ಹಾಗೂ 65 ಲಕ್ಷ ಪಿಂಚಣಿದಾರರಿಗೆ ಸಿಹಿ ಸುದ್ದಿ ನೀಡಲಾಗಿದೆ.
ಇದೀಗ ಎಂಟನೇ ವೇತನ ಆಯೋಗ ಜಾರಿಯಾದರೆ ಎಷ್ಟೆಲ್ಲ ವೇತನ, ಭತ್ಯೆಗಳು ಹೆಚ್ಚಾಗಬಹುದು. ಹಾಲಿ ವೇತನ ಆಯೋಗದಲ್ಲಿ ಹೆಚ್ಚು ವೇತನ ಪಡೆಯುತ್ತಿರುವವರು ಯಾರು, ಮುಖ್ಯವಾಗಿ ಫಿಟ್‌ಮೆಂಟ್ ಅಂಶ ಹೆಚ್ಚಾದರೆ ಏನೆಲ್ಲ ಆಗಲಿದೆ ಎಂದು ತಿಳಿಯೋಣ. ಭಾರತ ಸರ್ಕಾರವು 8ನೇ ವೇತನ ಆಯೋಗವನ್ನು ಅನುಮೋದಿಸಿದಾಗಿನಿಂದ, ನೌಕರರ ಸಂಬಳದ ಬಗ್ಗೆ ಅನೇಕ ಊಹಾಪೋಹಗಳು ಕೇಳಿಬರುತ್ತಿವೆ. ಈ ಊಹಾಪೋಹಗಳು ನೌಕರರ ವೇತನ ಮತ್ತು ಫಿಟ್‌ಮೆಂಟ್ ಅಂಶಕ್ಕೆ ಸಂಬಂಧಿಸಿವೆ.

ಈ ಬಾರಿ, ಉದ್ಯೋಗಿ ಸಂಘಟನೆಗಳು ಫಿಟ್‌ಮೆಂಟ್ ಅಂಶವನ್ನು 2.86 ರವರೆಗೆ ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿವೆ. ಇದನ್ನು ಜಾರಿಗೆ ತಂದರೆ, ನೌಕರರ ಕನಿಷ್ಠ ವೇತನ 51,480 ರೂ.ಗಳಿಗೆ ಹೆಚ್ಚಾಗಬಹುದು ಮತ್ತು ಪಿಂಚಣಿ 25,740 ರೂ.ಗಳಿಗೆ ಹೆಚ್ಚಾಗಬಹುದು. ಆದರೆ, ಇದರಲ್ಲಿ ಹಲವು ತೊಡಕುಗಳಿವೆ. ಹೆಚ್ಚಿನ ಫಿಟ್‌ಮೆಂಟ್ ಅಂಶ ಇದ್ದ ಮಾತ್ರಕ್ಕೆ ಸಂಬಳ ಹೆಚ್ಚಾಗುವುದಿಲ್ಲ. ಇದರಿಂದ ನೌಕರರಿಗೆ ಬಿಗ್ ಶಾಕ್ ಎದುರಾಗಿದೆ.
ಫಿಟ್‌ಮೆಂಟ್ ಅಂಶವು ಗುಣಕವಾಗಿದ್ದು, ಇದನ್ನು ಸರ್ಕಾರವು ನೌಕರರ ವೇತನವನ್ನು ಹೆಚ್ಚಿಸಲು ಬಳಸುತ್ತದೆ. ಸಾಮಾನ್ಯವಾಗಿ, ಮೂಲ ವೇತನವನ್ನು ಕನಿಷ್ಠ ವೇತನವನ್ನು ಫಿಟ್‌ಮೆಂಟ್ ಅಂಶದಿಂದ ಗುಣಿಸುವ ಮೂಲಕ ಲೆಕ್ಕಹಾಕಲಾಗುತ್ತದೆ. ಆದರೆ ಈ ವ್ಯವಸ್ಥೆಯು ಎಲ್ಲಾ ಹಂತಗಳ ಸಂಬಳದ ಮೇಲೆ ಕಾರ್ಯನಿರ್ವಹಿಸುವುದಿಲ್ಲ. ಫಿಟ್ಮೆಂಟ್ ಅಂಶವನ್ನು ಪರಿಗಣಿಸಿ ಈಗಿನ ಸಂಬಳವನ್ನು 8ನೇ ವೇತನ ಆಯೋಗದಲ್ಲಿ ಎಷ್ಟು ಆಗಬಹುದೆಂದು ಅಂದಾಜು ಮಾಡಲಾಗಿದೆ. 7ನೇ ವೇತನ ಆಯೋಗದಲ್ಲಿ ಫಿಟಮೆಂಟ್ ಅಂಶವು 2.57 ರಷ್ಟು ಇತ್ತು. ಇದರ ಆಧಾರದಲ್ಲಿ 8ನೇ ವೇತನ ಆಯೋಗದಲ್ಲಿ ಫಿಟ್ಮೆಂಟ್ ಅಂಶವು 1.8 ರಷ್ಟು ಆಗುವ ನಿರೀಕ್ಷೆ ಇದೆ. ಇದರಿಂದಾಗಿ ಬೇಸಿಕ್ ಸಂಬಳವು 18 ಸಾವಿರ ರೂಪಾಯಿಯಿಂದ 30 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ. ಕೆಲವೆಡೆ ಹೇಳಿರುವಂತೆ 51 ಸಾವಿರ ರೂಪಾಯಿಗೆ ಏರಿಕೆಯಾಗಲ್ಲ.
8 ನೇ ವೇತನ ಆಯೋಗದಲ್ಲಿ ಬೇಡಿಕೆಯಿರುವ ಫಿಟ್‌ಮೆಂಟ್ ಅಂಶದ ಬಗ್ಗೆ ಮಾತನಾಡಿದರೆ, ಅದು 2.86 ರಷ್ಟು ಆಗಿದೆ. ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಂಡರೆ, ನೌಕರರ ಸಂಬಳ ಹೆಚ್ಚಾಗಬಹುದು. ಆದರೆ ಇದರಲ್ಲಿ ಕೆಲವು ಸಮಸ್ಯೆ ಇದೆ, ಅದನ್ನು ಅರ್ಥಮಾಡಿಕೊಳ್ಳಲು ನಾವು ಹಿಂದಿನ ವೇತನ ಆಯೋಗದಲ್ಲಿ ಜಾರಿಗೆ ತಂದ ಫಿಟ್‌ಮೆಂಟ್ ಅಂಶ ಮತ್ತು ವೇತನ ಹೆಚ್ಚಳವನ್ನು ನೋಡಬೇಕಾಗಿದೆ.
ಸರ್ಕಾರವು 6 ನೇ ವೇತನ ಆಯೋಗವನ್ನು ಜಾರಿಗೆ ತಂದಾಗ, ಅದರಲ್ಲಿ ಸುಮಾರು 1.86 ಫಿಟ್‌ಮೆಂಟ್ ಅಂಶವನ್ನು ಅನುಮೋದಿಸಲಾಯಿತು, ಆದರೆ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು, ಸಂಬಳವು ದಾಖಲೆಯ 54 ಪ್ರತಿಶತದಷ್ಟು ಹೆಚ್ಚಾಗಿದೆ. ಅದೇ ಸಮಯದಲ್ಲಿ, 7 ನೇ ವೇತನ ಆಯೋಗದಲ್ಲಿ, 2.57 ರ ಫಿಟ್‌ಮೆಂಟ್ ಅಂಶವನ್ನು ಜಾರಿಗೆ ತರಲಾಯಿತು. ಆದರೆ ನೌಕರರ ಕನಿಷ್ಠ ವೇತನವು ಕೇವಲ 14.2 ಪ್ರತಿಶತದಷ್ಟು ಹೆಚ್ಚಾಗಿದೆ. ಇದರಿಂದ ಅರ್ಥವಾಗುವ ಒಂದು ವಿಷಯವೆಂದರೆ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವುದರಿಂದ ಸಂಬಳ ಹೆಚ್ಚಾಗುವುದಿಲ್ಲ. ಹೀಗಾಗಿ ಸರ್ಕಾರವು ಈ ಬಾರಿ 2.86 ಫಿಟ್‌ಮೆಂಟ್ ಅಂಶವನ್ನು ಜಾರಿಗೊಳಿಸಿದರೆ, ನೌಕರರ ಮೂಲ ವೇತನ ಹೆಚ್ಚಾಗುವ ಅಗತ್ಯವಿಲ್ಲ.












Click it and Unblock the Notifications