8th Pay Commission: 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಬಿಗ್ ಅಪ್‌ಡೇಟ್
ನವದೆಹಲಿ, ಮೇ. 26: ಕೇಂದ್ರ ಸರ್ಕಾರಿ ನೌಕರರು ಲೋಕಸಭಾ ಚುನಾವಣೆ ಯಾವಾಗ ಮುಗಿಯುತ್ತದೆ ಎಂಬುದನ್ನು ಕಾಯುತ್ತಲೇ ಇದ್ದಾರೆ. ಇದಕ್ಕೆ ಕಾರಣ ಕೂಡ ಇದೆ. ಅವರಿಗೆ 8ನೇ ವೇತನ ಆಯೋಗವನ್ನು ಯಾವಾಗ ರಚಿಸುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಹೆಚ್ಚು ಕಾತುರವಿದೆ. ಅದೇ ವಿಷಯದಲ್ಲಿ ಹೆಚ್ಚು ಚಿಂತಗೆ ಒಳಗಾಗಿದ್ದಾರೆ.
ಕೇಂದ್ರ ಸರ್ಕಾರ ಶೀಘ್ರವೇ 8ನೇ ವೇತನ ಆಯೋಗವನ್ನು ರಚಿಸಬಹುದೆಂಬ ಸಂಪೂರ್ಣ ಭರವಸೆಯನ್ನು ನೌಕರರು ಹೊಂದಿದ್ದಾರೆ. ಈಗ ಅವರಿಗೆ ದೊಡ್ಡ ಗಿಫ್ಟ್ ಕೂಡ ಆಗಲಿದೆ. 8ನೇ ವೇತನ ಆಯೋಗ ರಚನೆಯಾಗಿ ವರದಿ ಜಾರಿಯಾದರೆ ಉದ್ಯೋಗಿಗಳ ವೇತನದಲ್ಲಿ ದಾಖಲೆಯ ಹೆಚ್ಚಳಕ್ಕೆ ಕಾರಣವಾಗುವ ನಿರೀಕ್ಷೆಯಿದೆ. ಹೀಗಾಗಿ ವೇತನ ಆಯೋಗದ ರಚನೆಗೆ ಸರ್ಕಾರ ನೌಕರರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಆರನೇ ವೇತನ ಆಯೋಗಕ್ಕಿಂತ ಡಬಲ್ ಸಂಬಳ!
ಎಂಟನೇ ವೇತನ ಆಯೋಗದ ರಚನೆಯ ಬಗ್ಗೆ ಇನ್ನೂ ಅಧಿಕೃತವಾಗಿ ಸರ್ಕಾರ ಏನನ್ನೂ ಹೇಳಿಲ್ಲ, ಆದರೆ ಮಾಧ್ಯಮ ವರದಿ, ಮೂಲಗಳ ಪ್ರಕಾರ, ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಈ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ನಿರೀಕ್ಷಿಸಲಾಗಿದೆ. ಈಗ ವೇತನ ಆಯೋಗ ರಚನೆಯಾದರೆ ಅದು ಜಾರಿಯಾಗಲು ಎರಡು ವರ್ಷವಂತೂ ಆಗಲಿದೆ.
ಹೊಸ ಸರಕಾರ ರಚನೆಯಾದ ನಂತರ 8ನೇ ವೇತನ ಆಯೋಗದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂಬ ಊಹಾಪೋಹಗಳು ಕೇಳಿಬರುತ್ತಿದ್ದು, ಹಲವು ನೌಕರರ ಸಂಘಟನೆಗಳು ಬೇಡಿಕೆ ಇಟ್ಟಿವೆ. ಇನ್ನು, ಈ ವೇತನ ಆಯೋಗದ ವರದಿ ಜಾರಿಯಾದರೆ, ಆರನೇ ವೇತನ ಆಯೋಗಕ್ಕಿಂತ ಹೆಚ್ಚು ಸಂಬಳ ಹೆಚ್ಚಾಗಬಹುದು.
2026 ರಲ್ಲಿ 8ನೇ ವೇತನ ಆಯೋಗ ಜಾರಿ?
ಈ ಹಿಂದೆ 2014 ರಲ್ಲಿ 7ನೇ ವೇತನ ಆಯೋಗವನ್ನು ರಚಿಸಲಾಗಿತ್ತು. ಪ್ರತಿ ಹತ್ತು ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗವನ್ನು ರಚಿಸಲಾಗುತ್ತದೆ, ಇದು ನಿಖರವಾಗಿ ಎರಡು ವರ್ಷಗಳ ನಂತರ ಜಾರಿಗೆ ಬರುತ್ತದೆ. 8ನೇ ವೇತನ ಆಯೋಗ ರಚನೆಯಾದರೆ, ಅದನ್ನು 2026 ರಲ್ಲಿ ಜಾರಿಗೊಳಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಇದು ಸಂಬಳದಲ್ಲಿ ಬಂಪರ್ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಸರ್ಕಾರಿ ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, 7ನೇ ವೇತನ ಆಯೋಗಕ್ಕೆ ಹೋಲಿಸಿದರೆ 8ನೇ ವೇತನ ಆಯೋಗದಲ್ಲಿ ವೇತನ ಹೆಚ್ಚಾಗುವ ನಿರೀಕ್ಷೆಯಿದೆ. ಇದು ಸಂಭವಿಸಿದಲ್ಲಿ, ಉದ್ಯೋಗಿಗಳ ಮೂಲ ವೇತನವೂ ಹಲವಾರು ಪ್ರತಿಶತದಷ್ಟು ಹೆಚ್ಚಾಗುತ್ತದೆ. ನಾಲ್ಕನೇ ವೇತನ ಆಯೋಗ ಜಾರಿಗೆ ಬಂದಾಗ ನೌಕರರ ವೇತನ ಶೇ.27.6ರಷ್ಟು ಏರಿಕೆಯಾಗಿದೆ. ಇದಾದ ಬಳಿಕ ಐದನೇ ಆಯ್ಕೆ ಆಯೋಗದಲ್ಲಿ ಸರ್ಕಾರ ನೌಕರರಿಗೆ ಶೇ.31ರಷ್ಟು ವೇತನ ಹೆಚ್ಚಿಸುವ ಮೂಲಕ ದೊಡ್ಡ ಉಡುಗೊರೆ ನೀಡಿದೆ.
ಆರನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು ಅಳವಡಿಸಲಾಗಿತ್ತು, ಆ ಸಮಯದಲ್ಲಿ ಅದನ್ನು 1.86 ಪಟ್ಟು ಇರಿಸಲಾಗಿತ್ತು. ಇದರಿಂದಾಗಿ ಉದ್ಯೋಗಿಗಳ ಸಂಬಳದಲ್ಲಿ ಬಂಪರ್ ಹೆಚ್ಚಳವಾಗಿದೆ. ಇದರಿಂದಾಗಿ ಮೂಲ ವೇತನವೂ 7 ಸಾವಿರ ರೂ.ಗೆ ಏರಿಕೆಯಾಗಿದೆ. ಏಳನೇ ವೇತನ ಆಯೋಗವನ್ನು 2016 ರಲ್ಲಿ ಜಾರಿಗೆ ತರಲಾಯಿತು.
ಇದರಲ್ಲೂ ಫಿಟ್‌ಮೆಂಟ್ ಅಂಶವನ್ನು 2.57 ಪಟ್ಟು ಹೆಚ್ಚಿಸಲಾಗಿದೆ. ಹಳೆಯ ವೇತನ ಶ್ರೇಣಿಯನ್ನು ಆಧಾರವಾಗಿ ಪರಿಗಣಿಸಿ 8 ನೇ ವೇತನ ಆಯೋಗವನ್ನು ರಚಿಸಿದರೆ, ನಂತರ ಫಿಟ್‌ಮೆಂಟ್ ಅಂಶದಲ್ಲಿ ಹೆಚ್ಚಳ ಸಾಧ್ಯವಾಘಲಿದೆ. ಇದರೊಂದಿಗೆ ನೌಕರರ ಕನಿಷ್ಠ ವೇತನ 26,000 ರೂಪಾಯಿಗೆ ಏರಿಕೆಯಾಗಲಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications