24 ಗಂಟೆಯಲ್ಲಿ ಭಾರತದಲ್ಲಿ 88,600 ಹೊಸ ಕೋವಿಡ್ ಪ್ರಕರಣ

ನವದೆಹಲಿ, ಸೆಪ್ಟೆಂಬರ್ 27: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 88,600 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 59,92,533ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್ ಪ್ರಕಾರ ದೇಶದಲ್ಲಿ 24 ಗಂಟೆಯಲ್ಲಿ 1,124 ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 94,503.

ಭಾರತದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 9,56,402. ಇದುವರೆಗೂ 49,41,628 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಸೆಪ್ಟೆಂಬರ್ 26ರ ತನಕ 7,12,57,836 ಮಾದರಿಗಳ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಸೆಪ್ಟೆಂಬರ್ 26ರಂದು 9,87,861 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್‌ ಹೇಳಿದೆ.

ಪ್ರತಿದಿನದ ಪ್ರಕರಣಗಳ ಸಂಖ್ಯೆ ಹೆಚ್ಚಳ

ಪ್ರತಿದಿನದ ಪ್ರಕರಣಗಳ ಸಂಖ್ಯೆ ಹೆಚ್ಚಳ

ಪ್ರತಿದಿನ ಭಾರತದಲ್ಲಿ ಪರೀಕ್ಷೆ ಮಾಡುವ ಮಾದರಿಗಳಲ್ಲಿ ಪಾಸಿಟಿವ್ ವರದಿ ಬರುವ ಪ್ರಮಾಣ 6.3 ರಿಂದ 8.9ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಮರಣ ಪ್ರಮಾಣ ಶೇ 1.5ರಲ್ಲಿಯೇ ಮುಂದುವರೆದಿದೆ. ಗುಣಮುಖರಾಗುವವರ ಪ್ರಮಾಣ 82.1ರಷ್ಟಿದೆ.

5 ರಾಜ್ಯಗಳಲ್ಲಿ ಹೆಚ್ಚು ಸೋಂಕಿತರು

5 ರಾಜ್ಯಗಳಲ್ಲಿ ಹೆಚ್ಚು ಸೋಂಕಿತರು

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ರಾಜ್ಯಗಳಲ್ಲಿ ಹೆಚ್ಚು ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಈ 5 ರಾಜ್ಯಗಳಿಂದ ಒಟ್ಟು 49,176 ಪ್ರಕರಣಗಳು 24 ಗಂಟೆಯಲ್ಲಿ ದಾಖಲಾಗಿವೆ.

2ನೇ ಸ್ಥಾನದಲ್ಲಿ ಭಾರತ

2ನೇ ಸ್ಥಾನದಲ್ಲಿ ಭಾರತ

ವಿಶ್ವದಲ್ಲಿ ಕೋವಿಡ್ ಸೋಂಕಿತ ದೇಶಗಳಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಅಮೆರಿ ಮೊದಲ ಸ್ಥಾನದಲ್ಲಿದ್ದು 7,28,561 ಸೋಂಕಿತರು ಇದ್ದಾರೆ. ಬ್ರೆಜಿಲ್ 3ನೇ ಸ್ಥಾನದಲ್ಲಿ ಮತ್ತು ರಷ್ಯಾ 4ನೇ ಸ್ಥಾನದಲ್ಲಿದೆ.

ಟಾಪ್ 4 ರಾಜ್ಯಗಳು

ಟಾಪ್ 4 ರಾಜ್ಯಗಳು

ಭಾರತದಲ್ಲಿ ಕೊರೊನಾ ಪೀಡಿತ ರಾಜ್ಯಗಳಲ್ಲಿ ಮಹಾರಾಷ್ಟ್ರ (13,21,176) ಮೊದಲ ಸ್ಥಾನದಲ್ಲಿದೆ. ಆಂಧ್ರ ಪ್ರದೇಶ (6,68,751) 2ನೇ ಸ್ಥಾನದಲ್ಲಿದೆ. ತಮಿಳುನಾಡು (5,75,017) 3ನೇ ಸ್ಥಾನದಲ್ಲಿದೆ. ಕರ್ನಾಟಕ 5,66,023 ಪ್ರಕರಣಗಳಿಂದ 4ನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+