ಜೈಲಿನಿಂದ ನಿಷೇಧಿತ ಸಿಮಿ ಸಂಘಟನೆಯ ಸದಸ್ಯರು ಎಸ್ಕೇಪ್!

By: ವಿಕಾಸ್ ನಂಜಪ್ಪ
Subscribe to Oneindia Kannada

ಭೋಪಾಲ್, ಅಕ್ಟೋಬರ್ 31 : ಇಲ್ಲಿನ ಕೇಂದ್ರ ಕಾರಾಗೃಹದಿಂದ ಎಂಟು ಮಂದಿ ವಿಚಾರಣಾಧೀನ ಕೈದಿಗಳು ಸೋಮವಾರ ಬೆಳಗ್ಗೆ ಪರಾರಿಯಾಗಿದ್ದಾರೆ.

ಎಲ್ಲಾ ಕೈದಿಗಳು ನಿಷೇಧಿತ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ)ದ ಎಂಟು ಸದಸ್ಯರು ಎಂದು ತಿಳಿದು ಬಂದಿದೆ. ಪರಾರಿಯಾಗುವ ವೇಳೆ ಜೈಲಿನ ಸೆಕ್ಯುರಿಟಿ ಗಾರ್ಡ್ ಹತ್ಯೆ ಮಾಡಿದ್ದಾರೆ.[ಉತ್ತರ ಪ್ರದೇಶದ ಬಾಂಬ್ ಸ್ಫೋಟಕ್ಕೆ ಕರ್ನಾಟಕದ ನಂಟು]

8 SIMI operatives kill guard, flee from Bhopal jail

ಜೈಲಿನಿಂದ ಪರಾರಿಯಾಗಲು ತುಂಬಾ ದಿನದಿಂದ ಯೋಜನೆ ಹಾಕಿಕೊಂಡು, ಸಮಯ ಸಾಧಿಸಿ, ಪರಾರಿಯಾಗಿದ್ದಾರೆ. ಎಲ್ಲರೂ ವಿಚಾರಣಾಧೀನ ಕೈದಿಗಳಾಗಿದ್ದರು. ತೀವ್ರ ಶೋಧ ಕಾರ್ಯ ಆರಂಭಗೊಂಡಿದೆ ಎಂದು ಮಧ್ಯಪ್ರದೇಶದ ಪೊಲೀಸರು ಹೇಳಿದ್ದಾರೆ.[ಒರಿಸ್ಸಾದಲ್ಲಿ ನಾಲ್ವರು ಸಿಮಿ ಉಗ್ರರ ಬಂಧನ]

ಮಧ್ಯಪ್ರದೇಶ ರಾಜ್ಯದಲ್ಲಿ ಈ ರೀತಿ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡಾ ಭೋಪಾಲ್ ಕೇಂದ್ರ ಕಾರಾಗೃಹದಿಂದಲೇ ವಿಚಾರಣಾಧೀನ ಕೈದಿಗಳಾಗಿದ್ದ ಸಿಮಿ ಸಂಘಟನೆಯ ಹತ್ತು ಸದಸ್ಯರು ಎಸ್ಕೇಪ್ ಆಗಿದ್ದರು. ಆದರೆ, ಈ ಪೈಕಿ ಐವರನ್ನು ತಕ್ಷಣವೇ ಬಂಧಿಸುವಲ್ಲಿ ಅಲ್ಲಿನ ಪೊಲೀಸರು ಯಶಸ್ವಿಯಾಗಿದ್ದರು.

ಹೀಗೆ ಪರಾರಿಯಾದ ಕೈದಿಗಳೇ ಮುಂದೆ ಹಲವಾರು ಕಡೆಗಳಲ್ಲಿ ಸರಣಿ ಸ್ಫೋಟಕ್ಕೆ ಕಾರಣರಾದರು, ಅನೇಕ ಕಡೆಗಳಲ್ಲಿ ಕಳ್ಳತನ, ದರೋಡೆಗಳನ್ನು ಎಸೆಗಿದರು. ಕಳೆದ ಕೆಲ ತಿಂಗಳುಗಳ ಹಿಂದೆ ಒಡಿಶಾದಲ್ಲಿ ಮೂವರನ್ನು ಎನ್ ಕೌಂಟರ್ ನಲ್ಲಿ ಬಲಿ ಹಾಕಲಾಯಿತು. ಮಿಕ್ಕವರು ಜೈಲುಪಾಲಾಗಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a shocking incident, 8 operatives of the outlawed, Students Islamic Movement of India, escaped from the Bhopal central jail in Madhya Pradesh after killing a security guard. The 8 operatives were under trial prisoners. Police officials from Bhopal say that the matter is under Investigation.
Please Wait while comments are loading...