7th Pay Commission: ಎರಡನೇ ತುಟ್ಟಿಭತ್ಯೆ, ತುಟ್ಟಿ ಪರಿಹಾರ 3% ಘೋಷಣೆ ದಿನಾಂಕ, ಅಪ್ಡೇಟ್ ಮಾಹಿತಿ
ನವದೆಹಲಿ, ಆಗಸ್ಟ್ 16: ಕೇಂದ್ರ ಸರ್ಕಾರದ ಕೋಟ್ಯಾಂತರ ನೌಕರರು 7ನೇ ವೇತನ ಆಯೋಗ ಪ್ರಸಕ್ತ ವರ್ಷದ ಎರಡನೇಯ ತುಟ್ಟಿಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR) ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ಘೋಷಿಸುವುದನ್ನೆ ಕಾಯುತ್ತಿದ್ದಾರೆ. ಕಳೆದ ಜನವರಿಯಲ್ಲಿ ಸರ್ಕಾರ ಶೇಕಡಾ 4 ರಷ್ಟು ಡಿಆರ್ ಏರಿಕೆ ಮಾಡಿತ್ತು. ಇದೀಗ 2024ನೇ ವರ್ಷದ ಎರಡನೇ ಡಿಎ ಘೋಷಣೆ ಆಗುವ ದಿನಾಂಕ? ಎಷ್ಟು ಹೆಚ್ಚಳ ಆಗಲಿದೆ? ಉದ್ಯೋಗಿಗಳು ಏನೆಲ್ಲ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಇದೇ ಸೆಪ್ಟಂಬರ್ ಮೊದಲ ವಾರದ ಕೇಂದ್ರವು ಏಳನೇ ವೇತನ ಆಯೋಗದಡಿ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಹೆಚ್ಚಳದ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ. ಈ ಸಲ ಕೇಂದ್ರವು DA ಮತ್ತು DR ನಲ್ಲಿ ಶೇಕಡಾ 3ರಷ್ಟು ಹೆಚ್ಚಳ ಮಾಡಿ ಘೋಷಿಸಬಹುದು ಎಂದು ಅಂದಾಜಿಸಲಾಗಿದೆ.

ಕಾಲ ಕಾಲಕ್ಕೆ ತಕ್ಕಂತೆ ಹೆಚ್ಚಾಗುವ ಬೆಲೆ ಏರಿಕೆ, ಹಣದುಬ್ಬರ ನಿರ್ವಹಿಸುವ ಉದ್ದೇಶದಿಂದ ತನ್ನ ನೌಕರರಿಗೆ ಕೇಂದ್ರ ಸರ್ಕಾರ ವರ್ಷದಲ್ಲಿ ಎರಡು ಬಾರಿ ಅಂದರೆ ಆರು ತಿಂಗಳಿಗೆ ಒಮ್ಮೆ ಈ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಏರಿಕೆ ಮಾಡುತ್ತದೆ. ಜನವರಿಯಲ್ಲಿ ಏರಿಕೆ ಆಗುವುದನ್ನು ಮಾರ್ಚ್ ನಲ್ಲಿ ಹಾಗೂ ಜುಲೈ ನಲ್ಲಿ ಏರಿಕೆ ಆಗುವುದನ್ನು ಸೆಪ್ಟಂಬರ್‌ನಲ್ಲಿ ಘೋಷಣೆ ಮಾಡುತ್ತದೆ.
ಡಿಎ ಮಟ್ಟದ ಶೇಕಡಾ 50ಕ್ಕೆ ತಲುಪಿದೆ
ಇದೇ ವರ್ಷ ಜನವರಿಯ ತುಟ್ಟಿಭತ್ಯೆಯನ್ನು ಶೇಕಡಾ 4ರಷ್ಟು ಏರಿಕೆ ಮಾಡಿ ಮಾರ್ಚ್ ಅಂತ್ಯಕ್ಕೆ ನಿರ್ಧಾರ ಕೈಗೊಳ್ಳಲಾಯಿತು. ಈ ಮೂಲಕ ನೌಕರರ ಮೂಲವೇತನ ಮಟ್ಟವನ್ನು ಶೇಕಡಾ 50ಕ್ಕೆ ತಲುಪಿತು. ನಿಯಮ ಪ್ರಕಾರ, ಇದು ಡಿಎ ಪ್ರಮಾಣ ಶೇಕಡಾ 50ಕ್ಕೆ ತಲುಪಿದ ಬಳಿಕ ಎಚ್‌ಆರ್‌ಎ ಸೇರಿದಂತೆ ಇತರ ಭತ್ಯೆಗಳು ಸಹ ಶೇಕಡಾ 25ರಷ್ಟು ಏರಿಕೆ ಆದವು.
ಸದರಿ ವರ್ಷ ಮೊದಲ ಡಿಎ ಪಡೆದಿರುವ ಕೇಂದ್ರ ಸರ್ಕಾರಿ ನೌಕರರು ಎರಡನೇ ತುಟ್ಟಿಭತ್ಯೆ (ಜುಲೈ-ಡಿಸೆಂಬರ್) ಶೇಕಡಾ 3 ಹೆಚ್ಚಳವಾಗಲಿದೆ ಎಂದು ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ, ಡಿಎ ಹಾಗೂ ಪಿಂಚಣಿದಾರರಿಗೆ ನೀಡುವ ಡಿಆರ್ ಪ್ರಮಾಣ 3ರಷ್ಟು ಏರಿಕೆ ಸಾಧ್ಯತೆ ಇದೆ.
ಜುಲೈ 1ರಿಂದ ಅನ್ವಯವಾಗುವಂತೆ ಘೋಷಣೆ
ಮುಂದಿನ ತಿಂಗಳು ಸೆಪ್ಟಂಬರ್ ಮೊದಲ ವಾರ ಕೇಂದ್ರವು 2024ರ ಜುಲೈ 1ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಿಸಿ ಘೋಷಿಸಲಿದೆ ಎಂದು ವರದಿ ಆಗಿದೆ.
ಕೇಂದ್ರ ಸರ್ಕಾರಿ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಆಧಾರದಲ್ಲಿ ಕ್ಯಾಲ್ಕುಲೇಟ್ ಮಾಡಲಾಗುತ್ತದೆ. ಜೊತೆಗೆ ವಿವಿಧ ರಂಗಗಳಲ್ಲಿನ ಚಿಲ್ಲರೆ ಮೌಲ್ಯಗಳ (ದರ) ಬದಲಾವಣೆಯನ್ನು ಟ್ರ್ಯಾಕ್ ಮಾಡಿ ನಿರ್ಧಾರ ಪ್ರಕಟಿಸಲಾಗುತ್ತದೆ.












Click it and Unblock the Notifications