7th Pay Commission: ನೌಕರರಿಗೆ ಸಿಹಿ ಸುದ್ದಿ.. ಶೀಘ್ರದಲ್ಲೇ ಮನೆ ಬಾಡಿಗೆ ಭತ್ಯೆ ಹೆಚ್ಚಳ- ಅಂಕಿಅಂಶ, ಮಾಹಿತಿ, ವಿವರ
ಡಿಎ ಹೆಚ್ಚಳದ ನಂತರ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ಕಾದಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಶೀಘ್ರದಲ್ಲೇ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇತ್ತೀಚಿಗೆ ಕೇಂದ್ರ ಸರ್ಕಾರವು ನೌಕರರ ಡಿಎ ಹೆಚ್ಚಳ ಮಾಡಿತ್ತು. ಇದು ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಸಮಯದಲ್ಲಿ ಗಮನಾರ್ಹ ಆರ್ಥಿಕ ಪ್ರಯೋಜನಗಳನ್ನು ತಂದಿತ್ತು. ಅವರ ಖಾತೆಗಳಿಗೆ ದೀಪಾವಳಿ ಬೋನಸ್ ಮತ್ತು ಡಿಎ ಬಾಕಿ ಜೊತೆಗೆ ಗ್ರಾಚ್ಯುಟಿಯನ್ನು ಜಮಾ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಕಾದಿದೆ. ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವು 2024 ರಲ್ಲಿ ಮತ್ತೆ ಪ್ರಾರಂಭವಾಗುತ್ತದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದೊಂದಿಗೆ, ಪ್ರಸ್ತುತ ಡಿಎ 46 ಪ್ರತಿಶತದಷ್ಟಿದೆ.
ಇತ್ತೀಚಿನ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ದತ್ತಾಂಶವು 137.5 ಪಾಯಿಂಟ್‌ಗಳಲ್ಲಿ 48.54 ಶೇಕಡಾವನ್ನು ತಲುಪಿದೆ. ಮುಂಬರುವ ತಿಂಗಳುಗಳಲ್ಲಿ ನೌಕರರ ಡಿಎಯಲ್ಲಿ 4ರಿಂದ 5 ಪ್ರತಿಶತದಷ್ಟು ಹೆಚ್ಚಳವನ್ನು ನಿರೀಕ್ಷಿಸಲಾಗಿದೆ.
ಪ್ರಯಾಣ ಭತ್ಯೆ ಹೆಚ್ಚಾಗುವ ಸಾಧ್ಯತೆ
ಕೇಂದ್ರ ಸರ್ಕಾರಿ ನೌಕರರಿಗೆ ಪ್ರಯಾಣ ಭತ್ಯೆಯು ಹೆಚ್ಚಳವಾಗುವ ನಿರೀಕ್ಷೆಯಿದೆ. ಪ್ರಮುಖ ನಗರಗಳಲ್ಲಿ, ಗ್ರೇಡ್ 1 ರಿಂದ 2 ಗ್ರೇಡ್ ಉದ್ಯೋಗಿಗಳು ಈ ಬಾರಿ ಕ್ರಮವಾಗಿ 1800 ರೂಪಾಯಿ ಮತ್ತು 1900 ರೂಪಾಯಿ ಪಡೆದುಕೊಳ್ಳಬಹುದು. ಆದರೆ ಗ್ರೇಡ್ 3 ರಿಂದ 8 ಗ್ರೇಡ್ ಉದ್ಯೋಗಿಗಳು 3600 ರೂಪಾಯಿಗಳಿಗೆ ಹೆಚ್ಚಿನ ಡಿಎ ನಿರೀಕ್ಷಿಸಬಹುದು. ಇತರ ನಗರಗಳಲ್ಲಿ ಈ ದರವು 1800 ರೂಪಾಯಿಗಿಂದ ಹೆಚ್ಚಾಗಿದೆ.

ಮನೆ ಬಾಡಿಗೆ ಭತ್ಯೆ ಹೆಚ್ಚಳ
ಮುಂದಿನ ವರ್ಷಕ್ಕೆ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಪರಿಷ್ಕರಣೆ ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ. ಮನೆ ಬಾಡಿಗೆ ಭತ್ಯೆಯು ಸುಮಾರು 3 ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಹಿಂದಿನ ಪರಿಷ್ಕರಣೆಗಳ ಪ್ರಕಾರ, ತುಟ್ಟಿಭತ್ಯೆಯು 50 ಪ್ರತಿಶತವನ್ನು ಮೀರಿದರೆ ಎಚ್‌ಆರ್‌ಎ ಪರಿಷ್ಕರಣೆಗಳಿಗೆ ಒಳಗಾಗುತ್ತದೆ.
ಪ್ರಸ್ತುತ X, Y, Z ವರ್ಗದ ನಗರಗಳಲ್ಲಿ 27, 24, ಮತ್ತು 18 ಪ್ರತಿಶತವನ್ನು ನಿಗದಿಪಡಿಸಲಾಗಿದೆ, ಎಚ್‌ಆರ್‌ಎನಲ್ಲಿನ ಪ್ರಸ್ತಾವಿತ ಹೆಚ್ಚಳವು ಈ ದರಗಳನ್ನು ಅನುಕ್ರಮವಾಗಿ 30, 27 ಮತ್ತು 21 ಪ್ರತಿಶತಕ್ಕೆ ಹೆಚ್ಚು ಮಾಡಬಹುದು.
ಮಾರ್ಚ್ 2024 ರಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಎಚ್‌ಆರ್‌ಎ ಅನ್ನು ಪರಿಷ್ಕರಿಸಲಾಗುವುದು. ನಂತರ ನಿರೀಕ್ಷಿತವಾಗಿ ಶೇಕಡಾ 3 ರಷ್ಟು ಹೆಚ್ಚಳವಾಗಲಿದೆ. ಸಾಮಾನ್ಯವಾಗಿ, ಡಿಎ 50 ಪ್ರತಿಶತ ಮಿತಿಯನ್ನು ದಾಟಿದಾಗ ಎಚ್‌ಆರ್‌ಎ ಅನ್ನು ಪರಿಷ್ಕರಿಸಲಾಗುತ್ತದೆ. ಪ್ರಸ್ತುತ, ಎಚ್‌ಆರ್‌ಎ ಅನ್ನು 27, 24, ಮತ್ತು 18 ಶೇಕಡಾ ದರದಲ್ಲಿ ನೀಡಲಾಗುತ್ತದೆ. ಇದನ್ನು X, Y, Z ನಗರಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ. ಡಿಎ 50 ಶೇಕಡಾವನ್ನು ಮೀರಿದರೆ, ಎಚ್‌ಆರ್‌ಎ ಅನುಕ್ರಮವಾಗಿ 30, 27 ಮತ್ತು 21 ಶೇಕಡಾಕ್ಕೆ ಏರುವ ನಿರೀಕ್ಷೆಯಿದೆ.












Click it and Unblock the Notifications