7ನೇ ವೇತನ ಆಯೋಗ: ಸರ್ಕಾರಿ ನೌಕರರ ಮೂಲ ವೇತನ ಶೇ.18.5ರಷ್ಟು ಹೆಚ್ಚಳ

ನವದೆಹಲಿ, ಸೆಪ್ಟಂಬರ್ 09: ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವ ಉದ್ದೇಶದ ಪೂರಕವೆಂಬಂತೆ ಹೊಸ ಪಿಂಚಣಿ ಯೋಜನೆ (NPS) ಅಡಿಯಲ್ಲಿ ಪರ್ಯಾಯವಾಗಿ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಘೋಷಣೆ ಮಾಡಿದೆ. ಇದಕ್ಕೆ ಅನುಮೋದನೆ ನೀಡುತ್ತಿದ್ದಂತೆ ನೌಕರರಲ್ಲಿ ತುಟ್ಟಿಭತ್ಯೆ, ಪಿಂಚಣಿ, ಮೂಲ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಒಂದಷ್ಟು ಆಲೋಚನೆಗಳು, ಚರ್ಚೆಗಳು ಶುರುವಾಗಿದೆ. ಒಂದಷ್ಟು ವಿಶೇಷತೆ ಇರುವ ಈ ಯುಪಿಎಸ್ ನಡಿ ಸರ್ಕಾರ ಕೊಡುಗೆ ನೀಡಲಿದೆ.

ಸರ್ಕಾರ ಏಕೀಕೃತ ಪಿಂಚಣಿ ಯೋಜನೆಯಡಿ ನೌಕರರ ಸೇವಾ ಕೊಡುಗೆಯ ಆಧಾರದಲ್ಲಿ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇಕಡಾ 10 ದೊರೆಯಲಿದೆ. ಈ ವೇಳೆ ಸರ್ಕಾರ ಹಾಲಿ ಸರ್ಕಾರವು ಮೂಲ ವೇತನ 14 ಪ್ರತಿಶತವನ್ನು 18.5 ರಷ್ಟು ಹೆಚ್ಚಿಸಿ ಕೊಡುಗೆ ನೀಡಲಿದೆ ಎಂದು ವರದಿ ಆಗಿದೆ.

7th Pay Commission Central May Give 18 5 Percent Basic Salary of Government Employees

ಯೋಜನೆಯಡಿ ಕುಟುಂಬ ಪಿಂಚಣಿ, ನಿವೃತ್ತಿಯ ನಂತರ ಕನಿಷ್ಠ ಖಾತರಿ ಪಿಂಚಣಿ ಮತ್ತು ಒಟ್ಟು ಮೊತ್ತ ಪಾವತಿಗೆ ಸಹ ನಿಬಂಧನೆಗಳು ಇದೆ. ಆದ್ದರಿಂದ ನೌಕರರು ಉದ್ಯೋಗಿಗಳಿಗೆ NPS ನಿಂದ UPS ಎರಡದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ.

10 ವರ್ಷಗಳ ಸೇವೆಯ ನಂತರ ಸಿಗುವ ಪಿಂಚಣಿ

ಒಬ್ಬ ನೌಕರರನ 10 ವರ್ಷಗಳ ಕನಿಷ್ಠ ಸೇವಾ ಅವಧಿ ಆಧಾರದಲ್ಲಿ ಪಿಂಚಣಿ ನೀಡಲಾಗುತ್ತದೆ. ಹೊಸ ಪಿಂಚಣಿ ಯೋಜನೆ ಕನಿಷ್ಠ 10 ವರ್ಷಗಳ ಸೇವೆಯ ನಂತರ ನಿವೃತ್ತ ವ್ಯಕ್ತಿಗೆ ಮಾಸಿಕವಾಗಿ 10,000 ರೂ. ಪಿಂಚಣಿ ಸಿಗುವ ಖಾತೆ ನೀಡುತ್ತದೆ. ಇದರೊಂದಿಗೆ ನಿವೃತ್ತಿ ಬಳಿಕ ಗ್ರಾಚ್ಯುಟಿ ಸೇರಿ ದೊಡ್ಡ ಮೊತ್ತವು ಪಿಂಚಣಿದಾರನ ಕೈಗೆ ಸೇರುತ್ತದೆ.

ಕೇಂದ್ರ ಸರ್ಕಾರದ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಯೋಜನೆ ಅಡಿ ಒಬ್ಬ ಉದ್ಯೋಗ 25 ವರ್ಷಗಳ ಸುದೀರ್ಘ ಸೇವೆ ನೀಡಿದ ಬಳಿಕ ಆ ಉದ್ಯೋಗಿ ಕಳೆದ ವರ್ಷದ ಸರಾಸರಿ ವೇತನದ ಶೇಕಡಾ 50 ರಷ್ಟು ಪಿಂಚಣಿ ಪಡೆಯುತ್ತಾನೆ ಎಂದು ಕೇಂದ್ರ ತಿಳಿಸಿದೆ.

7th Pay Commission Central May Give 18 5 Percent Basic Salary of Government Employees

ಇನ್ನೂ 2004ರ ಜನವರಿ ನಂತರ ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಪಡೆದವರು ಸಹ ಇದ್ದಾರೆ. ಸದ್ಯ ಈ ಪಿಂಚಣಿ ಯೋಜನೆಯಿಂದ ಒಟ್ಟು ಸುಮಾರು 30 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಪ್ರಯೋಜನ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಅದೇ ರೀತಿ ವಿವಿಧ ರಾಜ್ಯಗಳಲ್ಲಿ ಈ ಹೊಸ ಪಿಂಚಣಿ ಯೋಜನೆ ಜಾರಿಯಾದರೆ ತಲಾ ಒಟ್ಟು 90 ಲಕ್ಷ ನೌಕರರಿಗೆ ಇದರ ಪ್ರಯೋಜನ ಸಿಗಲಿದೆ ಎಂದು ವಿಶ್ಲೇಷಿಸಲಾಗಿದೆ.

8ನೇ ವೇತನ ಆಯೋಗ: ತುಟ್ಟಿಭತ್ಯೆ ನಿರೀಕ್ಷೆಗಳು

ಈ ಪಿಂಚಣಿ ಯೋಜನೆ ಜಾರಿಯ ಜೊತೆಗೆ ಕೇಂದ್ರ ಸರ್ಕಾರ ಹೊಸ 8ನೇ ವೇತನ ಆಯೋಗ ಜಾರಿ, ಅನುಮೋದನೆ ಕುರಿತು ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ತುಟ್ಟಿಭತ್ಯೆ, ತುಟ್ಟಿ ಪರಿಹಾರ ಹೆಚ್ಚಳ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರಿ ನೌಕರರು ಇದೇ ಸೆಪ್ಟಂಬರ್ ಅಂತ್ಯಕ್ಕೆ ಸರ್ಕಾರದಿಂದ ಸಿಹಿ ಸುದ್ದಿ ಪಡೆಯಲಿದ್ದಾರೆ.

2024ರ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವು ಶೇಕಡಾ 4ರಷ್ಟು ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಜನವರಿ ಡಿಎ ಏರಿಕೆಯಿಂದ ತುಟ್ಟಿಭತ್ಯೆ ಪ್ರಮಾಣ ಶೇಕಡಾ 50 ರಷ್ಟು ಹೆಚ್ಚಾಗಿದೆ. ಈ ಭಾರಿ ಅದು 54ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+