7th pay commission: ಅಕ್ಟೋಬರ್ 20ಕ್ಕೆ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ 3% ಹೆಚ್ಚಳ ಘೋಷಣೆ ಸಾಧ್ಯತೆ

ಬೆಂಗಳೂರು, ಅಕ್ಟೋಬರ್ 07: ಇದೇ ವರ್ಷದ ಎರಡನೇ ತುಟ್ಟಿಭತ್ಯೆ (Dearness Allowance) ಪಡೆಯಲು ತುದಿಗಾಲಲ್ಲಿ ನಿಂತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಇದೇ ತಿಂಗಳೇ ಸಿಹಿ ಸುದ್ದಿ ದೊರೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತವೆ. ಜುಲೈ 1ರಿಂದಲೇ ಅನ್ವಯವಾಗುವಂತೆ ಕೇಂದ್ರ ಸರ್ಕಾರವು ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ (Dearness Relief) ಪರಿಷ್ಕರಣೆ ಮಾಡಿ ಘೋಷಿಸಲಿದೆ. ಈ ಮೂಲಕ ಹಣದುಬ್ಬರ ವಿರುದ್ಧ ನೌಕರರಿಗೆ ಬೂಸ್ಟರ್ ನೀಡಲಿದೆ.

ಕೇಂದ್ರ ಸರ್ಕಾರಿ ನೌಕರರು ಈಗಾಗಲೇ ಜನವರಿ 1ರಿಂದ ಅನ್ವಯವಾಗುವಂತೆ ಶೇಕಡಾ 4ರಷ್ಟು ತುಟ್ಟಿಭತ್ಯೆ (DA hike), ತುಟ್ಟಿ ಪರಿಹಾರವನ್ನು (DR Hike) ಮಾರ್ಚ್ ತಿಂಗಳಲ್ಲಿ ಪಡೆದುಕೊಂಡಿದ್ದಾರೆ. ನಂತರ ಆರು ತಿಂಗಳಿಗೆ (ಜುಲೈ) ಹೆಚ್ಚಾಗಬೇಕಿದ್ದ ತುಟ್ಟಿಭತ್ಯೆ ಸೆಪ್ಟಂಬರ್‌ನಲ್ಲಿ ಘೋಷಣೆ ಆಗಬೇಕಿತ್ತು. ಕಾರಣಾಂತರಗಳಿಂದ ಅದನ್ನು ಅಕ್ಟೋಬರ್ 20ರಂದು ಘೋಷಿಸಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ ಎಂದು ವರದಿ ಆಗಿವೆ.

7th Pay Commission Central May be Announced 3 Percent DA Hike For Govt Employees on Oct 20th

ತುಟ್ಟಿಭತ್ಯೆ ಪ್ರಮಾಣ ಶೇಕಡಾ 53ಕ್ಕೆ ಏರಿಕೆ?

ಈ ಬಾರಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇಕಡಾ 3ರಷ್ಟು ತುಟ್ಟಿಭತ್ಯೆ ಹೆಚ್ಚಳ ಘೋಷಿಸಲಿದೆ. ಇದರಿಂದ ತುಟ್ಟಿಭತ್ಯೆ ಪ್ರಮಾಣ ಶೇಕಡಾ 53ಕ್ಕೆ ಏರಿಕೆ ಆಗಲಿದೆ. ಈಗಾಗಲೇ ತುಟ್ಟಿಭತ್ಯೆ ಪ್ರಮಾಣ ಶೇಕಡಾ 50ಕ್ಕೆ ಏರಿಕೆ ಆಗಿದ್ದರಿಂದ ಒಂದಷ್ಟು ಭತ್ಯೆಗಳು ಸ್ವಯಂಪ್ರವೇರಿತವಾಗಿ ಏರಿಕೆ ಆಗಿದ್ದು, ಅವುಗಳಿಂದ ನೌಕರರು ಪ್ರಯೋಜನೆ ಪಡೆಯುತ್ತಿದ್ದಾರೆ.

ಜುಲೈ 1ರಿಂದ ಅನ್ವಯವಾಗುಂತೆ ಡಿಎ ಹೆಚ್ಚಳ

ಈಗಾಗಲೇ ಒಂದು ಕೋಟಿ ನೌಕರರ ಕುಟುಂಬಗಳು ತುಟ್ಟಿಭತ್ಯೆ ಶೇಕಡಾ 50 ಹೆಚ್ಚಳದ ಲಾಭವನ್ನು ಪಡೆದುಕೊಂಡಿದ್ದಾರೆ. ಇದೀಗ ಜುಲೈ 1ರಿಂದ 3% ಏರಿಕೆ ಮಾಡಿ ಘೋಷಿಸಲು ಸಿದ್ಧತೆ ಆರಂಭವಾಗಿವೆ. ಈ ಬಗ್ಗೆ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟದಿಂದ ಅನುಮೋದನೆ ಸಿಗಲಿದೆ.

7th Pay Commission Central May be Announced 3 Percent DA Hike For Govt Employees on Oct 20th

ಸದ್ಯ ನೌಕರರು ತುಟ್ಟಿಭತ್ಯೆ ಎಷ್ಟು ಹೆಚ್ಚಳ ಸಿಗಲಿದೆ ಎಂಬುದರ ಜೊತೆಗೆ 8ನೇ ವೇತನ ಆಯೋಗ ಜಾರಿಯಾದರೆ, ಈಗಿನಕ್ಕಿಂತಲೂ ಹೆಚ್ಚಿನ ಮೂಲ ವೇತನ, ತುಟ್ಟಿಭತ್ಯೆ, ತುಟ್ಟಿಪರಿಹಾರದಂತಹ ಅನೇಕ ಲಾಭಗಳು ಸಿಗಲಿವೆ. ಅವೆಲ್ಲವು ಎಷ್ಟು ಪರ್ಸೆಟೇಜ್‌ನಲ್ಲಿ ಸಿಗಲಿವೆ, ಯಾವಾಗ ಹೊಸ ವೇತನ ಆಯೋಗ ಘೋಷಣೆ ಆಗಲಿದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.

ಕೇಂದ್ರ ಸರ್ಕಾರವು ವರ್ಷದಲ್ಲಿ ಪ್ರತಿ ತಿಂಗಳಿಗೆ ಒಮ್ಮೆ ಜನವರಿ ಮತ್ತು ಜುಲೈ ತಿಂಗಳಲ್ಲಿ ನೌಕರರ ತುಟ್ಟಿಭತ್ಯೆಯನ್ನು ಪರಿಷ್ಕರಣೆ ಮಾಡುತ್ತದೆ. ಅಂದಿನ ಹಣದುಬ್ಬರ, ಫಿಟ್‌ಮೆಂಟ್ ಅಂಶದ ಆಧಾರದಲ್ಲಿ ಡಿಎ ಹೆಚ್ಚಳ ಮಾಡಿ ಆದೇಶಿಸುತ್ತದೆ. ಈ ವರ್ಷದ ಜನವರಿ ಡಿಎ ಪರಿಷ್ಕರಣೆ ನೌಕರರ ಕೈ ಸೇರಿದೆ.

8ನೇ ವೇತನ ಆಯೋಗ: ನೌಕರರಿಗೆ ಹಿನ್ನಡೆ?

ನೌಕರರು ಕೇಂದ್ರ ಸರ್ಕಾರದಿಂದ 8ನೇ ವೇತನ ಆಯೋಗದ ವಿಚಾರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈವರೆಗೆ ಯಾವೊಂದು ಮಾಹಿತಿಯನ್ನು ಕೇಂದ್ರ ಸರ್ಕಾರ ಬಿಟ್ಟುಕೊಟ್ಟಿಲ್ಲ. ಸದ್ಯ ನೌಕರರು ಸಂಘಗಳು ಬೇಡಿಕೆವುಳ್ಳ ಶಿಫಾರಸುಗಳನ್ನು ಸಲ್ಲಿದ್ದಾರೆ. ಸದ್ಯಕ್ಕೆ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡುವಲ್ಲಿ ನಿರಾಸಕ್ತಿ ವಹಿಸಿದೆ. ಇದು ನೌಕರರಿಗೆ ದೊಡ್ಡ ಆಘಾತ ನೀಡಿದೆ..

ಸದ್ಯ ಈ ಎಂಟನೇ ವೇತನ ಆಯೋಗ ಜಾರಿ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಕೇಂದ್ರ ಸರ್ಕಾರಿನೌಕರರಲ್ಲಿ ಮನೆ ಮಾಡಿವೆ. ಆದರೆ ಈ ಬಗ್ಗೆ ಕೇಂದ್ರ ಸಚಿವಾಲಯವೇ ಇತ್ತೀಚಿನ ಸದನದಲ್ಲಿ ಯಾವುದೇ ಅಪ್ಡೇಟ್ ನೀಡಿಲ್ಲ. ಮೂಲಗಳ ಪ್ರಕಾರ ಹೊಸ ವೇತನ ಆಯೋಗ 2026 ಜನವರಿ ತಿಂಗಳಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಹಾಲಿ ಏಳನೇ ವೇತನ ಆಯೋಗ ಕೊನೆಗೊಳ್ಳಲು ಇನ್ನೂ ಒಂದೂವರೆ ವರ್ಷ ಬಾಕಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+