ಭಾರತ; 24 ಗಂಟೆಯಲ್ಲಿ 75,829 ಹೊಸ ಕೋವಿಡ್ ಪ್ರಕರಣ

ನವದೆಹಲಿ, ಅಕ್ಟೋಬರ್ 04: ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 65,49,374 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 75,829 ಹೊಸ ಪ್ರಕರಣ ದೇಶದಲ್ಲಿ ದಾಖಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯಂತೆ 24 ಗಂಟೆಯಲ್ಲಿ ದೇಶದಲ್ಲಿ 940 ಜನರು ಮೃತಪಟ್ಟಿದ್ದಾರೆ. ಇದುವರೆಗೂ ಒಟ್ಟು ಮೃತಪಟ್ಟವರ ಸಂಖ್ಯೆ1,01,782.

ದೇಶದಲ್ಲಿ 55,09,967 ಜನರು ಇದುವರೆಗೂ ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 9,37,625. 6.47 ಮಿಲಿಯನ್ ಸೋಂಕಿತರು ದೇಶದಲ್ಲಿ ಇದ್ದು, ವಿಶ್ವದಲ್ಲಿನ ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ.

 75829 New COVID 19 Cases In India In 24 Hours

ಅಕ್ಟೋಬರ್ 3ರ ತನಕ ಭಾರತದಲ್ಲಿ 7,89,92,534 ಮಾದರಿಗಳ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಅಕ್ಟೋಬರ್ 3ರಂದು 11,42,131 ಮಾದರಿಗಳ ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್‌ ಹೇಳಿದೆ.

ಹೆಚ್ಚು ಸೋಂಕಿತರು : ಭಾರತದಲ್ಲಿ ಹೆಚ್ಚು ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 14,30,861. ಸಕ್ರಿಯ ಪ್ರಕರಣಗಳು 2,58,108.

ಆಂಧ್ರ ಪ್ರದೇಶ ರಾಜ್ಯ 2ನೇ ಸ್ಥಾನದಲ್ಲಿದ್ದು 7,13,014 ಸೋಂಕಿತರು ಇದ್ದಾರೆ. ಕರ್ನಾಟಕ 3ನೇ ಸ್ಥಾನದಲ್ಲಿದ್ದು 6,30,516 ಸೋಂಕಿತರಿದ್ದಾರೆ. 4ನೇ ಸ್ಥಾನದಲ್ಲಿದಲ್ಲಿ ತಮಿಳುನಾಡು (6,14,507), 5ನೇ ಸ್ಥಾನದಲ್ಲಿ ಉತ್ತರ ಪ್ರದೇಶ (4,10,626) ಸೋಂಕಿತರು ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+