ಪಾಟ್ನಾ: ಅಮ್ಮನ ಚಿಕಿತ್ಸಾವೆಚ್ಚ ಭರಿಸುವುದಕ್ಕೆ ಭಿಕ್ಷೆ ಬೇಡಿದ ಪುಟ್ಟಕಂದ

ಪಾಟ್ನಾ, ನವೆಂಬರ್ 28: ಬಾಣಂತಿಯಾಗಿರುವ ತನ್ನ ತಾಯಿಯ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಕ್ಕಾಗಿ ಏಳು ವರ್ಷದ ಪುಟ್ಟ ಗಂಡುಮಗುವೊಂದು ಬೀದಿ ಬೀದಿಯಲ್ಲಿ ಭಿಕ್ಷೆ ಎತ್ತುವ ಕರುಣಾಜನಕ ದೃಶ್ಯವೊಂದು ಪಾಟ್ನಾದ ಪತ್ರಕರ್ತರ ಕಣ್ಣಿಗೆ ಬಿದ್ದು, ಚರ್ಚೆಗೆ ಗ್ರಾಸವಾಗಿದೆ.

ಚಿಕಿತ್ಸೆ ವೆಚ್ಚವನ್ನು ಕಟ್ಟದಿದ್ದರೆ ತಾಯಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಹೇಳಿದ್ದಾರೆ. ಆರ್ಥಿಕವಾಗಿ ಅನುಕೂಲತೆಯಿಲ್ಲದ ಈ ಈ ಮಗುವಿನ ತಂದೆ, ದುಡ್ಡನ್ನು ಹೊಂದಿಸುವುದು ಹೇಗೆಂದು ಚಿಂತಿಸುತ್ತಿರುವ ಸಮಯದಲ್ಲೇ, ಏಳುವರ್ಷದ ಪುಟ್ಟ ಮಗು ಬೀದಿ ಬೀದಿ ಅಲೆಯುತ್ತಾ, 'ನನ್ನಮ್ಮ ಮತ್ತು ನನ್ನ ಸಹೋದರನ ಆಸ್ಪತ್ರೆಯಿಂದ ಬಿಡಿಸಿಕೊಳ್ಳೋದಕ್ಕೆ ಹಣ ಕೊಡಿ' ಎಂದು ದೈನ್ಯವಾಗಿ, ಮುಗ್ಧವಾಗಿ ಬೇಡುವುದಕ್ಕೆ ಶುರುಮಾಡಿದೆ!

7 year old child in Patna begs to clear his mother's medical bills!

ಇದನ್ನು ಕಂಡ ಪತ್ರಕರ್ತರು ಮಗುವನ್ನು ಪ್ರಶ್ನಿಸಿದಾಗ ಆಕೆಯ ತಾಯಿ ಮಾ ಶೀತಲಾ ಎಮರ್ಜೆನ್ಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತಿಳಿದಿದೆ. ಬಾಣಂತಿಯಾಗಿದ್ದ ಆಕೆಯನ್ನು ನವೆಂಬರ್ 14 ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಕೆಲದಿನಗಳ ಚಿಕಿತ್ಸೆಯ ನಂತರ 1.5 ಲಕ್ಷ ರೂ. ಚಿಕಿತ್ಸೆ ವೆಚ್ಚವನ್ನು ಭರಿಸುವಂತೆ ಹೇಳಲಾಗಿತ್ತು. ಆದರೆ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ಕುಟುಂಬ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸಾ ವೆಚ್ಚವನ್ನು ಕಡಿತಗೊಳಿಸಲಾಗಿತ್ತಾದರೂ, ಅದನ್ನೂ ಭರಿಸಲು ಕುಟುಂಬ ಅಶಕ್ತವಾಗಿದೆ. ಈ ವೆಚ್ಚವನ್ನು ಭರಿಸದಿದ್ದಲ್ಲಿ, ತಾಯಿಯನ್ನು ಡಿಸ್ಚಾರ್ಜ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ. ಇದರಿಂದ ಬೇರೆ ದಾರಿ ತೋಚದೆ ಮಗು ಭಿಕ್ಷೆ ಬೇಡುವುದಕ್ಕೆ ಆರಂಭಿಸಿದೆ!

ನಂತರ ಮಾಧೇಪುರ ಸಂಸದ ಪಪ್ಪು ಯಾದವ್ ಮಧ್ಯಪ್ರವೇಶಿಸಿ, ತಾಯಿಯನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಿದ್ದಲ್ಲದೆ, ಆಕೆಯನ್ನು ಸುರಕ್ಷಿತವಾಗಿ ಅಂಬುಲೆನ್ಸ್ ನಲ್ಲಿ ಮನೆಗೆ ಕಳಿಸುವಂತೆ ಆಸ್ಪತ್ರೆಗೆ ತಾಕೀತುಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+