ಭಾರತದ ಏಳು ಮಾರ್ಗದಲ್ಲಿ ಸಂಚರಿಸಲಿದೆ ಬುಲೆಟ್ ಟ್ರೈನ್

ನವದೆಹಲಿ, ಸೆಪ್ಟೆಂಬರ್ 14 : ಭಾರತದ ಬಹು ನಿರೀಕ್ಷೆಯ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆ ಕೋವಿಡ್ ಕಾರಣದಿಂದಾಗಿ ವಿಳಂಬವಾಗುತ್ತಿದೆ. ಕೇಂದ್ರ ಸರ್ಕಾರ ಇನ್ನೂ 7 ಬುಲೆಟ್ ರೈಲು ಯೋಜನೆಯನ್ನು ರೂಪಿಸುತ್ತಿದೆ.

ಒಟ್ಟು ಏಳು ಬುಲೆಟ್ ಟ್ರೈನ್ ಯೋಜನೆಗೆ ಸುಮಾರು 10 ಟ್ರಿಲಿಯನ್ ವೆಚ್ಚವಾಗಲಿದೆ ಎಂದು ಬ್ಯುಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ. ಏಳು ಮಾರ್ಗ ಸೇರಿ ಸುಮಾರು 4,869 ಕಿ.ಮೀ. ಮಾರ್ಗದಲ್ಲಿ ರೈಲು ಸಂಚರಿಸಲಿದೆ.

ದೆಹಲಿ-ವಾರಣಾಸಿ, ಮುಂಬೈ-ನಾಗ್ಪುರ, ದೆಹಲಿ-ಅಹಮದಾಬಾದ್, ಚೆನ್ನೈ-ಮೈಸೂರು, ದೆಹಲಿ-ಅಮೃತಸರ, ಮುಂಬೈ-ಹೈದರಾಬಾದ್ ಮತ್ತು ವಾರಣಾಸಿ-ಹೌರಾ ಮಾರ್ಗದಲ್ಲಿ ಬುಲೆಟ್ ರೈಲು ಓಡಲಿದೆ.

7 New Bullet Train Project In India

"ಸರ್ಕಾರ ಏಳು ಮಾರ್ಗದ ಡಿಪಿಆರ್ ಸಿದ್ಧಪಡಿಸಲು ಸೂಚನೆ ನೀಡಿದೆ. ಯೋಜನೆಯ ವೆಚ್ಚ ಎಷ್ಟಾಗಬಹುದು ಎಂದು ವರದಿ ಬಳಿಕ ಅಂತಿಮವಾಗಲಿದೆ" ಎಂದು ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ ಹೇಳಿದೆ.

ಜಪಾನ್ ತಂತ್ರಜ್ಞಾನದ ನೆರವಿನಿಂದ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆ ಜಾರಿಗೊಳಿಸಲಾಗುತ್ತಿದೆ. ಆದರೆ, ಎಲ್ಲಾ ಯೋಜನೆಗಳನ್ನು ಇದೇ ಮಾದರಿಯಲ್ಲಿ ಮಾಡುವುದಿಲ್ಲ. ಮಾರ್ಗಗಳಿಗೆ ಅನುಗುಣವಾಗಿ ಯೋಜನಾ ವೆಚ್ಚ ಬದಲಾವಣೆಯಾಗಲಿದೆ.

ಭಾರತದಲ್ಲಿ ಮೊದಲು ಘೋಷಣೆ ಮಾಡಿದ ಹೈಸ್ಪೀಡ್ ರೈಲು ಯೋಜನೆ ಮುಂಬೈ-ಅಹಮದಾಬದ್. ಆದರೆ, ಟೆಂಡರ್ ಪ್ರಕ್ರಿಯೆ, ಭೂ ಸ್ವಾಧೀನ ಕೋವಿಡ್ ಕಾರಣದಿಂದಾಗಿ ವಿಳಂಬವಾಗಿದೆ. 2028ರಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಎನ್‌ಹೆಚ್‌ಎಸ್‌ಆರ್‌ಸಿಎಲ್ ಈಗಾಗಲೇ ಈ ಯೋಜನೆಗಾಗಿ ಶೇ 77ರಷ್ಟು ಭೂಮಿಯನ್ನು ಗುಜರಾತ್‌ನಲ್ಲಿ ಸ್ವಾಧೀನಪಡಿಸಿಕೊಂಡಿದೆ. ಶೇ 80ರಷ್ಟನ್ನು ದಾದ್ರಾ ಮತ್ತು ನಗರ ಹವೇಲಿಯಲ್ಲಿ ಮತ್ತು ಶೇ 22ರಷ್ಟು ಭೂಮಿಯನ್ನು ಮಹಾರಾಷ್ಟ್ರದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+