ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗಳ ಆಕ್ಷೇಪಾರ್ಹ ವಿಡಿಯೋ ವೈರಲ್ ಮಾಡಿದ್ದನ್ನು ಪ್ರಶ್ನಿಸಿದ್ದ ಯೋಧನ ಹತ್ಯೆ, ಏಳು ಮಂದಿ ಬಂಧನ

|
Google Oneindia Kannada News

ಅಹಮದಾಬಾದ್, ಡಿ. 27: ಗುಜರಾತ್‌ನ ನಾಡಿಯಾಡ್‌ನಲ್ಲಿ ತನ್ನ ಮಗಳ ಆಕ್ಷೇಪಾರ್ಹ ವಿಡಿಯೋವನ್ನು ವೈರಲ್ ಮಾಡಿದ್ದನ್ನು ವಿರೋಧಿಸಿದ್ದ ಗಡಿ ಭದ್ರತಾ ಸಿಬ್ಬಂದಿಯನ್ನು (ಬಿಎಸ್‌ಎಫ್) ಹೊಡೆದು ಕೊಂದಿದ್ದ ಆರೋಪದ ಮೇಲೆ ಏಳು ಜನರನ್ನು ಬಂಧಿಸಲಾಗಿದೆ.

ಮೃತ ಯೋಧನನ್ನು ಬಿಎಸ್‌ಎಫ್ ಸಿಬ್ಬಂದಿ ಮೆಲ್ಜಿಭಾಯ್ ವಘೇಲಾ (45) ಎಂದು ಗುರುತಿಸಲಾಗಿದೆ. ಅವರು ತಮ್ಮ ಅಪ್ರಾಪ್ತ ಮಗಳ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ ವೈರಲ್ ಮಾಡಿದ್ದ 15 ವರ್ಷದ ಯುವಕನ ಮನೆಗೆ ಭೇಟಿ ನೀಡಿ ಪ್ರಶ್ನಿಸಿದ್ದರು. ಈ ವೇಳೆ ಬಾಲಕನ ಕುಟುಂಬ ಸದಸ್ಯರು ಯೋಧನ ಮೇಲೆ ಹರಿತವಾದ ಆಯುಧಗಳು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.

 ಹಸು ಕಳ್ಳಸಾಗಣೆದಾರರಿಂದ ಬಿಎಸ್‌ಎಫ್ ಯೋಧರ ಮೇಲೆ ಗುಂಡಿನ ದಾಳಿ ಹಸು ಕಳ್ಳಸಾಗಣೆದಾರರಿಂದ ಬಿಎಸ್‌ಎಫ್ ಯೋಧರ ಮೇಲೆ ಗುಂಡಿನ ದಾಳಿ

ಆರೋಪಿ ಬಾಲಕ ಮತ್ತು ಬಿಎಸ್‌ಎಫ್ ಯೋಧನ ಮಗಳು ಶಾಲಾ ಸಹಪಾಠಿಯಾಗಿದ್ದು, ಇಬ್ಬರೂ ಸಂಬಂಧದಲ್ಲಿದ್ದರು ಎಂದು ಮೂಲಕಗಳು ತಿಳಿಸಿವೆ.

7 Arrested After BSF Soldier Killed In Gujarat

ನಾಡಿಯಾಡ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ವಿಆರ್ ಬಾಜ್‌ಪೈ ಅವರು ಏಲು ಮಂದಿಯುನ್ನು ಬಂಧಿಸಿರುವುದನ್ನು ದೃಢಪಡಿಸಿದ್ದಾರೆ.

ಮೃತ ಮೆಲ್ಜಿಭಾಯ್ ವಘೇಲಾ, ಅವರ ಮಗ ಮತ್ತು ಸಂಬಂಧಿಕರು ಆರೋಪಿಗಳಲ್ಲಿ ಒಬ್ಬರಾದ ಶೈಲೇಶ್ ಯಾದವ್ ಅವರ ಮನೆಗೆ ಈ ವಿಡಿಯೋ ವೈರಲ್ ಮಾಡಿರುವ ಬಗ್ಗೆ ಮಾತನಾಡಲು ತೆರಳಿದ್ದರು. ಇದಾದ ನಂತರ ಎರಡು ಕಡೆಯವರ ನಡುವೆ ಮಾರಾಮಾರಿ ನಡೆದಿದ್ದು, ಶೈಲೇಶ್ ಅವರ ತಂದೆ ದಿನೇಶ್ ಯಾದವ್, ಚಿಕ್ಕಪ್ಪ ಅರವಿಂದ್ ಯಾದವ್ ಮತ್ತು ಇತರ ಕುಟುಂಬ ಸದಸ್ಯರು ಬಿಎಸ್ಎಫ್ ಯೋಧನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೊಲೆ ಮತ್ತು ಗಲಭೆ ಆರೋಪದ ಮೇಲೆ ಬಂಧಿಸಲಾಗಿರುವ ಏಳು ಕುಟುಂಬದ ಸದಸ್ಯರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

7 Arrested After BSF Soldier Killed In Gujarat

ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ನಾಡಿಯಾಡ್ ತಹಸಿಲ್‌ನ ವಾಣಿಪುರ ಗ್ರಾಮದ ಶೈಲೇಶ್ ಅಕಾ ಸುನೀಲ್ ಯಾದವ್, ಮೆಲ್ಜಿಭಾಯ್ ವಘೇಲಾ ಅವರ ಮಗಳ ವಿಡಿಯೋವನ್ನು ತೆಗೆದಿದ್ದಾರೆ. ಕೆಲವು ದಿನಗಳ ಹಿಂದೆ ಅದನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಅದು ವೈರಲ್ ಆಗಿದೆ.

ಡಿಸೆಂಬರ್ 24 ರಂದು ಹತ್ಯೆ ನಡೆದಾಗ ಬಾಲಕ ಸ್ಥಳದಲ್ಲಿ ಇರಲಿಲ್ಲ. ಘಟನೆಯಲ್ಲಿ ಯೋಧರ ಪುತ್ರ ನವದೀಪ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಪ್ರಸ್ತುತ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಬಿಎಸ್‌ಎಫ್ ಜವಾನನ ಪತ್ನಿ ಮಂಜುಳಾಬೆನ್ ಚಕ್ಲಾಸಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೆಲ್ಜಿಭಾಯ್ ವಘೇಲಾ ಬಿಎಸ್‌ಎಫ್ 56 ಬೆಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್ ಆಗಿದ್ದರು.

English summary
Seven people have been arrested for allegedly killed Border Security Personnel (BSF) in Gujarat's Nadiad after he protested against an obscene video of his daughter says police. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X