ಹೊಟ್ಟೆಯಿಂದ ಒಂದು ಕೆಜಿ ತೂಕದ 639 ಮೊಳೆಗಳನ್ನು ಹೊರತೆಗೆದ ವೈದ್ಯರು

Subscribe to Oneindia Kannada

ಕೊಲ್ಕೊತ್ತಾ, ಅಕ್ಟೋಬರ್ 31: ಇಲ್ಲಿನ ರಾಜ್ಯ ಸರಕಾರದ ಕೊಲ್ಕೊತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ವ್ಯಕ್ತಿಯೊಬ್ಬರ ಹೊಟ್ಟೆಯೊಳಗಿದ್ದ 1ಕೆಜಿ ತೂಕದ 639 ಮೊಳೆಗಳನ್ನು ಹೊರ ತೆಗೆದಿದ್ದಾರೆ.

ರೋಗಿ ಜೀವನದ ಜತೆಗೆ ಚೆಲ್ಲಾಟ: ಮಂಗಳೂರು ವೈದ್ಯರಿಗೆ ದಂಡ

48 ವರ್ಷದ ವ್ಯಕ್ತಿಯೊಬ್ಬರು ಸ್ಕಿಝೋಫೆರಿಯಾ ರೋಗದಿಂದ ಬಳಲುತ್ತಿದ್ದರು. ಅವರು ಹಲವು ಸಮಯದಿಂದ ಮೊಳೆಗಳನ್ನು ಮತ್ತು ಮಣ್ಣು ನುಂಗಿದ್ದರು ಎಂದು ಗೊತ್ತಾಗಿತ್ತು. ಈ ಮೊಳೆಗಳನ್ನು ಹೊಟ್ಟೆಯೊಳಗೆ ಸಂಗ್ರಹವಾಗಿದ್ದವು.

639 nails recovered from man's stomach

"ನಾವು ಅವರ ಹೊಟ್ಟೆಯಲ್ಲಿ 10ಸೆಂಟಿ ಮೀಟರ್ ಗಾತ್ರದ ರಂಧ್ರ ಕೊರೆದು ಅಯಸ್ಕಾಂತದ ಸಹಾಯದಿಂದ ಮೊಳೆಗಳನ್ನು ಹೊರಗೆ ತೆಗೆದಿದ್ದೇವೆ, ಇದಕ್ಕೆ 45 ನಿಮಿಷಗಳು ತಗುಲಿದೆ," ಎಂದು ಶಸ್ತ್ರ ಚಿಕಿತ್ಸಾ ತಜ್ಞ ಬಿಸ್ವಾಸ್ ಹೇಳಿದ್ದಾರೆ.

ಹೊಟ್ಟೆಯಲ್ಲಿದ್ದ ಮೊಳೆಗಳು 2ರಿಂದ 2.5 ಸೆಂಟಿ ಮೀಟರ್ ಗಾತ್ರ ಹೊಂದಿದ್ದವು ಎಂದು ವೈದ್ಯರು ತಿಳಿಸಿದ್ದಾರೆ. ಮೊಳೆಗಳನ್ನು ಒಟ್ಟು ಮಾಡಿ ತೂಗಿದಾಗ 1 ಕೆಜಿ ತೋರಿಸುತ್ತಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Doctors at the state-run Calcutta Medical College and Hospital here have removed 639 nails, weighing more than one kg, from the stomach of a 48-year-old man suffering from schizophrenia.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ