ಒಡಿಶಾ: ಎನ್ ಕೌಂಟರ್ ದಾಳಿಯಲ್ಲಿ 6 ನಕ್ಸಲರ ಹತ್ಯೆ
ಭುವನೇಶ್ವರ್, ಮೇ 14: ಒಡಿಶಾದ ಎರಡು ಜಿಲ್ಲೆಗಳಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ನಡೆಸಿದ ಎನ್ ಕೌಂಟರ್ ದಾಳಿಯಲ್ಲಿ ಆರು ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ.
ಇಲ್ಲಿನ ಕಂದಮಾಲ್ ಜಿಲ್ಲೆಯಲ್ಲಿ ವಿಶೇಷ ಕಾರ್ಯಾಚರಣಾ ತಂಡ ನಡೆಸಿದ ಎನ್ ಕೌಂಟರ್ ದಾಳಿಯಲ್ಲಿ ನಾಲ್ಕು ನಕ್ಸಲರು ಮೃತರಾಗಿದ್ದಾರೆ. ಬಲಂಗಿರ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಇಬ್ಬರು ನಕ್ಸಲರು ಮೃತರಾಗಿದ್ದಾರೆ.
ಏಪ್ರಿಲ್ 27 ರಂದು ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ದಾಳಿಯಲ್ಲಿ 7 ನಕ್ಸಲರನ್ನು ಹತ್ಯಗೈಯ್ಯಲಾಗಿತ್ತು.

ಏ. 22 ರಂದು ಮಹಾರಾಷ್ಟ್ರದ ಗಡ್ಚಿರೋಲಿ ಎಂಬಲ್ಲಿ ನಡೆದ ಎನ್ ಕೌಂಟರ್ ದಾಳಿಯಲ್ಲಿ 37 ನಕ್ಸಲರು ಬಲಿಯಾಗಿದ್ದರು.











Click it and Unblock the Notifications