ಭಾರತದಲ್ಲಿ ಮೊದಲ ಬಾರಿಗೆ ಒಂದೇ ದಿನ 57 ಸಾವಿರ ಕೊರೊನಾ ಸೋಂಕಿತರು ಪತ್ತೆ
ನವದೆಹಲಿ, ಆಗಸ್ಟ್ 01: ಭಾರತದಲ್ಲಿ ಮತ್ತೆ ಬರೋಬ್ಬರಿ 57,118 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಇದು ಇಲ್ಲಿಯವರೆಗಿನ ಅತಿ ಗರಿಷ್ಠ ಪ್ರಕರಣವಾಗಿದೆ. ಒಟ್ಟು 16,95,988 ಪ್ರಕರಣಗಳಿವೆ. ಒಂದೇ ದಿನ 764 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 36,511 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ.
ಒಟ್ಟುಉ ಕೊರೊನಾ ಸೋಂಕಿತರ ಸಂಖ್ಯೆ 15 ಲಕ್ಷಕ್ಕೆ ಏರಿಕೆಯಾಗಿ ಕೇವಲ ಮೂರೇ ದಿನದಲ್ಲಿ 16 ಲಕ್ಷಕ್ಕೆ ಏರಿಕೆಯಾಗಿದೆ. 10.94 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ.64.52ರಷ್ಟಿದೆ.

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16 ಲಕ್ಷಕ್ಕೆ ಏರಕೆಯಾಗಲು 183 ದಿನ ತೆಗೆದುಕೊಂಡಿದೆ. ಕೇರಳದಲ್ಲಿ ಜನವರಿ 30 ರಂದು ಮೊದಲ ಪ್ರಕರಣ ಪತ್ತೆಯಾಗಿತ್ತು. 110 ದಿನಗಳ ಬಳಿಕ ಭಾರತ ಒಂದು ಲಕ್ಷ ಕೊರೊನಾ ಸೋಂಕಿತ ಪ್ರಕರಣವನ್ನು ಹೊಂದಿತ್ತು.












Click it and Unblock the Notifications