ಗಮನಿಸಿ ಅ.13ರಂದು ದೇಶಾದ್ಯಂತ ಪೆಟ್ರೋಲ್ ಬಂಕ್ ಬಂದ್
ಬೆಂಗಳೂರು, ಅಕ್ಟೋಬರ್ 07 : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 12ರ ಮದ್ಯರಾತ್ರಿಯಿಂದ ಅ.13 (ಶುಕ್ರವಾರ)ರ ಮದ್ಯರಾತ್ರಿ ವರೆಗೆ ದೇಶಾದ್ಯಂತ ಪೆಟ್ರೋಲ್ ಬಂಕ್ ಬಂದ್ ಮಾಡಲು ಬಂಕ್ ಮಾಲೀಕರು ತೀರ್ಮಾನಿಸಿದ್ದಾರೆ.
ದೈನಂದಿನ ಬೆಲೆ ಪರಿಷ್ಕರಣೆ ನಿಯಮ ವಿರೋಧಿಸಿ ಹಾಗೂ ತೈಲೋತ್ಪನ್ನಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಪೆಟ್ರೋಲ್ ಬಂಕ್ ಮಾಲೀಕರು ಈ ಮುಷ್ಕರ ಕೈಗೊಂಡಿದ್ದಾರೆ.
ಭಾರತದಾದ್ಯಂತ ಸುಮಾರು 54 ಸಾವಿರ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಪದಾಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

"ಯುನೈಟೆಡ್ ಪೆಟ್ರೋಲಿಯಂ ಫ್ರಂಟ್ ನೊಂದಿಗೆ ಶನಿವಾರ ನಡೆದ ಮೊದಲ ಜಂಟಿ ಸಭೆಯಲ್ಲಿ, ಅಕ್ಟೋಬರ್ 13ರಂದು ಸಂಪೂರ್ಣ ಬಂದ್ ಕರೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಮಹಾರಾಷ್ಟ್ರ ಪೆಟ್ರೋಲ್ ಡೀಲರ್ಸ್ ಸಂಘದ ಅಧ್ಯಕ್ಷ ಉದಯ್ ಲೋಧ್ ಹೇಳಿದ್ದಾರೆ..
ತೈಲ ಬೆಲೆ ನಿತ್ಯ ಪರಿಷ್ಕರಿಸುವುದರಿಂದ ಡೀಲರ್ ಗಳಿಗೆ ಮತ್ತು ಗ್ರಾಹಕರಿಗೆ ಇಬ್ಬರಿಗೂ ನಷ್ಟವಾಗುತ್ತಿದೆ. ತೈಲ ಬೆಲೆ ನಿತ್ಯ ಪರಿಷ್ಕರಣೆಯ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಯುನೈಟೆಡ್ ಪೆಟ್ರೋಲಿಯಂ ಫ್ರಂಟ್ ಆಗ್ರಹಿಸಿದೆ.












Click it and Unblock the Notifications