ಭಾರತದಲ್ಲಿ ಒಂದೇ ದಿನ ಅರ್ಧ ಲಕ್ಷ ಕೊರೊನಾ ಸೋಂಕಿತರು ಪತ್ತೆ
ನವದೆಹಲಿ, ಜುಲೈ 30: ಭಾರತದಲ್ಲಿ ಒಂದೇ ದಿನ ಅರ್ಧ ಲಕ್ಷ ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಭಾರತದಲ್ಲಿ ಮತ್ತೆ 52,123 ಮಂದಿ ಕೊರೊನಾ ಸೋಂಕಿತರು ದೃಢಪಟ್ಟಿದ್ದಾರೆ.
ಒಟ್ಟು 15,83,792 ಕೊರೊನಾ ಸೋಂಕಿತರಿದ್ದಾರೆ, 24 ಗಂಟೆಯಲ್ಲಿ 775 ಮಂದಿ ಮೃತಪಟ್ಟಿದ್ದಾರೆ, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 34,968ಕ್ಕೆ ಏರಿಕೆಯಾಗಿದೆ. 5,28,242 ಅಕ್ರಿಯ ಪ್ರಕರಣಗಳಿವೆ. 10,20,582 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಜು.23ರಂದು 50,904 ಕೇಸ್ ಹಾಗೂ 11790 ಸಾವು ದಾಖಲಾಗಿತ್ತು ಈವರೆಗಿನ ಗರಿಷ್ಠ ಎನಿಸಿಕೊಂಡಿತ್ತು. ಆ ಬಳಿಕ ದೈನಂದಿನ ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗಿತ್ತಾದರೂ ಮಂಗಳವಾರ ಮತ್ತೊಮ್ಮೆ 50 ಸಾವಿರ ಗಡಿ ದಾಟಿತ್ತು.
ಭಾರತದಲ್ಲಿ ಹೊಸದಾಗಿ 49,931 ಕೊರೊನಾ ಸೋಂಕಿತರು ಪತ್ತೆ
ಮೃತರ ಸಂಖ್ಯೆ ಇದೇ ರೀತಿ ಮುಂದುವರೆದರೆ ಭಾರತವು ಇಟಲಿ (35,129)ಯನ್ನು ಹಿಂದಿಕ್ಕಿ 5 ಸ್ಥಾನಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ.
ಈ ನಡುವೆ ದೇಶದಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 10 ಲಕ್ಷ ಗಡಿದಾಟಿದ್ದು, ಗುಣಮುಖರಾದವರ ಒಟ್ಟು ಸಂಖ್ಯೆ 10,20,582ಕ್ಕೆ ಏರಿಕೆಯಾಗಿದೆ. ಇನ್ನೂ ದೇಶದಲ್ಲಿ 5,28,242 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ.
ಅಮೆರಿಕ (1.49ಲಕ್ಷ) ಪ್ರಥಮ ಸ್ಥಾನದಲ್ಲಿದ್ದರೆ, ಬ್ರೆಜಿಲ್ (88 ಸಾವಿರ) 2ನೇ ಸ್ಥಾನದಲ್ಲಿದೆ. ಬ್ರಿಟನ್ (45 ಸಾವಿರ), ಮೂರನೇ ಸ್ಥಾನ ಹಾಗೂ ಮೆಕ್ಸಿಕೋ (44 ಸಾವಿರ) 5ನೇ ಸ್ಥಾನದಲ್ಲಿದೆ.












Click it and Unblock the Notifications