ಭಾರತದಲ್ಲಿ ಹೊಸದಾಗಿ 49,931 ಕೊರೊನಾ ಸೋಂಕಿತರು ಪತ್ತೆ
ನವದೆಹಲಿ, ಜುಲೈ 27: ಭಾರತದಲ್ಲಿ ಹೊಸದಾಗಿ 49,931 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. 24 ಗಂಟೆಗಳಲ್ಲಿ 708 ಮಂದಿ ಸಾವನ್ನಪ್ಪಿದ್ದಾರೆ.
ಒಟ್ಟು 14,35,453 ಕೊರೊನಾ ಸೋಂಕಿತ ಪ್ರಕರಣಗಳಿವೆ. 4,85,114 ಸಕ್ರಿಯ ಪ್ರಕರಣಗಳಿವೆ. 9,17,568 ಮಂದಿ ಗುಣಮುಖರಾಗಿದ್ದಾರೆ. 32,771 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜುಲೈ 26ರವರೆಗೆ 1,68,06,803 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಭಾನುವಾರ ಒಂದೇ ದಿನ 5,15,472 ಮಂದಿಯ ಪರೀಕ್ಷೆ ನಡೆಸಲಾಗಿತ್ತು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ತಿಳಿಸಿದೆ.

ಮಹಾರಾಷ್ಟ್ರದಲ್ಲಿ 3,75,799 ಪ್ರಕರಣಗಳಿವೆ. 9,431 ಹೊಸ ಪ್ರಕರಣಗಳು ಪತ್ತೆಯಾಗಿವೆ. 2,13,238 ಮಂದಿ ಗುಣಮುಖರಾಗಿದ್ದಾರೆ ಇಂದು 6,044 ಮಂದಿ ಗುಣಮುಖರಾಗಿದ್ದಾರೆ.
ತಮಿಳುನಾಡಿನಲ್ಲಿ ಒಟ್ಟು 2,13,723 ಕೊರೊನಾ ಸೋಂಕಿತ ಪ್ರಕರಣಗಳಿವೆ. 6986 ಹೊಸ ಪ್ರಕರಣಗಳು ಪತ್ತೆಯಾಗಿವೆ. 5471 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.












Click it and Unblock the Notifications