Breaking: ಬಿಹಾರದಲ್ಲಿ ಗುಂಡಿನ ದಾಳಿ, 5 ಮಹಿಳೆಯರಿಗೆ ಗಾಯ
ಪಾಟ್ನಾ, ಡಿಸೆಂಬರ್ 24: ಬಿಹಾರದ ಬೆಟ್ಟಿಯಾದಲ್ಲಿ ನಡೆದ ಗುಂಡಿನ ದಾಳೆ ನಡೆಸಲಾಗಿದೆ. ಈ ಗುಂಡಿನ ದಾಳಿಯಲ್ಲಿ ಹಲವು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಶನಿವಾರ ಮಧ್ಯಾಹ್ನದ ವೇಳೆಗೆ 5 ಸುತ್ತು ಗುಂಡು ಹಾರಿಸಲಾಗಿದ್ದು, ಐವರು ಮಹಿಳೆಯರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬಿಹಾರದ ಬೆಟ್ಟಿಯಾದಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ 5 ಮಹಿಳೆಯರು ಗಾಯಗೊಂಡಿದ್ದಾರೆ. ಜಮೀನು ವಿವಾದಕ್ಕಾಗಿ ಈ ಗುಂಡಿನ ದಾಳಿ ನಡೆಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಜಮೀನು ವಿವಾದದಿಂದಾಗಿ ಈ ಗುಂಡಿನ ದಾಳಿಯನ್ನು ನಡೆಸಲಾಗಿದೆ ಎಂದು ಗಾಯಗೊಂಡವರ ಸಂಬಂಧಿ ಹೃದಯಾ ಮಹತೋ ಹೇಳುತ್ತಾರೆ.

ಇತ್ತೀಚಿಗೆ ಇಟ್ಟಿಗೆ ಗೂಡಿನ ಚಿಮಣಿ ಸ್ಫೋಟ:
ಬಿಹಾರದಲ್ಲಿ ಇಟ್ಟಿಗೆ ಗೂಡಿನ ಚಿಮಣಿ ಸ್ಫೋಟಗೊಂಡ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು. ಈ ಕುರಿತು ಹೇಳಿಕೆ ನೀಡಿರುವ ಮೋತಿಹಾರಿ ಪೊಲೀಸರು, 'ರಾಮಘರ್ವಾ ಪಿಎಸ್‌ನ ನಾರೀಗಿರ್‌ನಲ್ಲಿ ಇಟ್ಟಿಗೆ ಗೂಡಿನ ಚಿಮಣಿ ಸ್ಫೋಟದಿಂದ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications