ಬ್ಯಾಂಕುಗಳಿಗೆ ವಾರದಲ್ಲಿ ಎರಡು ದಿನ ರಜೆ- ಸಮಯದಲ್ಲಿ ಬದಲಾವಣೆ!

ನೌಕರರ ಯೋಗಕ್ಷೇಮದ ದೃಷ್ಟಿಯಿಂದ ಬಹುತೇಕ ಖಾಸಗಿ ಕಂಪನಿಗಳು ವಾರದಲ್ಲಿ ಎರಡು ದಿನ ರಜೆಯನ್ನು ನೀಡುತ್ತವೆ. ಇದೇ ನಿಯಮವನ್ನು ಬ್ಯಾಂಕುಗಳ ನೌಕಕರಿಗೂ ಅನ್ವಯಿಸಬೇಕು ಎಂದು ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್ ​​ಮತ್ತು ನೌಕರರ ಒಕ್ಕೂಟಗಳು ಸರ್ಕಾರಕ್ಕೆ ಬೇಡಿಕೆಯನ್ನಿಟ್ಟಿವೆ. ಈ ಬೇಡಿಕೆಯನ್ನು ಸದ್ಯದರಲ್ಲೇ ಸರ್ಕಾರ ಈಡೇರಿಸುವ ಸಾಧ್ಯತೆ ಇದೆ.

ಹೌದು.. ಡಿಸೆಂಬರ್‌ನಿಂದ ಬ್ಯಾಂಕ್‌ನ ಕಾರ್ಯಯೋಜನೆಯು ಬದಲಾಗುವ ಸಾಧ್ಯತೆ ಇದೆ. ವಾರದಲ್ಲಿ ಐದು ದಿನ ಮಾತ್ರ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಲಿವೆ ಎನ್ನಲಾಗುತ್ತಿದೆ. ಬ್ಯಾಂಕ್ ನೌಕರರು ವಾರದಲ್ಲಿ 5 ದಿನಗಳ ಕಾಲ ಮಾತ್ರ ಕೆಲಸ ಮಾಡಲು ಅನುಮತಿಸಲು ಬೇಡಿಕೆಯನ್ನಿಟ್ಟಿದ್ದರು. ಇದುವರೆಗೆ ನೌಕರರ ಈ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿರಲಿಲ್ಲ. ಆದರೆ ಈ ವರ್ಷಾಂತ್ಯದೊಳಗೆ ಸರ್ಕಾರ ಈ ಬೇಡಿಕೆಯನ್ನು ಈಡೇರಿಸುವ ನಿರೀಕ್ಷೆಯಿದೆ.

5 Days work in bank Banks have two days off in a week- time change

ಇತ್ತೀಚೆಗೆ ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್ ​​ಮತ್ತು ನೌಕರರ ಒಕ್ಕೂಟಗಳು ಸರ್ಕಾರಕ್ಕೆ ಈ ಬೇಡಿಕೆಯನ್ನುಟ್ಟಿದ್ದವು. ಈಗ ಸರ್ಕಾರದಿಂದ ಅನುಮೋದನೆಗೆ ಕಾಯಲಾಗುತ್ತಿದೆ. ಸರ್ಕಾರದಿಂದ ಅನುಮತಿ ದೊರೆತರೆ ವಾರದಲ್ಲಿ ಐದು ದಿನ ಮಾತ್ರ ಬ್ಯಾಂಕ್‌ಗಳು ತೆರೆಯಲಿವೆ. ಅಂದರೆ ಶನಿವಾರ ಮತ್ತು ಭಾನುವಾರ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಪ್ರಸ್ತುತ ಬ್ಯಾಂಕ್‌ಗಳು ಪ್ರತಿ ತಿಂಗಳ ಎರಡನೇ-ನಾಲ್ಕನೇ ಶನಿವಾರ ಮತ್ತು ಪ್ರತಿ ಭಾನುವಾರದಂದು ಮುಚ್ಚಿರುತ್ತವೆ. ಇದಲ್ಲದೇ ಹಬ್ಬದ ನಿಮಿತ್ತ ಹಲವು ನಗರಗಳ ಬ್ಯಾಂಕ್ ಗಳಲ್ಲಿ ರಜೆ ಇದೆ.

ಸರ್ಕಾರದೊಂದಿಗೆ RBI ನ ಪ್ರಮುಖ ಪಾತ್ರ

ಬ್ಯಾಂಕ್‌ಗಳು ನೌಕರರಿಗೆ ಕೆಲಸದ ದಿನಗಳನ್ನು ಐದಕ್ಕೆ ಅನುಮೋದಿಸುವಲ್ಲಿ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಮುಖ ಪಾತ್ರವನ್ನು ಹೊಂದಿದೆ. ವಾಸ್ತವವಾಗಿ ಬ್ಯಾಂಕಿನ ಈ ಪ್ರಸ್ತಾವನೆಯು ಆರ್‌ಬಿಐಗೆ ಹೋಗುತ್ತದೆ. ಏಕೆಂದರೆ ಬ್ಯಾಂಕ್‌ಗೆ ಸಂಬಂಧಿಸಿದ ಎಲ್ಲಾ ಕೆಲಸಗಳು ಆರ್‌ಬಿಐನಿಂದ ನಿಯಂತ್ರಿಸಲ್ಪಡುತ್ತವೆ. ಪ್ರಸ್ತಾವನೆಯು ಆರ್‌ಬಿಐನಿಂದ ಅನುಮೋದನೆ ಪಡೆದ ನಂತರವೇ ಸರ್ಕಾರದಿಂದ ಅನುಮೋದನೆ ನೀಡಲಾಗುತ್ತದೆ.

ಬ್ಯಾಂಕಿನ ಕೆಲಸದ ಸಮಯದಲ್ಲೂ ಬದಲಾವಣೆ

ಮಾಧ್ಯಮ ವರದಿಗಳ ಪ್ರಕಾರ, 5 ದಿನ ಮಾತ್ರ ಬ್ಯಾಂಕ್ ಕೆಲಸಕ್ಕೆ ಅನುಮೋದನೆಯನ್ನು ಪಡೆದರೆ, ಬ್ಯಾಂಕಿನ ಕೆಲಸದ ಸಮಯದಲ್ಲೂ ಬದಲಾವಣೆ ಆಗಲಿದೆ. ದೈನಂದಿನ ಕೆಲಸದ ಸಮಯವನ್ನು 40 ನಿಮಿಷಗಳವರೆಗೆ ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಅಂದರೆ ಬೆಳಗ್ಗೆ 9.45ರಿಂದ ಸಂಜೆ 5.30ರವರೆಗೆ ಬ್ಯಾಂಕ್ ತೆರೆದಿರುತ್ತದೆ.

ಅಧಿಸೂಚನೆ ಯಾವಾಗ ಬರುತ್ತದೆ?

ವರ್ಷಾಂತ್ಯ ಅಥವಾ 2025ರ ಆರಂಭದ ವೇಳೆಗೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಬಹುದು ಎಂದು ನಿರೀಕ್ಷಿಸಲಾಗಿದೆ. ಸರ್ಕಾರದಿಂದ ಅನುಮೋದನೆ ದೊರೆತರೆ, ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ ಆಕ್ಟ್ ಅಡಿಯಲ್ಲಿ ಬ್ಯಾಂಕುಗಳಿಗೆ ಶನಿವಾರ ರಜೆ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+