India Corona Report: ಒಂದೇ ದಿನ 5,676 ಪಾಸಿಟಿವ್ ಕೇಸ್ ಪತ್ತೆ, ಸಾವಿನ ಸಂಖ್ಯೆ ತುಸು ಏರಿಕೆ

ಬೆಂಗಳೂರು, ಏಪ್ರಿಲ್ 11: ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣಗಳ ದಾಖಲಾಯಲ್ಲಿ ಏರುಗತಿ ಮುಂದುವರಿದೆ. ಕಳೆದ ಒಂದೇ ದಿನದಲ್ಲಿ ಮತ್ತೆ ಅತ್ಯಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ ಮಂಗಳವಾರ ಬೆಳಗ್ಗೆಗೆ ಹೋಲಿಕೆ ಮಾಡಿದರೆ ಅದರ ಹಿಂದಿನ 24 ಗಂಟೆ ಅವಧಿಯಲ್ಲಿ ಕೊರೊನಾ ಸೋಂಕಿನ ಹೊಸ 5,676 ಪಾಸಿಟಿವ್ ಪ್ರಕರಣಗಳೂ ದಾಖಲಾಗಿವೆ. ಈ ನೂತನ ಪಾಸಿಟಿವ್ ಪ್ರಕರಣಗಳಿಂದಾಗಿ ದೇಶದಲ್ಲಿನ ಸಕ್ರಿಯ ಕೋವಿಡ್ 19 ಪ್ರಕರಣಗಳ ಸಂಖ್ಯೆ 37,093 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಮಾಹಿತಿ ನೀಡಿದೆ.

5,676 new cases of Covid-19 recorded in India in the last 24 hours; Active caseload rises to 37,093

ಹೊಸದಾಗಿ ದಾಖಲಾದ ಪ್ರಕರಣಗಳ ಜೊತೆಗೆ ದೇಶದಲ್ಲಿ ಒಟ್ಟು 21 ರೋಗಿಗಳು ಕೊರೊನಾದಿಂದಾಗಿ ಮೃಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವಿಗೀಡಾಗಿದ್ದಾರೆ. ಹೀಗಾಗಿ ದೇಶದ ಸಾವಿನ ಒಟ್ಟು ಸಂಖ್ಯೆ ಪ್ರಮಾಣ 5,31,000 ಕ್ಕೆ ಜಿಗಿದೆ ಎಂದು ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.

ಭಾರತದ ಕೇರಳ ಮುಂಬೈ ನಲ್ಲೂ ಕೊರೊನಾ ಸೋಂಕಿನ ಪ್ರಮಾಣ ಏರಿಕೆ ಆಗುತ್ತಿದೆ. ಒಟ್ಟು ಸಾವು ಎಲ್ಲೆಲ್ಲಿ ಎಂದು ನೋಡುವುದಾದರೆ ದೆಹಲಿ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ತಲಾ ಮೂರು ಸಾವುಗಳು ವರದಿ ಆಗಿದೆ. ಕರ್ನಾಟಕದಲ್ಲಿ ಎರಡು ಹಾಗೂ ಗುಜರಾತ್, ಹರಿಯಾಣ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ತಲಾ ಒಬ್ಬರ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಚೇತರಿಕೆ ದರ 98.73 ಪ್ರತಿಶತ

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಒಟ್ಟು ಸರಾಸರಿ 4.47 ಕೋಟಿ (4,47,68,172) ವರದಿಯಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಸಕ್ರಿಯ ಪ್ರಕರಣಗಳ ಪಾಸಿಟಿವಿಟಿ ದರ ಶೇಕಡಾ 0.08 ಪ್ರತಿಶತ ಇದ್ದರೆ, ರಾಷ್ಟ್ರೀಯ ಕೋವಿಡ್ -19 ಚೇತರಿಕೆ ದರವು 98.73 ಪ್ರತಿಶತದಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್‌ನಿಂದ ದೇಶದಲ್ಲಿ ಇದುವರೆಗೆ ಗುಣಮುಖರಾದವರ ಸಂಖ್ಯೆ ನೋಡುವುದಾದರೆ ಚೇತರಿಕೆ ಒಟ್ಟು ಸಂಖ್ಯೆ 4,42,00,079 ಕ್ಕೆ ಏರಿಕೆ ಆಗಿದೆ. ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ಕೇಂದ್ರ ಆರೋಗ್ಯ ಸಚಿವಲಾಯವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿರುವ ಪ್ರಕಾರ, ರಾಷ್ಟ್ರವ್ಯಾಪಿ ಕೋವಿಡ್ ಲಸಿಕಾಕರಣ ಅಭಿಯಾನದ ಅಡಿಯಲ್ಲಿ ಈವರೆಗೆ ಭಾರತದಲ್ಲಿ 220.66 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದಗೆ ಎಂದು ಹೇಳಿದೆ.

5,676 new cases of Covid-19 recorded in India in the last 24 hours; Active caseload rises to 37,093

ಕರ್ನಾಟಕದ ಪಾಸಿಟಿವ್ ಕೇಸ್ ವಿವರ

ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 191 ಹೊಸ ಕೋವಿಡ್ ಪ್ರಕರಣಗಳೂ ಪತ್ತೆಯಾಗಿವೆ. ಅದರಿಂದಾಗಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1673ಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ ಕೋವಿಡ್ ನಿಂದಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಪಾಸಿಟಿವ್ ಪ್ರಕರಣಗಳ ದಾಖಲಾತಿಗೆ ವಿರುದ್ಧವಾಗಿ ಒಟ್ಟು 346 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಒಟ್ಟು ಚೇತರಿಕೆ ಸಂಖ್ಯೆ 40,37,962ಕ್ಕೆ ಹೆಚ್ಚಾಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 40,290ಗೆ ತಲುಪಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ತಿಳಿಸಿದೆ.

ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಬೆಂಗಳೂರು ಸೇರಿದಂತೆ ಕರ್ನಾಟಕ ಹಾಗೂ ಇನ್ನಿತರ ರಾಜ್ಯಗಳಲ್ಲಿ ಕೋವಿಡ್ ಸನ್ನದ್ಧತೆಯ ಪೂರ್ವ ತಯಾರಿ ಎಂಬಂತೆ ಮಾಕ್‌ ಡ್ರಿಲ್ ಆಯೋಜನೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+