ಮಿಜೋರಾಂನಲ್ಲಿ ಪ್ರಬಲ ಭೂಕಂಪ: 5.5 ತೀವ್ರತೆ ದಾಖಲು

ಛಾಂಪಾಯ್, ಜೂನ್ 22: ಮಿಜೋರಾಂನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿದೆ.

5.5 Magnitude Earthquake Strikes Mizoram

ಭೂಕಂಪ, 20 ಕಿ.ಮೀ ಆಳದಲ್ಲಿ ಸಂಭವಿಸಿದೆ. ಛಾಂಪಾಯ್‌ನಿಂದ 27 ಕಿ.ಮೀ ದೂರದಲ್ಲಿ ಸಂಭವಿಸಿದೆ. ಮಿಜೋರಾಂನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಸರ್ಕಾರದಿಂದ ಯಾವುದೇ ನೆರವು ನೀಡಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಸಿಎಂಗೆ ಭರವಸೆ ನೀಡಿದ್ದಾರೆ.

ಇಷ್ಟು ದಿನ ದೆಹಲಿ, ಹರ್ಯಾಣ ಸುತ್ತ ಸುತ್ತಮುತ್ತಲ ಭಾಗದಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿತ್ತು. ಇದೀಗ ಈ ಭೂಕಂಪ ಸರಣಿ ಈಶಾನ್ಯ ರಾಜ್ಯಗಳಿಗೂ ವ್ಯಾಪಿಸಿದೆ. ಮಿಜೋರಾಂನಲ್ಲೂ ಇದೀಗ ಪದೇ ಪದೇ ಭೂಮಿ ಕಂಪಿಸುತ್ತಿದೆ.

ರಿಕ್ಟರ್ ಮಾಪಕದಲ್ಲಿ 5.1ರಷ್ಟು ತೀವ್ರತೆಯ ಮಧ್ಯಮ ತೀವ್ರತೆಯ ಭೂಕಂಪದ ಅನುಭವ ಮಿಜೋರಾಂನಲ್ಲಿ ಆಗಿದೆ. ಕಳೆದ ಜೂನ್ 18ರಂದು ಕೂಡಾ ಮಿಜೋರಾಂನಲ್ಲಿ 5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು.

ಎರಡೂ ಬಾರಿ ಮಧ್ಯಮ ತೀವ್ರತೆಯ ಭೂಕಂಪಗಳೇ ಮಿಜೋರಾಂನಲ್ಲಿ ಸಂಭವಿಸಿದೆ. 2ನೇ ಬಾರಿ ಭಾನುವಾರ ಸಂಭವಿಸಿದ ಭೂಕಂಪ ಸಂಜೆ 4.16ರ ಸಮಯದಲ್ಲಿ ಆಗಿದೆ. ಭೂಕಂಪದ ಕೇಂದ್ರ ಮಿಜೋರಾಂನ ಕೇಂದ್ರ ಭಾಗದಿಂದ 25 ಕಿ.ಮೀ ದೂರದಲ್ಲಿ ಕಂಡು ಬಂದಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+