ಭಾರತದಲ್ಲಿ 47,638 ಹೊಸ ಕೋವಿಡ್ ಪ್ರಕರಣಗಳು ದಾಖಲು
ನವದೆಹಲಿ, ನವೆಂಬರ್ 06: ಭಾರತದಲ್ಲಿ 24 ಗಂಟೆಯಲ್ಲಿ 47,638 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 84,11,724ಕ್ಕೆ ಏರಿಕೆಯಾಗಿದೆ.
ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ 670 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಇದುವರೆಗೂ ಮೃತಪಟ್ಟವರ ಒಟ್ಟು ಸಂಖ್ಯೆ 1,24,985.
ಭಾರತದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,20,773. ಕಳೆದ 24 ಗಂಟೆಯಲ್ಲಿ 7,189 ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

24 ಗಂಟೆಯಲ್ಲಿ ದೇಶದಲ್ಲಿ 54,157 ಜನರು ಕೋವಿಡ್ ಸೋಂಕಿನಿಂದ ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಗುಣಮುಖರಾದವರವ ಸಂಖ್ಯೆ 77,65,966.
ನವೆಂಬರ್ 5ರ ತನಕ ದೇಶದಲ್ಲಿ 11,54,29,095 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ. ಗುರುವಾರ 12,20,711 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.
ಭಾರತದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ಗುರುವಾರ ರಾಜ್ಯದಲ್ಲಿ 5,246 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 17,03,444 ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 1,06,519.
ಕರ್ನಾಟಕ ರಾಜ್ಯ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಗುರುವಾರ ರಾಜ್ಯದಲ್ಲಿ 3156 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 8,38,929ಕ್ಕೆ ಏರಿಕೆಯಾಗಿದೆ.
ಆಂಧ್ರ ಪ್ರದೇಶ 8,35,953. ತಮಿಳುನಾಡಿನಲ್ಲಿ 7,36,777 ಮತ್ತು ಉತ್ತರ ಪ್ರದೇಶದಲ್ಲಿ 4,91,354 ಕೋವಿಡ್ ಪ್ರಕರಣಗಳಿವೆ. ಕೇರಳದಲ್ಲಿ 4,66,467 ಮತ್ತು ದೆಹಲಿಯಲ್ಲಿ 4,16,653 ಪ್ರಕರಣಗಳಿವೆ.












Click it and Unblock the Notifications