ಭಾರತದಲ್ಲಿ ಮತ್ತೆ 47,905 ಮಂದಿಗೆ ಕೊರೊನಾ ಸೋಂಕು
ನವದೆಹಲಿ, ನವೆಂಬರ್ 12: ಭಾರತದಲ್ಲಿ 47,905 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಲ್ಲಿಯವರೆಗೆ ದೇಶದಲ್ಲಿ 86,83,917 ಕೊರೊನಾ ಸೋಂಕಿತರಿದ್ದಾರೆ.
24 ಗಂಟೆಯಲ್ಲಿ 550 ಮಂದಿ ಮೃತಪಟ್ಟಿದ್ದಾರೆ, ಒಟ್ಟು 1,28,121 ಮಂದಿ ಸಾವನ್ನಪ್ಪಿದ್ದಾರೆ. 4,89,294 ಸಕ್ರಿಯ ಪ್ರಕರಣಗಳಿವೆ, 24 ಗಂಟೆಗಳಲ್ಲಿ 52,718 ಮಂದಿ ಒಟ್ಟು 80,66,502 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಭಾರತದಲ್ಲಿ ಬುಧವಾರ 44,281 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 86,36,012 ಕೊರೊನಾ ಪ್ರಕರಣಗಳಿತ್ತು. ಇಲ್ಲಿಯವರೆಗೆ 12,19,62,509 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಬುಧವಾರ 11,93,358 ಮಾದರಿಗಳನ್ನು ಪರೀಕ್ಷಿಸಲಾಗಿದೆ.
Recommended Video
ಅಬ್ಬಾ ಇನ್ನೂ ಕೆಲವೇ ದಿನ ಭಾರತಕ್ಕೆ ಕೊರೋನ ಲಸಿಕೆ ! | Sputnik v Covid-19 Vaccine | Oneindia Kannada











Click it and Unblock the Notifications