24 ಗಂಟೆಗಳಲ್ಲಿ 48,493 ಮಂದಿ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ

ನವದೆಹಲಿ, ನವೆಂಬರ್ 19: ದೇಶದಲ್ಲಿ ಗುರುವಾರ ಬೆಳಗಿನವರೆಗೆ ಕಳೆದ 24 ಗಂಟೆಗಳಲ್ಲಿ 45,576 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಒಟ್ಟು ಕೊರೊನಾ ಸೋಂಕಿನ ಪ್ರಕರಣಗಳು 89,58,484ಕ್ಕೆ ಏರಿದ್ದು, 90 ಲಕ್ಷದ ಗಡಿ ಸಮೀಪಿಸಿದೆ.

ಕಳೆದ 24 ಗಂಟೆಗಳಲ್ಲಿ 585 ಮಂದಿ ಮೃತಪಟ್ಟಿದ್ದು, ಇದುವರೆಗೂ 1,31,578 ಮಂದಿ ಬಲಿಯಾಗಿದ್ದಾರೆ. ಹಾಗೆಯೇ ಸಕ್ರಿಯ ಪ್ರಕರಣಗಳಲ್ಲಿ 3,502ರಷ್ಟು ಇಳಿಕೆಯಾಗಿದೆ. ಗುರುವಾರ ಬೆಳಗಿನವರೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ 48,493 ಮಂದಿ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ 83,83,603 ಮಂದಿ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ ಪ್ರಸ್ತುತ ಒಟ್ಟು 4,43,303 ಸಕ್ರಿಯ ಪ್ರಕರಣಗಳು ಇವೆ ಎಂದು ವರದಿ ತಿಳಿಸಿದೆ.

ದೇಶದಾದ್ಯಂತ ನವೆಂಬರ್ 18ರವರೆಗೂ 12,85,08,289 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಬುಧವಾರ ಒಂದೇ ದಿನ 10,28,203 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

 45,575 Fresh Coronavirus Cases And 585 Deaths Reported

ರಾಜಧಾನಿ ದೆಹಲಿಯಲ್ಲಿ ಬುಧವಾರ 7,486 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. 131 ಮಂದಿ ಮೃತಪಟ್ಟಿದ್ದಾರೆ. ಇದರಿಂದ ದೆಹಲಿಯ ಕೋವಿಡ್ ಪ್ರಕರಣಗಳ ಸಂಖ್ಯೆ 5,03,084ಕ್ಕೆ ತಲುಪಿದೆ. ಅದರಲ್ಲಿ 42,458 ಸಕ್ರಿಯ ಪ್ರಕರಣಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+