ಭಾರತ; 24 ಗಂಟೆಯಲ್ಲಿ 45,209 ಹೊಸ ಕೋವಿಡ್ ಪ್ರಕರಣ
ನವದೆಹಲಿ, ನವೆಂಬರ್ 22 : ಭಾರತದಲ್ಲಿ 24 ಗಂಟೆಯಲ್ಲಿ 45,209 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 90,95,807ಕ್ಕೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಬುಲೆಟಿನ್ ಪ್ರಕಾರ 24 ಗಂಟೆಯಲ್ಲಿ ದೇಶದಲ್ಲಿ 501 ಜನರು ಮೃತಪಟ್ಟಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 1,33,227.
24 ಗಂಟೆಯಲ್ಲಿ 43,493 ಜನರು ಗುಣಮುಖರಾಗಿದ್ದು, ಇದುವರೆಗೂ 85,21,617 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 4,40,962.

ನವೆಂಬರ್ 21ರ ತನಕ 13,17,33,134 ಮಾದರಿಗಳ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ. ಶನಿವಾರ 10,75,326 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಐಸಿಎಂಆರ್ ಹೇಳಿದೆ.
ಯಾವ ರಾಜ್ಯ ಎಷ್ಟು? : ಭಾರತದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ಶನಿವಾರ ರಾಜ್ಯದಲ್ಲಿ 5760 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 17,74,455ಕ್ಕೆ ಏರಿಕೆಯಾಗಿದೆ.
ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿದೆ. ಶನಿವಾರ 1781 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 8,71,342. ಸಕ್ರಿಯ ಪ್ರಕರಣಗಳು 24,714.
ಆಂಧ್ರ ಪ್ರದೇಶ ರಾಜ್ಯ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8,61,092. ಶನಿವಾರ ರಾಜ್ಯದಲ್ಲಿ 1,160 ಹೊಸ ಪ್ರಕರಣಗಳು ದಾಖಲಾಗಿವೆ.
ಕೇರಳದಲ್ಲಿ 5,57,442, ಉತ್ತರ ಪ್ರದೇಶದಲ್ಲಿ 5,24,223, ದೆಹಲಿಯಲ್ಲಿ 5,23,117, ಪಶ್ಚಿಮ ಬಂಗಾಳದಲ್ಲಿ 4,52,770 ಕೋವಿಡ್ ಪ್ರಕರಣಗಳಿವೆ.












Click it and Unblock the Notifications