ಭಾರತದಲ್ಲಿ 24 ಗಂಟೆಯಲ್ಲಿ 40,425 ಹೊಸ ಕೋವಿಡ್ ಪ್ರಕರಣಗಳು!
ನವದೆಹಲಿ, ಜುಲೈ 20 : ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 40,425 ಹೊಸ ಕೊರೊನ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಒಂದು ದಿನದಲ್ಲಿ ಇಷ್ಟು ಪ್ರಕರಣಗಳು ದಾಖಲಾಗಿದ್ದು ಇದೇ ಮೊದಲು.
ಭಾನುವಾರ ಬೆಳಗ್ಗೆ 8 ರಿಂದ ಸೋಮವಾರ ಬೆಳಗ್ಗೆ 8 ಗಂಟೆಯ ತನಕ 40,425 ಹೊಸ ಪ್ರಕರಣ ದಾಖಲಾಗಿದೆ, 681 ಜನರು ದೇಶದಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 11 ಲಕ್ಷದ ಗಡಿ ದಾಟಿದೆ.
ಭಾರತದಲ್ಲಿ ಪ್ರಸ್ತುತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 11,18,043. ಇವುಗಳಲ್ಲಿ 3,90,459 ಸಕ್ರಿಯ ಪ್ರಕರಣಗಳಾಗಿವೆ. ದೇಶದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 27,497ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಜುಲೈ 19ರಂದು 1,40,47,908 ಮಾದರಿಗಳ ಕೋವಿಡ್ - 19 ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಐಸಿಎಂಆರ್ ಹೇಳಿದೆ. 7,00,087 ಜನರು ಇದುವರೆಗೂ ದೇಶದಲ್ಲಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಮಹಾರಾಷ್ಟ್ರದಲ್ಲಿ 9,518, ತಮಿಳುನಾಡಿನಲ್ಲಿ 4,979, ಕರ್ನಾಟಕದಲ್ಲಿ 4,120, ಆಂಧ್ರ ಪ್ರದೇಶದಲ್ಲಿ 5,041, ಉತ್ತರ ಪ್ರದೇಶದಲ್ಲಿ 2,211, ದೆಹಲಿಯಲ್ಲಿ 1,211 ಹೊಸ ಸೋಂಕಿನ ಪ್ರಕರಣಗಳು ಭಾನುವಾರ ಪತ್ತೆಯಾಗಿವೆ.












Click it and Unblock the Notifications