ಕೊರೊನಾ ಆತಂಕ: ದೇಶದಲ್ಲಿ ಒಂದೇ ದಿನದಲ್ಲಿ 37 ಸಾವು, 896 ಹೊಸ ಪ್ರಕರಣ

ನವದೆಹಲಿ, ಏಪ್ರಿಲ್ 10: ಭಾರತದಲ್ಲಿ ಒಂದೇ ಒಂದು ದಿನದಲ್ಲಿ 37 ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದು, ಜನರಲ್ಲಿ ಆತಂಕ ಇನ್ನಷ್ಟು ಹೆಚ್ಚಿದೆ.

ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದ್ದು, ಇದೇ ಮೊದಲ ಬಾರಿಗೆ ಒಂದೇ ದಿನ ಇಷ್ಟೊಂದು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದೆ. ದೇಶದಲ್ಲಿ ಕೊರೊನಾ ಸೋಂಕಿಗೆ ಒಳಗಾದವರ ಸಂಖ್ಯೆ 6761, 206 ಮಂದಿ ಸಾವನ್ನಪ್ಪಿದ್ದಾರೆ.

ಒಡಿಶಾ ಹಾಗೂ ಪಂಜಾಬ್ ಲಾಕ್‌ಡೌನ್ ಮುಂದುವರೆಸಲು ನಿರ್ಧರಿಸಿದ್ದು, ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.ಪ್ರಧಾನಿ ಮೋದಿ ಹೇಳಿದಂತೆ ಏಪ್ರಿಲ್ 14ಕ್ಕೆ ಲಾಕ್‌ಡೌನ್ ಅಂತ್ಯವಾಗಬೇಕಿತ್ತು.

37 Deaths 896 New Coronavirus Cases In One Day In India

ಆದರೆ ದಿನದಿಂದ ದಿನಕ್ಕೆ ಕೊರೊನಾ ಹಾವಳಿ ಹೆಚ್ಚಾಗುತ್ತಿರುವುದರಿಂದ ಲಾಕ್‌ಡೌನ್ ಮುಂದುವರೆಸುವುದು ಅನಿವಾರ್ಯವಾಗಲಿದೆ.

ಏಪ್ರಿಲ್ ಅಂತ್ಯದವರೆಗಾದರೂ ಲಾಕ್‌ಡೌನ್ ಮುಂದುವರೆಸಲು ಅನುಮತಿ ನೀಡಿ ಎಂದು ಪಂಜಾಬ್ ಹಾಗೂ ಒಡಿಶಾ ಸರ್ಕಾರ ಮೋದಿಯವರ ಬಳಿ ಕೇಳಿದೆ. ಭಾರತದಲ್ಲಿ ಕೊರೊನಾ ಇನ್ನೂ ಸಮುದಾಯಗಳಿಗೆ ಹರಡಲು ಆರಂಭವಾಗಿಲ್ಲ, 3ನೇ ಹಂತವನ್ನು ತಲುಪಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+