Vande Bharat Train; ಬಜೆಟ್‌ನಲ್ಲಿ 300 ವಂದೇ ಭಾರತ್ ರೈಲು ಘೋಷಣೆ?

ನವದೆಹಲಿ, ಜನವರಿ 15: ಭಾರತೀಯ ರೈಲ್ವೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಭಾರೀ ಬೇಡಿಕೆ ಇದೆ. ಈ ರೈಲುಗ ದರಗಳು ಹೆಚ್ಚು ಎಂಬ ಆರೋಪಗಳ ನಡುವೆಯೇ ಉಭಯ ನಗರಗಳ ನಡುವೆ ಅತ್ಯಂತ ವೇಗವಾಗಿ ಸಂಚಾರ ನಡೆಸುವ ರೈಲುಗಳು ಪ್ರಯಾಣಿಕರ ಸಮಯವನ್ನು ಉಳಿಸುತ್ತಿವೆ.

ಸದ್ಯ ದೇಶದಲ್ಲಿ 16 ಮತ್ತು 8 ಬೋಗಿಯ ಬಿಳಿ ಮತ್ತು ಕೇಸರಿ ಬಣ್ಣದ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಒಟ್ಟು 41 ಮಾರ್ಗದಲ್ಲಿ ರೈಲುಗಳು ಓಡುತ್ತಿದ್ದು, ಈ ಬಾರಿಯ ಬಜೆಟ್‌ನಲ್ಲಿ ಹೊಸ ರೈಲುಗಳು ಸಹ ಘೋಷಣೆಯಾಗಲಿವೆ.

300 To 4000 New Vande Bharat Train May Announce In Budget 2024

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2024-25ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡನೆ ಮಾಡಲಿದ್ದಾರೆ. ಲೋಕಸಭೆ ಚುನಾವಣೆ ಎದುರಾಗುತ್ತಿರುವುದರಿಂದ ಈ ಬಾರಿಯ ಬಜೆಟ್‌ನಲ್ಲಿ ಹಲವು ಜನಪ್ರಿಯ ಘೋಷಣೆಗಳನ್ನು ನಿರೀಕ್ಷೆ ಮಾಡಲಾಗಿದೆ.

ವಂದೇ ಭಾರತ್ ರೈಲುಗಳು; ಕೇಂದ್ರ ಬಜೆಟ್‌ ಜೊತೆಗೆ ರೈಲ್ವೆ ಬಜೆಟ್ ಮಂಡನೆ ಮಾಡಲಾಗುತ್ತದೆ. ಆದ್ದರಿಂದ ಈ ಬಾರಿಯ ಬಜೆಟ್‌ನಲ್ಲಿ ಎಷ್ಟು ವಂದೇ ಭಾರತ್ ರೈಲುಗಳು ಘೋಷಣೆಯಾಗಲಿವೆ? ಎಂಬುದು ಸದ್ಯದ ಲೆಕ್ಕಾಚಾರವಾಗಿದೆ. 2023ರಲ್ಲಿ 75 ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸುತ್ತೇವೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಅದು ಸಾಧ್ಯವಾಗಿಲ್ಲ.

ಬಜೆಟ್‌ನಲ್ಲಿ 300 ರಿಂದ 400 ವಂದೇ ಭಾರತ್ ರೈಲುಗಳು ಘೋಷಣೆಯಾಗುವ ನಿರೀಕ್ಷೆ ಇದೆ. ವಿವಿಧ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಬೇಕು ಎಂದು ಈಗಾಗಲೇ ರಾಜ್ಯಗಳು ಬೇಡಿಕೆ ಸಲ್ಲಿಸುತ್ತಿವೆ. ಅಲ್ಲದೇ ವಂದೇ ಭಾರತ್ ಮತ್ತು ಅಮೃತ್ ಸ್ಟೇಷನ್ ಯೋಜನೆಯ ಕಾರಣ ರೈಲ್ವೆ ಬಜೆಟ್‌ನ ಗ್ರಾತ್ರದಲ್ಲಿ ಶೇ 25ರಷ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.

ಹೊಸ ವಂದೇ ಭಾರತ್ ರೈಲುಗಳು ದೇಶದಾದ್ಯಂತ ಸಂಪರ್ಕವನ್ನು ಸುಧಾರಿಸುವ ಮತ್ತು ರೈಲು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಈ ರೈಲುಗಳು ಒಂದು ಪ್ರಮುಖ ಹೆಜ್ಜೆಯಾಗಿದೆ.

ವಂದೇ ಭಾರತ್ ರೈಲುಗಳನ್ನು ಚೆನ್ನೈನ ಪೆರಂಬೂರ್‌ನ ಸಮಗ್ರ ಕೋಚ್ ಫ್ಯಾಕ್ಟರಿಯಲ್ಲಿ ದೇಶೀಯವಾಗಿ ಉತ್ಪಾದಿಸಲಾಗುತ್ತಿದೆ. ಹೊಸ ಮಾದರಿ ರೈಲುಗಳು ಭಾರತೀಯ ಇಂಜಿನಿಯರ್‌ಗಳ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ. ಸದ್ಯ ಬಿಳಿ ಮತ್ತು ಕೇಸರಿ ಬಣ್ಣದ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ.

ದೇಶದಲ್ಲಿ ಶತಾಬ್ದಿ ರೈಲಿಗೆ ಪರ್ಯಾಯವಾಗಿ ವಂದೇ ಭಾರತ್ ರೈಲುಗಳನ್ನು ಓಡಿಸಲಾಗುತ್ತಿದೆ. ಎರಡು ಪ್ರಮುಖ ನಗರಗಳನ್ನು ವೇಗವಾಗಿ ಸಂಪರ್ಕಿಸುವ ವಂದೇ ಭಾರತ್‌ ರೈಲುಗಳಿಗೆ ಭಾರೀ ಬೇಡಿಕೆ ಇದೆ. ಹಲವು ರಾಜ್ಯಗಳು ಹೊಸ ಹೊಸ ಮಾರ್ಗದ ಪ್ರಸ್ತಾಪವನ್ನು ರೈಲ್ವೆ ಇಲಾಖೆಗೆ ಕಳಿಸುತ್ತಲೇ ಇವೆ.

ಬಜೆಟ್‌ನಲ್ಲಿ 300-400 ವಂದೇ ಭಾರತ್ ರೈಲುಗಳು, ರೈಲ್ವೆ ಮಾರ್ಗದ ವಿದ್ಯುದೀಕರಣ, ಸಿಗ್ನಲಿಂಗ್ ವ್ಯವಸ್ಥೆ, ಸರಕು ಸಾಗಣೆ ಕಾರಿಡಾರ್ ನಿರ್ಮಾಣ ಮುಂತಾದ ಘೋಷಣೆಗಳನ್ನು ನಿರೀಕ್ಷೆ ಮಾಡಲಾಗಿದೆ. ಮಧ್ಯಂತರ ಬಜೆಟ್ ಆದ ಕಾರಣ ಜನಪ್ರಿಯ ಯೋಜನೆಗಳ ಘೋಷಣೆಯಾಗಲಿದೆಯೇ? ಎಂಬುದೇ ಕುತೂಹಲವಾಗಿದೆ.

ಭಾರತೀಯ ರೈಲ್ವೆ ವಂದೇ ಭಾರತ್ ರೈಲುಗಳಿಗೆ ಸಿಕ್ಕ ಪ್ರಯಾಣಿಕರ ಬೆಂಬಲ ನೋಡಿ ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಿ ರೈಲನ್ನು ಮಾರ್ಪಾಡು ಮಾಡಲು ಚಿಂತನೆ ನಡೆಸಿದೆ. ಅಲ್ಲದೇ ದೂರದ ನಗರಗಳನ್ನು ಸಂಪರ್ಕಿಸಲು ವಂದೇ ಭಾರತ್ ಸ್ಲೀಪರ್ ಮಾದರಿಯ ರೈಲುಗಳನ್ನು ಸಹ ತಯಾರು ಮಾಡಲಾಗುತ್ತಿದ್ದು, 2024ರಲ್ಲಿ ಇವು ಸಂಚಾರ ಆರಂಭಿಸಲಿವೆ.

ರೈಲ್ವೆ ಬಜೆಟ್‌ನ ಗಾತ್ರ 2024-25ರಲ್ಲಿ 3 ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ. ರೈಲ್ವೆಯ ಖಾಸಗೀಕರಣದ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡಲಾಗುತ್ತದೆಯೇ? ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+