ಮೋದಿ ಜೊತೆ 30 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ: ಯಾರಿಗೆ ಸಿಗಲಿದೆ ಅವಕಾಶ? ಇಲ್ಲಿದೆ ಪಟ್ಟಿ
ನವದೆಹಲಿ: ತೀಸ್ರೀ ಬಾರ್ ಮೋದಿ ಸರ್ಕಾರ್ ಎಂಬ ಬಿಜೆಪಿಯ ನಿನಾದ ಕಡೆಗೂ ನಿಜವಾಗುತ್ತಿದೆ. ಜವಾಹರಲಾಲ್ ನೆಹರು ನಂತರ ಭಾರತದ ಇತಿಹಾಸದಲ್ಲಿ ಎರಡನೇ ವ್ಯಕ್ತಿಯಾಗಿ ಸತತ ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುತ್ತಾರೆ . ಜೂನ್ 9 ರ ಸಂಜೆ 7:15ಕ್ಕೆ ಸರಿಯಾಗಿ ರಾಷ್ಟ್ರಪತಿ ಭವನದಲ್ಲಿ ಮೋದಿ ಅವರು ದೇಶದ ಪ್ರಧಾನಿಯಾಗಿ ಸತತ ಮೂರನೇ ಬಾರಿ ಪದಗ್ರಹಣ ಮಾಡಲಿದ್ದಾರೆ.
ಪ್ರಧಾನಿ ಮೋದಿ ಜೊತೆಗೆ ಅವರ ನೂತನ ಸಚಿವ ಸಂಪುಟವೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿ, ಚಂದ್ರಬಾಬು ನಾಯ್ಡು ಅವರ ಟಿಡಿಪಿ, ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ನಡುವೆ ನಾಯಕರು ಹಲವು ಪ್ರಮುಖ ಖಾತೆಗಳ ಮೇಲೆ ಕಣ್ಣೀಟ್ಟಿದ್ದು, ದೇಶದಲ್ಲಿ ಮೈತ್ರಿ ಸರ್ಕಾರದ ಶಕೆ ಮತ್ತೆ ಆರಂಭವಾಗಿದೆ.

NDTV ಯ ವರದಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ 'ಸುಮಾರು 30 ಸಚಿವರು' ಪ್ರಧಾನಿ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಒಟ್ಟು ಎರಡು ಹಂತಗಳಲ್ಲಿ ಸಂಪುಟ ರಚನೆಯಾಗುವ ಸಾಧ್ಯತೆಯಿದ್ದು ಪ್ರಮಾಣವಚನ ಸಮಾರಂಭಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳು ನಡೆದಿವೆ. ಪೂರ್ಣ ಪ್ರಮಾಣದ ಮಂತ್ರಿಮಂಡಲದ ಬಲವು 78 ಮತ್ತು 81 ರ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ.
ಗೃಹ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳಂತಹ ಮಹತ್ವದ ಖಾತೆಗಳನ್ನು ಬಿಜೆಪಿ ಇಟ್ಟುಕೊಳ್ಳಲಿದ್ದು ಉಕ್ಕು, ನಾಗರಿಕ ವಿಮಾನಯಾನ ಮತ್ತು ಕಲ್ಲಿದ್ದಲು ಮುಂತಾದ ಖಾತೆಗಳು ಮಿತ್ರ ಪಕ್ಷಗಳಿಗೆ ಸಿಗುವ ಸಾಧ್ಯತೆಯಿದೆ. ಇಂದು ಬೆಳಗ್ಗೆಯಿಂದ ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರಿಗೆ ಸರ್ಕಾರದಿಂದ ಕರೆಗಳು ಬರುವ ನಿರೀಕ್ಷೆಯಿದೆ.
ಮೈತ್ರಿಯ ಭಾಗವಾಗಿರುವ ವಿವಿಧ ರಾಜಕೀಯ ಪಕ್ಷಗಳಿಂದ ವಿಭಿನ್ನ ಬೇಡಿಕೆಗಳಿದ್ದರೂ, ಗೃಹ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ 'ದೊಡ್ಡ ನಾಲ್ಕು' ಸಚಿವಾಲಯಗಳು ಭಾರತೀಯ ಜನತಾ ಪಕ್ಷ (ಬಿಜೆಪಿ) ಯಲ್ಲಿಯೇ ಇರುತ್ತವೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಎನ್‌ಡಿಟಿವಿ ವರದಿಯ ಪ್ರಕಾರ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಸಂಪುಟದಲ್ಲಿ ನಾಲ್ಕು ಖಾತೆಗಳನ್ನು ಪಡೆಯಲಿದೆ ಮತ್ತು ನಾಯಕರು ರಾಮ್ ಮೋಹನ್ ನಾಯ್ಡು, ಹರೀಶ್ ಬಾಲಯೋಗಿ ಮತ್ತು ದಗ್ಗುಮಲ್ಲ ಪ್ರಸಾದ್ ಆಗಿರಬಹುದು ಎನ್ನಲಾಗಿದೆ.
ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ (ಜೆಡಿಯು) ಎರಡು ಸ್ಥಾನಗಳನ್ನು ಪಡೆಯಬಹುದು ಮತ್ತು ನಾಯಕರು ರಾಮ್ ನಾಥ್ ಠಾಕೂರ್ ಮತ್ತು ಲಾಲಾ ಸಿಂಗ್ ಅವಕಾಶ ಸಿಗಬಹುದು ಎನ್ನಲಾಗಿದ್ದು, ಕ್ಯಾಬಿನೆಟ್‌ನ ಆಯ್ಕೆಯಾದವರಿಗೆ ಇಂದು ಬೆಳಿಗ್ಗೆ ಕರೆಗಳು ಬರಬಹುದು ಎಂದು ನಿರೀಕ್ಷೆಯಿದೆ.
ಮೋದಿ 3.0 ಸರ್ಕಾರದ ಕ್ಯಾಬಿನೆಟ್ ಮಂತ್ರಿಗಳ ಪಟ್ಟಿ
* ಅಮಿತ್ ಶಾ: ಗೃಹ ಸಚಿವಾಲಯ
* ರಾಜನಾಥ್ ಸಿಂಗ್ : ರಕ್ಷಣಾ ಸಚಿವಾಲಯ
* ನಿರ್ಮಲಾ ಸೀತಾರಾಮನ್ : ಹಣಕಾಸು ಸಚಿವಾಲಯ
* ಸುಬ್ರಮಣ್ಯಂ ಜೈಶಂಕರ್: ವಿದೇಶಾಂಗ ವ್ಯವಹಾರಗಳ ಸಚಿವಾಲಯ
* ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
* ಪಿಯೂಷ್ ಗೋಯಲ್: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
* ಅಶ್ವಿನಿ ವೈಷ್ಣವ್: ರೈಲ್ವೆ ಸಚಿವಾಲಯ
* ಅನುಪ್ರಿಯಾ ಸಿಂಗ್ ಪಟೇಲ್
* ಸ್ಮೃತಿ ಜುಬಿನ್ ಇರಾನಿ
* ಶಿವರಾಜ್ ಸಿಂಗ್ ಚೌಹಾಣ್
* ಜ್ಯೋತಿರಾದಿತ್ಯ ಸಿಂಧಿಯಾ
* ಅರ್ಜುನ್ ಮುಂಡಾ
* ಹರ್ದೀಪ್ ಸಿಂಗ್ ಪುರಿ
* ಅನುರಾಗ್ ಠಾಕೂರ್
* ಪುರುಷೋತ್ತಮ್ ರೂಪಾಲಾ
* ಪ್ರಹ್ಲಾದ್ ಜೋಶಿ
* ನರೇಂದ್ರ ಸಿಂಗ್ ತೋಮರ್
* ಗಿರಿರಾಜ್ ಸಿಂಗ್
* ಚಿರಾಗ್ ಪಾಸ್ವಾನ್
* ಲಾಲ್ಲನ್ ಸಿಂಗ್
* ಅನುಪ್ರಿಯಾ ಪಟೇಲ್
* ಜೀತನ್ ರಾಮ್ ಮಾಂಝಿ
* ಹೆಚ್ ಡಿ ಕುಮಾರಸ್ವಾಮಿ












Click it and Unblock the Notifications