ರಾಷ್ಟ್ರಪತಿಗಳ ವಿಶ್ರಾಂತಿಗೃಹ ನೋಡಲು ಕೋವಿಂದ್ ರಿಗೆ ಅನುಮತಿ ಸಿಕ್ಕಿರಲಿಲ್ಲ

ಶಿಮ್ಲಾ, ಜೂನ್ 20: ಅಷ್ಟೇನೂ ಪ್ರಚಾರದಲ್ಲಿ ಕಾಣಿಸಿಕೊಳ್ಳದ ರಾಮ್ ನಾಥ್ ಕೋವಿಂದ್ ರ ಬಗ್ಗೆ ದಿಢೀರನೆ ಸುದ್ದಿ ಹರಿದಾಡಲು ಆರಂಭಿಸಿದೆ. ಮೂರು ವಾರಗಳ ಹಿಂದಷ್ಟೇ ಬಿಹಾರದ ರಾಜ್ಯಪಾಲರಾಗಿ ಶಿಮ್ಲಾಗೆ ತೆರಳಿದ್ದ ಕೋವಿಂದ್ ರನ್ನು ಅಲ್ಲಿರುವ ರಾಷ್ಟ್ರಪತಿಗಳ ವಿಶ್ರಾಂತಿ ಗೃಹವನ್ನು ನೋಡಲು ಅನುಮತಿ ನಿರಾಕರಿಸಲಾಗಿತ್ತು.

ಕುಟುಂಬ ಸಮೇತ ಅಲ್ಲಿಗೆ ತೆರಳಿದ್ದವರಿಗೆ ಪೂರ್ವಾನುಮತಿ ಇಲ್ಲ ಎಂಬ ಕಾರಣಕ್ಕೆ ಪ್ರವೇಶ ನೀಡಿರಲಿಲ್ಲ. ಅಚ್ಚರಿ ಅಂದರೆ, ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ಆಗಿರುವ ಅವರು, ಆ ಹುದ್ದೆಗೆ ಏರಿದರೆ ಶಿಮ್ಲಾದ ಮಶೋಬ್ರಾದಲ್ಲಿರುವ ವಿಶ್ರಾಂತಿ ಗೃಹದ ಸುಪರ್ದಿ ವಹಿಸಿಕೊಳ್ಳುತ್ತಾರೆ.

3 Weeks Ago, Ram Nath Kovind Was Denied Entry To President's Shimla Retreat

ಕೋವಿಂದ್ ಅವರು ತಮ್ಮ ಕುಟುಂಬದ ಜತೆಗೆ ಮೇನಲ್ಲಿ ಶಿಮ್ಲಾಗೆ ತೆರಳಿದ್ದರು. ರಾಜ್ಯಪಾಲರು ಮತ್ತು ಅವರ ಪತ್ನಿ ಅಧಿಕೃತವಾದ ಕಾರಿನಲ್ಲಿ ಹೋಗಿದ್ದರೆ, ಕುಟುಂಬ ಸದಸ್ಯರು ಖಾಸಗಿ ಕಾರುಗಳನ್ನು ಬಳಸಿದ್ದರು ಎಂಬುದನ್ನು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶಿಮ್ಲಾಗೆ ಹದಿನೈದು ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರಪತಿಗಳ ವಿಶ್ರಾಂತಿ ಗೃಹದ ಬಳಿ ಹೋದಾಗ ಅಲ್ಲಿಗೆ ಭೇಟಿ ನೀಡಲು ಕೋವಿಂದ್ ಕೇಳಿದ್ದಾರೆ. ಆದರೆ ವಿಪರೀತ ಸುರಕ್ಷತಾ ವಲಯವಾದ್ದರಿಂದ ಅವರಿಗೆ ಅನುಮತಿ ನಿರಾಕರಿಸಲಾಗಿದೆ. ರಾಷ್ಟ್ರಪತಿಗಳು ವರ್ಷಕ್ಕೆ ಒಮ್ಮೆ ಇಲ್ಲಿಗೆ ಭೇಟಿ ನೀಡುತ್ತಾರೆ. ಆಗ ಅವರ ಮುಖ್ಯ ಕಚೇರಿಯೇ ಇಲ್ಲಿಗೆ ಸ್ಥಳಾಂತರವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+