ಬೆಳ್ಳಂಬೆಳಗ್ಗೆ ನವಿ ಮುಂಬೈನ ಶಹಬಾಜ್ ಗ್ರಾಮದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ; ಅಪ್‌ಡೇಟ್ ಇಲ್ಲಿದೆ
ಮುಂಬೈ, ಜುಲೈ. 27: ಶನಿವಾರ ಬೆಳಗ್ಗೆ ನವಿ ಮುಂಬೈನ ಶಹಬಾಜ್ ಗ್ರಾಮದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ ಇಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು, ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಮುಂಜಾನೆ 5 ಗಂಟೆ ಸುಮಾರಿಗೆ ಕಟ್ಟಡ ಕುಸಿದಿದೆ ಎಂದು ನವಿ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಕೈಲಾಸ್ ಶಿಂಧೆ ತಿಳಿಸಿದ್ದಾರೆ. "ಇದು ಜಿ+3 ಕಟ್ಟಡ. ಶಹಬಾಜ್ ಗ್ರಾಮವು ಬೇಲಾಪುರ ವಾರ್ಡ್‌ಗೆ ಒಳಪಡುತ್ತದೆ. ಕಟ್ಟಡದಲ್ಲಿ 13 ಫ್ಲಾಟ್‌ಗಳಿದ್ದವು. ಅವಶೇಷಗಳಲ್ಲಿ ಸಿಲುಕ್ಕಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಮತ್ತು ಮತ್ತಿಬ್ಬರು ಸಿಲುಕಿರುವ ಸಾಧ್ಯತೆಯಿದೆ. ಎನ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಕೈಲಾಸ್ ಶಿಂಧೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಅವಶೇಷಗಳಲ್ಲಿ ಸಿಲುಕಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಕೈಲಾಸ್ ಶಿಂಧೆ ತಿಳಿಸಿದ್ದಾರೆ. "ಇದು 10 ವರ್ಷಗಳ ಹಳೆಯ ಕಟ್ಟಡ. ತನಿಖೆ ನಡೆಯುತ್ತಿದೆ. ಕಟ್ಟಡದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ನವಿ ಮುಂಬೈ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ದಕ್ಷಿಣ ಮುಂಬೈನಲ್ಲಿ ನಾಲ್ಕು ಅಂತಸ್ತಿನ ವಸತಿ ಕಟ್ಟಡದ ಬಾಲ್ಕನಿಯ ಒಂದು ಭಾಗವು ಕುಸಿದುಬಿದ್ದ ನಂತರ 80 ವರ್ಷದ ಮಹಿಳೆ ಸಾವನ್ನಪ್ಪಿದ ಒಂದು ವಾರದ ನಂತರ ಈ ಘಟನೆ ನಡೆದಿದೆ. ಅಂದಿನ ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ. ಕಳೆದ ವಾರ ಶನಿವಾರ ಘಟನೆ ನಡೆದ ರುಬಿನ್ನಿಸಾ ಮಂಜಿಲ್ ಗ್ರಾಂಟ್ ರೋಡ್ ರೈಲು ನಿಲ್ದಾಣದ ಬಳಿಯ ಸ್ಲೀಟರ್ ರಸ್ತೆಯಲ್ಲಿ ಬಾಲ್ಕನಿ ಕುಸಿತದ ಘಟನೆ ನಡೆದಿತ್ತು.
#WATCH | Maharashtra: A three-storey building collapsed in Navi Mumbai's Shahbaz village; several people are feared trapped.
— ANI (@ANI) July 27, 2024
Police, fire brigade and NDRF present at the spot. Rescue operations are underway. More details awaited. pic.twitter.com/RL4bDeBRi0
ಗುಜರಾತ್‌ನಲ್ಲಿ 3 ಅಂತಸ್ತಿನ ಕಟ್ಟಡ ಕುಸಿದು, 3 ಸಾವು
ಬುಧವಾರ, ರಾಜ್ಯದ ಸೌರಾಷ್ಟ್ರ ಪ್ರದೇಶದಲ್ಲಿ ಭಾರೀ ಮಳೆಯ ನಡುವೆ ಗುಜರಾತ್‌ನ ದೇವಭೂಮಿ ದ್ವಾರಕಾ ಜಿಲ್ಲೆಯ ಜಮ್ ಖಂಭಾಲಿಯಾ ಪಟ್ಟಣದಲ್ಲಿ ಶಿಥಿಲಗೊಂಡ ಮೂರು ಅಂತಸ್ತಿನ ಕಟ್ಟಡ ಕುಸಿದು ವೃದ್ಧೆ ಮತ್ತು ಅವರ ಇಬ್ಬರು ಮೊಮ್ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣದ ಗಗ್ವಾನಿ ಫಾಲಿ ಪ್ರದೇಶದಲ್ಲಿ ಮಂಗಳವಾರ ಸಂಜೆ ಈ ಘಟನೆ ಸಂಭವಿಸಿದ್ದು, ಮಧ್ಯರಾತ್ರಿಯವರೆಗೆ ಮುಂದುವರಿದ ಸುಮಾರು ಆರು ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ನಂತರ ಮೂವರು ಸಂತ್ರಸ್ತರ ಮೃತದೇಹಗಳನ್ನು ಹೊರತರಲಾಯಿತು ಮತ್ತು ಐವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಎನ್‌ಡಿಆರ್‌ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಭಾರೀ ಮಳೆಯ ಪರಿಣಾಮವಾಗಿ ಕಟ್ಟಡ ಕುಸಿದಿತ್ತು. ಮೃತರನ್ನು ಕೇಶರ್ಬೆನ್ ಕಂಜಾರಿಯಾ (65), ಪ್ರೀತಿಬೆನ್ ಕಂಜಾರಿಯಾ (15) ಮತ್ತು ಪಾಯಲ್ಬೆನ್ ಕಂಜಾರಿಯಾ (18) ಎಂದು ಗುರುತಿಸಲಾಗಿದೆ.












Click it and Unblock the Notifications