ಅಸ್ಸಾಂಮಿನಲ್ಲಿ ಬಸ್ ಅಪಘಾತ: ಮೂವರು ಬಲಿ
ಕಾರ್ಬಿ ಅಂಗ್ಲಾಂಗ್(ಅಸ್ಸಾಂ), ಜನವರಿ 30: ಅಸ್ಸಾಮಿನ ಕಾರ್ಬಿ ಅಂಗ್ಲಾಂಗ್ ಜಿಲ್ಲೆಯ ಭೆಲುಘಾಟ್ ಪಿಕ್ ನಿಕ್ ಸ್ಪಾಟ್ ನಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಮೂವರು ಮೃತರಾಗಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಕಾರಣ ಈ ದುರ್ಘಟನೆ ಸಂಭವಿಸಿದೆ. ಮೃತರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ನಿನ್ನೆ(ಜ.29) ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಗೆ ಹೊರಟಿದ್ದ ಬಸ್ಸೊಂದು ಸೇತುವೆ ಮುರಿದು ಕಣಿವೆಗೆ ಉರುಳಿದ ಕಾರಣ 37 ಜನ ಮೃತರಾಗಿದ್ದರು. ಈ ದುರ್ಘಟನೆ ಸಂಭವಿಸಿದ ಮರು ದಿನವೇ ಅಸ್ಸಾಮಿನಲ್ಲಿ ಮತ್ತೊಂದು ಬಸ್ ಅಪಘಾತ ಸಂಭವಿಸಿದೆ.

ಜ.16 ರಂದು ಮಹಾರಾಷ್ಟ್ರದ ಕೊಲ್ಹಾಪುರದ ಪಂಚಗಂಗಾ ನದಿಗೆ ಬಸ್ಸು ಉರುಳಿದ ಪರಿಣಾಮ 13 ಜನ ಮೃತರಾಗಿದ್ದರು.











Click it and Unblock the Notifications