ಕೊಚ್ಚಿ: ಪನಾಮಾ ಹಡಗು ಡಿಕ್ಕಿ, ಮೂವರು ಸಾವು, ಹಲವರಿಗೆ ಗಾಯ
ಕೊಚ್ಚಿ, ಜೂನ್ 11 : ಭಾನುವಾರ ನಸುಕಿನ ವೇಳೆ ಪನಾಮಾದ ಹಡಗೊಂದು ಕೇರಳದ ಮೀನುಗಾರರ ದೋಣಿಗೆ ಢಿಕ್ಕಿಯಾದ ಪರಿಣಾಮ ಇಬ್ಬರು ಮೀನುಗಾರರು ಸಾವನ್ನಪ್ಪಿ, 11 ಮಂದಿ ಗಂಭೀರವಾಗಿ ಗಾಯಗೊಂಡ ದುರ್ಘಟನೆ ಕೊಚ್ಚಿ ಕಡಲತೀರದಲ್ಲಿ ಸಂಭವಿಸಿದೆ.
ಬೇರೊಂದು ಮೀನುಗಾರಿಕಾ ದೋಣಿಯ ಸಿಬ್ಬಂದಿಗಳು ಜಖಂಗೊಂಡ ಕೇರಳದ ಮೀನುಗಾರನ್ನು ರಕ್ಷಿಸಿದ್ದಾರೆ. ಅವಘಡದಲ್ಲಿ ಓರ್ವ ಮೀನುಗಾರ ನಾಪತ್ತೆಯಾಗಿದ್ದಾನೆ.

ಕಾರ್ಯಾಚರಣೆಗಿಳಿದ ಕರಾವಳಿ ರಕ್ಷಣಾ ಪಡೆಗಳು ಸಮುದ್ರದಲ್ಲಿ ಭಾರೀ ಶೋಧ ನಡೆಸಿ ಪನಾಮಾದ ಅಂಬೆರ್ ಹಡಗನ್ನು ಸಿಬ್ಬಂದಿಗಳ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Kerala: 3 fishermen dead, 1 missing after 'Amber', a Panama-based ship hit a fishing boat 12 nautical miles from Kochi pic.twitter.com/ssMPQko6kk
— ANI (@ANI_news) June 11, 2017
ಗಾಯಾಳುಗಳನ್ನು ಕೊಚ್ಚಿಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ನಾಪತ್ತೆಯಾದ ಮೀನುಗಾರನ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.












Click it and Unblock the Notifications