ಜಮ್ಮು-ಕಾಶ್ಮೀರ: ಎನ್ ಕೌಂಟರ್ ಗೆ ಮೂರು ಭಯೋತ್ಪಾದಕರು ಬಲಿ
ಅಮರ್ಗರ್(ಜಮ್ಮು-ಕಾಶ್ಮೀರ), ಆಗಸ್ಟ್ 5: ಜಮ್ಮು ಕಾಶ್ಮೀರದ ಸೋಪೋರ್ ನ ಅಮರ್ಗರ್ ಎಂಬಲ್ಲಿ ಇಂದು (ಆಗಸ್ಟ್ 5) ನಸುಕಿನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಕಾಶ್ಮೀರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಂದು ಬೆಳಗ್ಗಿನ ಜಾವ 2 ಗಂಟೆಯಿಂದಲೇ ಭಯೋತ್ಪಾದಕರ ದಮನ ಕಾರ್ಯಾಚರಣೆ ನಡೆದಿದ್ದು, ನಸುಕಿನ 5:30ರವರೆಗೂ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದವರೆಂದು ಅಂದಾಜಿಸಲಾದ ಮೂವರು ಭಯೋತ್ಪಾದಕರನ್ನು ಸದೆಬಡಿಯಲಾಗಿದೆ.

ಮೃತ ಭಯೋತ್ಪಾದಕರಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.











Click it and Unblock the Notifications